ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅದರಲ್ಲಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಡ್ರೈವರ್ಗಳಿಗೆ 3 ಸಾವಿರ ರೂ. ಘೋಷಣೆ ಮಾಡಿದೆ.
ಪರವಾನಗಿ ಹೊಂದಿದ ಹಾಗೂ ನೋಂದಣಿ ಮಾಡಿಸಿದ 2.10 ಲಕ್ಷ ಫಲಾನುಭವಿಗಳಿಗೆ 3 ಸಾವಿರ ರೂ. ಸಹಾಯಧನ ನೀಡುತ್ತಿದೆ. ಆದರೆ ಈ ಕುರಿತು ಓಲಾ-ಉಬರ್ ಡ್ರೈವರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಯಾವ ಕಷ್ಟಕ್ಕಾಗಿ 3 ಸಾವಿರ ರೂ. ಬಳಸಬೇಕು ಎಂದು ಅವರೇ ನಮಗೆ ಹೇಳಬೇಕು. ಇವತ್ತಿನ ದಿನನಿತ್ಯ ಬಳಸುವ ವಸ್ತುಗಳು ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟ, ಈ ಪ್ಯಾಕೇಜ್ ಘೋಷಣೆ ನಿರಾಶಾದಾಯಕವಾಗಿದೆ ಎಂದು ಕಿಡಿಕಾರಿದರು.
ನಾವು ಕೇಳಿದ್ದು 10,000 ರೂ. ಸಹಾಯಧನ. ಅಲ್ಲದೇ ವಾಹನಗಳ ಮೇಲಿನ ಸಾಲದ ಬಡ್ಡಿ ದರ ಮನ್ನಾ ಮಾಡುವಂತೆ, ದಿನಸಿ ಸಾಮಾನು ಕೊಡುವಂತೆ ಕೇಳಿದ್ದೆವು. ಆದರೆ ಅದನ್ನ ಸರ್ಕಾರ ಕಡೆಗಣಿಸಿದೆ. ಲಾಕ್ಡೌನ್ನಿಂದಾಗಿ ನಮ್ಮ ಪರಿಸ್ಥಿತಿ ಹೀನಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ಶಿಕ್ಷಕರು ಫ್ರಂಟ್ ಲೈನ್ ವಾರಿಯರ್ಸ್ ಓಕೆ, ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ ಯಾಕೆ?