ಬೆಂಗಳೂರು: ಮಾರಣಾಂತಿಕ ಕಾಯಿಲೆಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಇಬ್ಬರು ಬಾಲಕರ ಇಚ್ಛೆಯಂತೆ ಒಂದು ದಿನ ಅವರಿಗೆ ಪೊಲೀಸ್ ಆಫೀಸರ್ ಆಗಿ ಸೇವೆ ಸಲ್ಲಿಸಲು ಅವಕಾಶವನ್ನು ಪೊಲೀಸ್ ಇಲಾಖೆ ನೀಡಿತ್ತು. ಈ ಮೂಲಕ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಿಥಿಲೇಶ್ (14ವರ್ಷ) ಹಾಗೂ ಮಹಮ್ಮದ್ ಸಲ್ಮಾನ್ ಎಂಬ ಇಬ್ಬರು ಬಾಲಕರು ಮಾರಣಾಂತಿಕ ವ್ಯಾಧಿಗಳಿಂದಾಗಿ ಕಿದ್ವಾಯಿ ಹಾಗೂ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಹೊಸೂರು ಮೂಲದ ಮಿಥಿಲೇಶ್ ಹಾಗೂ ಕೇರಳದ ಕೊಟ್ಟಾಯಂ ಮೂಲದ ಮೊಹಮ್ಮದ್ ಸಲ್ಮಾನ್ ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಗಳಾಗಬೇಕು ಎಂದು ಕನಸು ಕಂಡಿದ್ದವರು. ಬಾಲಕರಿಬ್ಬರ ಬಗ್ಗೆ 'ಮೇಕ್ ಎ ವಿಶ್ ಫೌಂಡೇಶನ್' ಆಗ್ನೇಯ ವಿಭಾಗದ ಡಿಸಿಪಿ ಸಿ. ಕೆ ಬಾಬಾ ಅವರ ಗಮನಕ್ಕೆ ತಂದಿದ್ದು, ಇಬ್ಬರಿಗೂ ಕೋರಮಂಗಲ ಠಾಣೆಗೆ ಕರೆಯಿಸಿ ಒಂದು ದಿನದ ಠಾಣಾಧಿಕಾರಿಗಳ ಗೌರವ ಸಮರ್ಪಿಸಿದ್ದಾರೆ.
ಓದಿ: ಸಿದ್ದರಾಮಯ್ಯನವ್ರು ಬಿಜೆಪಿಗೆ ಮಾತ್ರ ಹೋಗಬೇಡ ಎಂದಿದ್ದರು - ಜಿ. ಟಿ ದೇವೇಗೌಡ