ETV Bharat / state

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅಧಿಕಾರಿಗಳು, ಅಂಪೈರ್ಸ್ ಹೆಸರಿಸಿದ ಎಫ್ಐಎಚ್ : ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ಆರ್ ವಿ ರಘುಪ್ರಸಾದ್ - ETV Bharath Kannada news

ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024ಕ್ಕೆ ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್ ತಾಂತ್ರಿಕ ಪ್ರತಿನಿಧಿಗಳು, ಅಧಿಕಾರಿಗಳು, ಅಂಪೈರ್ ಮ್ಯಾನೇಜರ್‌ಗಳು, ಅಂಪೈರ್‌ಗಳು ಮತ್ತು ವೈದ್ಯಕೀಯ ಅಧಿಕಾರಿಗಳ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಕರ್ನಾಟಕದ ಆರ್ ವಿ ರಘುಪ್ರಸಾದ್ ಸ್ಥಾನ ಪಡೆದಿದ್ದಾರೆ.

Olympic Games Paris 2024
ಆರ್.ವಿ. ರಘುಪ್ರಸಾದ್
author img

By ETV Bharat Karnataka Team

Published : Sep 12, 2023, 5:28 PM IST

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024ಕ್ಕೆ ತನ್ನ ತಾಂತ್ರಿಕ ಪ್ರತಿನಿಧಿಗಳು, ಅಧಿಕಾರಿಗಳು, ಅಂಪೈರ್ ಮ್ಯಾನೇಜರ್‌ಗಳು, ಅಂಪೈರ್‌ಗಳು ಮತ್ತು ವೈದ್ಯಕೀಯ ಅಧಿಕಾರಿಗಳ ಹೆಸರನ್ನು ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್ (ಎಫ್‌ಐಹೆಚ್) ಪ್ರಕಟಿಸಿದೆ. ಪಟ್ಟಿಯಲ್ಲಿ ಕನ್ನಡಿಗ ಆರ್ ವಿ ರಘುಪ್ರಸಾದ್ ಸ್ಥಾನ ಪಡೆದಿದ್ದಾರೆ. ಅಂಪೈರ್ಸ್ ವಿಭಾಗದಲ್ಲಿರುವ ಸ್ಥಾನ ಪಡೆದಿರುವ ಅವರು ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ‌. ಲಂಡನ್ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ರಘುಪ್ರಸಾದ್, ರಿಯೋ ಒಲಿಂಪಿಕ್ಸ್‌ನ ರಿಸರ್ವ್ ಅಂಪೈರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಶೀಲಾ ಬ್ರೌನ್ (ದಕ್ಷಿಣ ಆಫ್ರಿಕಾ) ಮತ್ತು ರೋಜರ್ ಸೇಂಟ್ ರೋಸ್ (ಟ್ರಿನಿಡಾಡ್ & ಟೊಬಾಗೋ) ಅಧ್ಯಕ್ಷತೆಯ ಎಫ್‌ಐಎಚ್ ತಾಂತ್ರಿಕ ಅಧಿಕಾರಿಗಳು ಮತ್ತು ಅಂಪೈರಿಂಗ್ ಸಮಿತಿ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ತನ್ನ ತಾಂತ್ರಿಕ ಅಧಿಕಾರಿಗಳು, ಅಂಪೈರ್ಸ್ ಗಳನ್ನ ಹೆಸರಿಸಿದೆ.

  • We are delighted to announce the names of the technical delegates, technical officials, umpire managers, umpires and medical officers who are appointed to the Olympic Games #Paris2024.

    Continuing hockey’s drive towards maintaining gender equality in the sport, there will again… pic.twitter.com/3BSuOlqsFl

    — International Hockey Federation (@FIH_Hockey) September 12, 2023 " class="align-text-top noRightClick twitterSection" data=" ">

2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವುದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್​ ಸಹ ಅಧಿಕಾರಿಗಳು ಮತ್ತು ಅಂಪೈರ್​ಗಳನ್ನು ಪ್ರಕಟಿಸಿದೆ. ಹೀಗಾಗಿ ಪ್ರಕಟಿತ ಪಟ್ಟಿಯಲ್ಲಿ 50-50ರ ಪ್ರಮಾಣದಲ್ಲಿ ಆದ್ಯತೆ ನೀಡಲಾಗಿದೆ.

ಕ್ರೀಡೆಯಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳನ್ನು ಸಮಾನವಾಗಿ ಹೆಸರಿಸಲಾಗಿದ್ದು, ಈ ಕುರಿತು ಮಾತನಾಡಿದ ಎಫ್‌ಐಹೆಚ್ ಅಧ್ಯಕ್ಷ ತಯ್ಯಬ್ ಇಕ್ರಂ "ಕ್ರೀಡೆಯ ಮೇಲಿನ ಉತ್ಸಾಹದಿಂದ ತಮ್ಮ ಬಿಡುವಿನ ವೇಳೆಯಲ್ಲಿ ಗಣನೀಯ ಸಮಯ ನೀಡುವ ಮೂಲಕ‌ ಅಧಿಕಾರಿಗಳು ಮೂಲಭೂತ ಪಾತ್ರವನ್ನು ವಹಿಸುತ್ತಾರೆ. ಇದು ಅತ್ಯಂತ ಪ್ರಮುಖವಾದದ್ದು, ಜಗತ್ತಿನಲ್ಲಿ ಪ್ರತಿಯೊಬ್ಬ ಹಾಕಿ ಅಧಿಕಾರಿಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು. ಎಫ್‌ಐಎಚ್ ಪರವಾಗಿ ನಮ್ಮ ಸಂಪೂರ್ಣ ವಿಶ್ವಾಸ, ಬೆಂಬಲ ಮತ್ತು ಗೌರವದ ಭರವಸೆಯನ್ನ ನಾನು ನಿಮಗೆ ನೀಡುತ್ತೇನೆ. ಲಿಂಗ ಸಮಾನತೆಯ ತತ್ವಕ್ಕೆ ಅನುಗುಣವಾಗಿ ಅಧಿಕಾರಿಗಳ ವಿಭಜನೆ ಆಗಿರುವುದಕ್ಕೆ ನಾನು ಸಂತೋಷಪಡುತ್ತೇನೆ'' ಎಂದರು.

ಮುಂಬರುವ ಒಲಂಪಿಕ್ ಗೇಮ್ಸ್ 2024 ಜುಲೈ 26ರಿಂದ ಆಗಸ್ಟ್ 11ರ ವರೆಗೂ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿದೆ. ಕ್ರೀಡಾಕೂಟದ ಹಾಕಿ ವಿಭಾಗದಲ್ಲಿ ವಿಶ್ವದ ತಲಾ 12 ಅತ್ಯುತ್ತಮ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಸೆಣಸಾಡಲಿವೆ.

ಇದನ್ನೂ ಓದಿ: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ.. ಥಾಯ್ಲೆಂಡ್ ವಿರುದ್ಧ ಭಾರತದ ಮೊದಲ ಪಂದ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.