ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತಗೊಂಡಿದ್ದು, ಬೆಳೆಗಾರನಿಗೆ ಕಣ್ಣೀರು ತರಿಸಿದೆ. ಕೆಲ ತಿಂಗಳ ಹಿಂದೆ ಕೆ.ಜಿಗೆ 150 ರೂ ತಲುಪಿದ್ದ ಈರುಳ್ಳಿದ ದರ ಇದೀಗ 50 ಕೆ.ಜಿ ಮೂಟೆಗೆ 250 ರೂಪಾಯಿಗೆ ತಲುಪಿದೆ.
ನಗರದ ಯಶವಂತಪುರ ಈರುಳ್ಳಿ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ಈರುಳ್ಳಿ 100 ಕೆ.ಜಿ ಮೂಟೆಗೆ 500 ರೂ. ನಿಂದ 1500 ರೂ. ಬೆಲೆಯಿದ್ದರೆ, ಕರ್ನಾಟಕದ ಈರುಳ್ಳಿ ಸಗಟು ದರ 100 ಕೆ.ಜಿ ಮೂಟೆಗೆ 500 ರೂ. ನಿಂದ 1,400 ರೂ. ದರವಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ. ಉದಯ್ ಶಂಕರ್ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಈ ಬಾರಿ ಉತ್ತಮ ಈರುಳ್ಳಿ ಬೆಳೆ ಬಂದಿದೆ. ಕಳೆದ ವರ್ಷ ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿತ್ತು. ಈ ಬಾರಿ ಮಾರುಕಟ್ಟೆಗೆ ಚೆಳ್ಳಕೆರೆ , ಚಿತ್ರದುರ್ಗ, ಗದಗ ಮತ್ತಿತರ ಭಾಗಗಳಿಂದಲೂ ಈರುಳ್ಳಿ ಬರುತ್ತಿದೆ ಎಂದು ಅವರು ತಿಳಿಸಿದರು.
ಜನವರಿಯಲ್ಲಿ 100 ಕೆ.ಜಿ ಈರುಳ್ಳಿಗೆ 2,700 ರಿಂದ 2,800 ರೂ. ವರೆಗೆ ಇತ್ತು. ಮಾರ್ಚ್ನಲ್ಲಿ ದರ ನೆಲಕಚ್ಚಿದೆ.
ಇದನ್ನೂ ಓದಿ: ದಾಖಲೆ ಬರೆದ ಮೆಗಾ ಲೋಕ್ ಅದಾಲತ್: ಒಂದೇ ದಿನ 3 ಲಕ್ಷ ಪ್ರಕರಣ ಇತ್ಯರ್ಥ