ETV Bharat / state

ದೇವೇಗೌಡ ಸಮ್ಮುಖದಲ್ಲಿ ಒಬೈದುಲ್ಲಾ ಖಾನ್ ಅಜ್ಮಿ ಜೆಡಿಎಸ್​ ಸೇರ್ಪಡೆ..

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಜೆಡಿಎಸ್​ ಸೇರ್ಪಡೆಯಾದರು.

Obaidullah Khan Azmi
ದೇವೇಗೌಡ ಸಮ್ಮುಖದಲ್ಲಿ ಒಬೈದುಲ್ಲಾ ಖಾನ್ ಅಜ್ಮಿ ಜೆಡಿಎಸ್​ ಸೇರ್ಪಡೆ
author img

By

Published : Mar 14, 2023, 8:05 PM IST

ಬೆಂಗಳೂರು: ಅಖಿಲ ಭಾರತ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡ, ಮಾಜಿ ರಾಜ್ಯಸಭಾ ಸದಸ್ಯ ಒಬೈದುಲ್ಲಾ ಖಾನ್ ಅಜ್ಮಿ ಅವರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಜ್ಮಿ ಅವರು ಜೆಡಿಎಸ್​ಗೆ ಸೇರ್ಪಡೆಯಾದರು. ದೇವೇಗೌಡರು ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಅವರನ್ನು ಬರ ಮಾಡಿಕೊಂಡರು.

ದೇವೇಗೌಡರು ಹೇಳಿದ್ದೇನು?: ನಂತರ ಮಾತನಾಡಿದ ದೇವೇಗೌಡರು, ''ಒಬೈದುಲ್ಲಾ ಅವರು ನನ್ನ ಹಳೆಯ ಸ್ನೇಹಿತರು. ಅವರು ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿದ್ದೇವೆ'' ಎಂದು ಹೇಳಿದರು. ''ಪ್ರಚಾರಕ್ಕೆ ಹೋಗುವುದನ್ನು ಕಾದು ನೋಡಿ ಎಂದು ತಮಾಷೆ ಮಾಡಿದ ಗೌಡರು, ನಾನು ಕದ್ದು ಮುಚ್ಚಿ ಮಾತನಾಡುವುದಿಲ್ಲ. ನನ್ನ ಪಕ್ಷಕ್ಕಾಗಿ ಯುಗಾದಿ ಹಬ್ಬ ಕಳೆದ ನಂತರ, ಮುಖಂಡರ ಜೊತೆ ಸಮಾಲೋಚನೆ ಮಾಡುತ್ತೇನೆ. ನಂತರ ಸುದ್ದಿಗೋಷ್ಠಿ ಮಾಡುತ್ತೇನೆ'' ಎಂದು ತಿಳಿಸಿದರು. ಈ ಸಂಕಷ್ಟ ಕಾಲದಲ್ಲಿ ನಾನು ಇರುತ್ತೇನೆ ಅಂತ ಪಕ್ಷಕ್ಕೆ ಬಂದಿದ್ದಾರೆ. ಅವರದು ಉದಾರವಾದ ಮನಸ್ಸು ಎಂದರು.

Obaidullah Khan Azmi
ದೇವೇಗೌಡ ಸಮ್ಮುಖದಲ್ಲಿ ಒಬೈದುಲ್ಲಾ ಖಾನ್ ಅಜ್ಮಿ ಜೆಡಿಎಸ್​ ಸೇರ್ಪಡೆ

ದೇಶ ಒಂದೇ ಎಂಬ ಸಂದೇಶ ನೀಡಿದ್ದು, ಜನತಾ ದಳ: ಪಕ್ಷದ ಸೇರ್ಪಡೆಗೊಂಡ ನಂತರ ಒಬೈದುಲ್ಲಾ ಖಾನ್ ಅವರು ಮಾತನಾಡಿ, ''ನನ್ನ ಬಗ್ಗೆ ನಮ್ಮ ಸರ್ವೋಚ್ಛ ನಾಯಕ ದೇವೇಗೌಡರು ಹಾಗೂ ಸಿ.ಎಂ. ಇಬ್ರಾಹಿಂ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಜನತಾ ದಳದ ಮೂಲ ಉದ್ದೇಶ ಸಾಮಾಜಿಕ ನ್ಯಾಯ. ಜನತಾದಳ ಸರ್ಕಾರ ಕೇಂದ್ರದಲ್ಲಿ ಇದ್ದಾಗ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಲು ಸಾಧ್ಯವಾಯಿತು. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲರನ್ನು ಒಗ್ಗೂಡಿಸಿ, ದೇಶ ಒಂದೇ ಎಂಬ ಸಂದೇಶ ನೀಡಿದ್ದು ಜನತಾ ದಳ'' ಎಂದರು.

ಇದನ್ನೂ ಓದಿ: ಡಿಜಿಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು: ಡಿ ಕೆ ಶಿವಕುಮಾರ್ ಆಗ್ರಹ

ಜನತಾ ದಳದಿಂದ ಅಭಿವೃದ್ಧಿ ಸಾಧ್ಯ: ''ನಂತರ ಜನತಾದಳ ಒಡೆದು ಅನೇಕ ಪಕ್ಷಗಳಾದವು. ಆದರೆ, ದೇವೇಗೌಡರು ಮಾತ್ರ ಜನತಾದಳದ ನಿಜವಾದ ವಾರಸುದಾರರಾಗಿ ಉಳಿದುಕೊಂಡರು. ಜನತಾದಳವನ್ನು ಎಂದಿಗೂ ಕೂಡಾ ಭ್ರಷ್ಟರಾಗಲು ದೇವೇಗೌಡರು ಬಿಡಲಿಲ್ಲ. ಸಿ.ಎಂ. ಇಬ್ರಾಹೀಂ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಹ್ವಾನ ನೀಡಿದ್ರು. ನಾನು ದೇವೇಗೌಡರ ಜೊತೆಯಲ್ಲೇ ಇದ್ದೇನೆ. ಇನ್ನೇನು ಹೇಳಲಿ ಎಂದು ತಿಳಿಸಿದೆ. ಅಲ್ಪಸಂಖ್ಯಾತರಿಗೆ ಇಂದು ಏನೇ ಉಪಯೋಗ ಆಗಿದ್ದರೂ, ಅಭಿವೃದ್ಧಿ ಆಗಿದ್ದರೂ ಅದು ಜನತಾದಳ ಮತ್ತು ದೇವೇಗೌಡರಿಂದ ಮಾತ್ರ'' ಎಂದು ಅವರು ಹೇಳಿದರು.

ದೇಶ ಒಡೆಯುತ್ತಿರುವ ಬಿಜೆಪಿ, ಕಾಂಗ್ರೆಸ್: ''ಭಾರತ ಜಾತ್ಯಾತೀತ ರಾಷ್ಟ್ರ. ಹಿಂದೂ- ಮುಸ್ಲಿಂ ಎಲ್ಲರೂ ಸೇರಿ ದೇಶವನ್ನು ಒಂದೇ ಎಂದು ಹೇಳೋದು ನಮ್ಮ ಮೂಲ ಉದ್ದೇಶ. ಬಿಜೆಪಿಯು ಹಿಂದುತ್ವ, ಕಾಂಗ್ರೆಸ್ ಮೃದು ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿವೆ. ಜನತಾ ದಳ ಒಗ್ಗೂಡಿಸುವ ಕೆಲಸ ಮಾಡಲಿದೆ ಎಂದು ಒಬೈದುಲ್ಲಾ ಖಾನ್ ಹೇಳಿದರು.

ಇದನ್ನೂ ಓದಿ: ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತ : ಹೆದರಿಕೆ, ಆತಂಕ ಇಲ್ಲವೆಂದ ಇಬ್ರಾಹಿಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.