ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯವ್ಯಾಪಿ ಆರೋಗ್ಯ ಸಮೀಕ್ಷೆಗೆ ಸರ್ಕಾರ ಆದೇಶ ಹೊರಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಬುಧವಾರದಿಂದ ರಾಜ್ಯವ್ಯಾಪಿ ILI/SARI ಕೇಸ್ಗಳ ಸಮೀಕ್ಷೆ ನಡೆಯಲಿದೆ.
ಮನೆ ಮನೆಗೆ ತೆರಳಿ ಆರೋಗ್ಯ ಸರ್ವೇ ಕುರಿತು ಸುತ್ತೋಲೆ ಹೊರಡಿಸಿದ ಸರ್ಕಾರ, ILI/SARI ( influenza-like illness)/ Severe acute respiratory infections) ILI ಹಾಗು SARI ಕೇಸ್ಗಳ ಸಮೀಕ್ಷೆ ನಡೆಸುವಂತೆ ತಿಳಿಸಿದೆ.
ಡಿಸೆಂಬರ್ 29 ರಿಂದ ಜನವರಿ 15, 2022ರವರೆಗೆ 18 ದಿನಗಳು ಸಮೀಕ್ಷೆ ನಡೆಯಲಿದ್ದು, ಪ್ರತಿಯೊಂದು ಜಿಲ್ಲೆಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸಿದ ಬಳಿಕ ವರದಿಯನ್ನ IHLP (Integrated Health Information Platform) ಪೋರ್ಟಲ್ನಲ್ಲಿ ನಮೂದಿಸಲು ಸೂಚನೆ ನೀಡಲಾಗಿದೆ.
ಓದಿ: 2022ರಲ್ಲಿ ವಿಶ್ವಕ್ಕೆ ಕಾದಿದೆ ಮತ್ತೊಂದು ಸಾಂಕ್ರಾಮಿಕ ರೋಗ : ದಿವ್ಯಾಂಗ ಚೇತನ ಬಾಬಾ ವಂಗಾ ಭವಿಷ್ಯ