ETV Bharat / state

ನರ್ಸಿಂಗ್ ಕಾಲೇಜು ಪರವಾನಗಿ ಹಗರಣ ಪ್ರಕರಣ: ಸದನ ಸಮಿತಿಗೆ ಸಿಎಂ ನಕಾರ

ವಿಧಾನಪರಿಷತ್ ಕಲಾಪದಲ್ಲಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಪರವಾನಗಿ ನೀಡಿದ ವಿಚಾರವಾಗಿ ಜೆಡಿಎಸ್​ ಪಕ್ಷದ ನಾಯಕರು ಧರಣಿ ನಡೆಸುತ್ತಾ ಬಂದಿದ್ದು, ಇಂದು ಕೂಡ ಧರಣಿ ನಡೆಸಿದರು. ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನ ಸಮಿತಿ ರಚಿಸುವುದನ್ನು ಸ್ಪಷ್ಟವಾಗಿ ನಿರಾಕರಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ಸಿಎಂ ಯಡಿಯೂರಪ್ಪ
CM yediyurappa
author img

By

Published : Mar 22, 2021, 12:15 PM IST

Updated : Mar 22, 2021, 2:52 PM IST

ಬೆಂಗಳೂರು: ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಪರವಾನಗಿ ನೀಡಿದ ವಿಚಾರದ ಕುರಿತು ಸದನ ಸಮಿತಿ ರಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲು ಸಿದ್ಧ ಎಂದು ತಿಳಿಸಿದ್ದಾರೆ.

ವಿಧಾನಪರಿಷತ್ ಕಲಾಪ

ವಿಧಾನಪರಿಷತ್ ಕಲಾಪದಲ್ಲಿ ಜೆಡಿಎಸ್ ಇಂದೂ ಕೂಡ ಧರಣಿ ಮುಂದುವರೆಸಿತು.‌ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, 60 ಬಿಎಸ್ಸಿ ನರ್ಸಿಂಗ್, 42 ಪ್ಯಾರಾ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಬಹಳ ಕಡೆ ಕಾಲೇಜುಗಳು ಭೌತಿಕವಾಗಿ ನಡೆಯುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಶುಲ್ಕ ಕಟ್ಟಿ ಪ್ರಮಾಣಪತ್ರ ಪಡೆಯಲಾಗುತ್ತಿದೆ. ಹೊರ ರಾಜ್ಯದವರು ಬಂದು ಪ್ರಮಾಣಪತ್ರ ಪಡೆದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸನದ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರಣ ನಿರ್ಲಕ್ಷ್ಯ ಮಾಡದೇ ಸರಿದಾರಿಗೆ‌ ತರಬೇಕಿದೆ. ಅದಕ್ಕಾಗಿ ಸದನ ಸಮಿತಿ ರಚಿಸಿ ಎಂದು ಒತ್ತಾಯಿಸಿದರು.

ಜೆಡಿಎಸ್ ಬೇಡಿಕೆಗೆ ಎಸ್.ಆರ್. ಪಾಟೀಲ್ ಸಾಥ್​:

ಜೆಡಿಎಸ್ ಬೇಡಿಕೆಗೆ ಸಾಥ್​​ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಇದು ಮೂರನೇ ದಿನ. ಜೆಡಿಎಸ್ ಸದಸ್ಯರು ಸದನದಲ್ಲಿದ್ದಾರೆ. ಸರ್ಕಾರ ಯಾಕೆ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಸದನ ಸಮಿತಿ ರಚಿಸಿ ‌ಸತ್ಯಾಸತ್ಯತೆ ಹೊರಬರಲಿದೆ. ಆಳುವ ಪಕ್ಷದ ಸದಸ್ಯರ ಅಧ್ಯಕ್ಷತೆಯಲ್ಲೇ ತಪ್ಪು ಸರಿಪಡಿಸುವ ಕೆಲಸವಾಗಬೇಕು. ಸರ್ಕಾರಕ್ಕೆ ಸದಸ್ಯರ ಬಗ್ಗೆ ನಂಬಿಕೆ ಇರಬೇಕು. ಈಗಾಗಲೇ ಮೂರು ಸದನ ಸಮಿತಿ ಮಾಡಲಾಗಿದೆ. ಇನ್ನೊಂದು ಮಾಡಿದರೆ ಏನೂ ಆಗಲ್ಲ. ಸಿಎಂ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಇತ್ಯರ್ಥ ಪಡಿಸಲಿ ಎಂದು ಮನವಿ ಮಾಡಿದರು.

ಗಣ್ಯರ ಸಮಿತಿ ತನಿಖೆಗೆ ಒಪ್ಪುವಂತೆ ಮನವಿ:

ಪ್ರತಿಪಕ್ಷಗಳ ಒತ್ತಾಯ ಕುರಿತು ಉತ್ತರಿಸಿದ ವೈದ್ಯಕೀಯ ಸಚಿವ ಡಾ.ಸುಧಾಕರ್, ಕಳೆದ 60 ವರ್ಷಗಳಿಂದ ಪರವಾನಗಿ ನೀಡುತ್ತ ಬರಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಪರವಾನಗಿ ಕೊಡುವ ವ್ಯವಸ್ಥೆ ಗಟ್ಟಿ ಮಾಡಲಾಗಿದೆ. ಲೋಪದೋಷಗಳನ್ನು ಸದಸ್ಯರು ಹೇಳುತ್ತಿಲ್ಲ. ಸಿಬ್ಬಂದಿ ಕೊರತೆ ಇದ್ದರೆ ಹೇಳಿ,‌ ಸರಿಪಡಿಸಲಾಗುತ್ತದೆ ಎಂದರೆ ಅದನ್ನೂ ಮಾಡುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರತಿಷ್ಠೆ ಬಿಟ್ಟು ಮೂವರು ಸಮಾಜದ ತಜ್ಞ ಗಣ್ಯರ ಸಮಿತಿ ತನಿಖೆಗೆ ಒಪ್ಪುವಂತೆ ಮನವಿ ಮಾಡಿದರು. ಇದೇ ವೇಳೆ 600 ಸಂಸ್ಥೆಗಳ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲಿದೆ ಎಂದರು.

ಓದಿ: ಕೊರೊನಾ ಬಂದು ಸಿಡಿ ಪ್ರಕರಣ ಮುಚ್ಚಿಕೊಂಡಿದೆ: ಮಾಜಿ ಸಂಸದ ಶಿವರಾಮೇಗೌಡ

ಅಂತಿಮವಾಗಿ ಸದನಕ್ಕೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ತಜ್ಞರ ಸಮಿತಿಯಿಂದ ತನಿಖೆ ಮಾಡುವುದು ಬೇಡ ಎಂದರೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಮಾಡಲು‌ ಸಿದ್ಧ. ನೀವೇ ಹೇಸರು ಹೇಳಿ, ಸಲಹೆ ಕೊಡಿ. ಮೂರು‌ ಜನರ ಸಮಿತಿ ಮಾಡೋಣ, ಆದರೆ ಸದನ ಸಮಿತಿ ಮಾಡಲು ಬರುವುದಿಲ್ಲ ಸಹಕರಿಸಿ ಎಂದರು.

Last Updated : Mar 22, 2021, 2:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.