ETV Bharat / state

ಬೆಂಗಳೂರಿನಲ್ಲಿ ರಸ್ತೆ ಬದಿ ಸಸಿ ಮಾರಾಟ ಮಾಡುವ ವೃದ್ಧನ ಫೋಟೋ ವೈರಲ್​, ಬಾಲಿವುಡ್​ ನಟನಿಂದ ಸ್ಪಂದನೆ!

ಬೆಂಗಳೂರಿನಲ್ಲಿ ವೃದ್ಧನೋರ್ವ ಸುಡು ಬಿಸಿಲಿನಲ್ಲೂ ಸಸಿ ಮಾರಾಟ ಮಾಡ್ತಿರುವ ಫೋಟೋ ವೈರಲ್​ ಆಗಿದ್ದು, ಇದೀಗ ಆತನಿಗೆ ಸಹಾಯ ಮಾಡುವ ಕೂಗು ಕೇಳಿ ಬರುತ್ತಿದೆ.

author img

By

Published : Oct 27, 2020, 12:50 AM IST

Old age man sales plants in Bengaluru
Old age man sales plants in Bengaluru

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಿವಿಧ ಬಗೆಯ ಸಸಿಗಳನ್ನು ಇಟ್ಟು ಮಾರಾಟ ಮಾಡುವ ವೃದ್ಧನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನಿಗೆ ಸಹಾಯ ಮಾಡುವಂತೆ ಬಾಲಿವುಡ್ ನಟರು ಟ್ವೀಟ್ ಮಾಡಿ, ಸಹಾಯಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್​ ಬಳಿ ವೃದ್ಧ ರೇವಣಸಿದ್ದಪ್ಪ ಸಸಿ ಮಾರಾಟ ಮಾಡ್ತಿದ್ದು, ಪ್ರತಿ ಸಸಿಯೊಂದಕ್ಕೆ 10ರಿಂದ 30ರೂ.ವರೆಗೆ ಮಾರುತ್ತಿದ್ದಾರೆ.

Old age man sales plants in Bengaluru
ಬಾಲಿವುಡ್​ ನಟನಿಂದ ಸ್ಪಂದನೆ

ಈ ವೃದ್ಧನ ಬಗ್ಗೆ ಐಂ ಶುಭಂ ಎಂಬುವರು ತಮ್ಮ ಟ್ವೀಟರ್​​ ಖಾತೆಯಿಂದ ಫೋಟೋ ಟ್ವೀಟ್​ ಮಾಡಿದ್ದಾರೆ. ಜತೆಗೆ ಇವರಿಗೆ ಸಹಾಯ ಮಾಡಿ ಎಂದು ಬಾಲಿವುಡ್​ ನಟ ಸೋನ್ ಸೋದ್, ಮಾಧವನ್, ಕಾಂಚನಾ ಗುಪ್ತ ಹಾಗೂ ಪ್ರವೀಣ್ ಕಸ್ವನ್ ಎಂಬುವರಿಗೆ ಟ್ಯಾಗ್ ಮಾಡಲಾಗಿದೆ.

  • Hey Bangalore .. do show some love .. he sits in front of Wular Fashion factory, JP Nagar, Sarakki Signal, Kanakapura Road, Bangalore. https://t.co/rBFyQcbZAb

    — Randeep Hooda (@RandeepHooda) October 26, 2020 " class="align-text-top noRightClick twitterSection" data=" ">

ವೃದ್ಧ ಸಸಿ ಮಾರಾಟ ಮಾಡುವ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪೋಸ್ಟ್​ಗೆ ನಟ ರಣದೀಪ್ ಹೂಡಾ ಪ್ರತಿಕ್ರಿಯಿಸಿದ್ದಾರೆ. 'ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ಮಾಡಿ. ಇವರು ವುಲಾರ್ ಪ್ಯಾಷನ್ ಫ್ಯಾಕ್ಟರಿ, ಜೆ.ಪಿ.ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರೋಡ್ ಬೆಂಗಳೂರು ವಿಳಾಸದಲ್ಲಿ ಸಸಿ ಮಾರಾಟ ಮಾಡುತ್ತಿದ್ದಾರೆ ಎಂದು ಮನವಿ ಮಾಡಿದ್ದಾರೆ.

ಇನ್ನು ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಕಾಕಾ ಕಾ ಡಾಭಾ ವೃದ್ಧನ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಆತನಿಗೆ ಎಲ್ಲಡೆಯಿಂದ ಸಹಾಯಹಸ್ತ ಹರಿದು ಬಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.