ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಕೋವಿಡ್ ಮುನ್ನೆಚ್ಚರಿಕಾ ನಿಯಮ ಪಾಲಿಸದ 20 ಹೋಟೆಲ್, ಅಂಗಡಿ ಮಳಿಗೆಗಳನ್ನು ಮುಚ್ಚಿ ದಂಡ ವಿಧಿಸಲಾಗಿದೆ.
ಯಲಹಂಕದ ರೆಸ್ಟೋರೆಂಟ್, ಹಗದೂರಿನ ಸೂಪರ್ ಮಾರ್ಕೆಟ್, ದಕ್ಷಿಣ ವಲಯದ ನಾಲ್ಕು ಹೋಟೆಲ್ಗಳನ್ನು ಮುಚ್ಚಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಎಂಟಿಆರ್ ಹೋಟೆಲ್ಗೆ ಹತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ಪಾರ್ಟಿ ಆಯೋಜಿಸಿದ ಬೇಗೂರಿನ ಅಪಾರ್ಟ್ಮೆಂಟ್ಗೆ 20 ಸಾವಿರ ರೂ. ದಂಡ ವಿಧಿಸಲಾಗಿದೆ.
ಓದಿ : ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ: ನಾಳೆ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ, ಯಡಿಯೂರಪ್ಪ ಭಾಗಿ
ಸಾಮಾಜಿಕ ಅಂತರ ಕಾಪಾಡದಿರುವುದು, ಮಾಸ್ಕ್ ಧರಿಸದೆ ಇರುವ, ಸ್ಯಾನಿಟೈಸರ್ ಉಪಯೋಗಿಸದಿರುವ, ಥರ್ಮಲ್ ಸ್ಕ್ಯಾನಿಂಗ್ ಮಾಡದಿರುವ ಹೋಟೆಲ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ಗಳನ್ನು ಆರೋಗ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿ ದಂಡ ವಿಧಿಸಿದೆ.
ವ್ಯಾಪಾರ/ಉದ್ದಿಮೆ ಮುಚ್ಚಿಸಿರುವ ಸಂಖ್ಯೆ:
ಯಲಹಂಕ : 1
ಮಹದೇವಪುರ : 4
ಪಶ್ಚಿಮ ವಯಲ : 3
ದಕ್ಷಿಣ ವಲಯ : 4
ಬೊಮ್ಮನಹಳ್ಳಿ : 2
ಪೂರ್ವ ವಲಯ : 3
ರಾಜರಾಜೇಶ್ವರಿ ನಗರ - 3
ಒಟ್ಟು: 20 ಮಳಿಗೆಗಳನ್ನು ಬಂದ್ ಮಾಡಲಾಗಿದೆ.