ETV Bharat / state

ಪೇಜಾವರ ಶ್ರೀಗಳು ಶ್ರೇಷ್ಠ ದೇವಭಕ್ತ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಶ್ರೀ ಬಗ್ಗೆ ಹೇಳಿಕೆ

ಪ್ರೀತಿಯಿಂದ ದೇಶವನ್ನು ಗೆದ್ದಿರುವವರು ಕೆಲವು ಮಂದಿ ಮಾತ್ರ. ಅಂತಹವರಲ್ಲಿ ನಮ್ಮ ಗುರುಗಳಾದ ವಿಶ್ವೇಶ ತೀರ್ಥರೂ ಒಬ್ಬರು. ಅವರು ಶ್ರೇಷ್ಠ ದೇವರ ಭಕ್ತ ಹಾಗೂ ದೇಶಭಕ್ತ. ಗುರುಗಳು ಈ ಸಮಾಜವನ್ನು ಪ್ರೀತಿಸಿದ ಬಗೆಗೆ ಸಮಾಜ ಪ್ರತಿಯಾಗಿ ಇಂತಹ ಗೌರವವನ್ನ ಸಲ್ಲಿಸುತ್ತಿದೆ ಎಂದು ಪೇಜಾವರ ಮಠದ ಪೀಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

sri
ಪೇಜಾವರ ಶ್ರೀಗಳ ಗುರುವಂದನಾ ಕಾರ್ಯಕ್ರಮ
author img

By

Published : Jan 11, 2020, 11:03 PM IST

ಬೆಂಗಳೂರು: ಪೇಜಾವರ ಶ್ರೀಗಳ ಗುರುವಂದನಾ ಕಾರ್ಯಕ್ರಮ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಿತು.

ಈ ವೇಳೆ ಮಾತನಾಡಿದ ಪೇಜಾವರ ಮಠದ ಪೀಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶೌರ್ಯ, ಕ್ರೌರ್ಯದಿಂದ ದೇಶವನ್ನ ಗೆದ್ದವರಿದ್ದಾರೆ. ಆದ್ರೆ ಪ್ರೀತಿಯಿಂದ ದೇಶವನ್ನು ಗೆದ್ದಿರುವವರು ಕೆಲವು ಮಂದಿ ಮಾತ್ರ. ಅಂತಹವರಲ್ಲಿ ನಮ್ಮ ಗುರುಗಳು ಒಬ್ಬರು. ಅವರು ಶ್ರೇಷ್ಠ ದೇವರ ಭಕ್ತ ಹಾಗೂ ದೇಶಭಕ್ತ. ಗುರುಗಳು ಈ ಸಮಾಜವನ್ನು ಪ್ರೀತಿಸಿದ ಬಗೆಗೆ ಸಮಾಜ ಪ್ರತಿಯಾಗಿ ಇಂತಹ ಗೌರವವನ್ನ ಸಲ್ಲಿಸುತ್ತಿದೆ. ಆಸ್ಪತ್ರೆಗೆ ದಾಖಲಾಗಿದ್ದಾಗಿನಿಂದ ಇಲ್ಲಿಯವರೆಗೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದೆ. ಆದ್ದರಿಂದ ಸರ್ಕಾರಕ್ಕೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪೇಜಾವರ ಶ್ರೀಗಳ ಗುರುವಂದನಾ ಕಾರ್ಯಕ್ರಮ

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ದೇಶದಲ್ಲಿ ಸಾವಿರಾರು ಗುರುಗಳು ಸ್ವಾಮೀಜಿಗಳು ಇದ್ದಾರೆ. ಆದ್ರೆ ಕೆಲವು ಸ್ವಾಮೀಜಿಗಳು ಮಾತ್ರ ವಿಶ್ವ ಪ್ರಸಿದ್ಧರಾಗುತ್ತಾರೆ. ಅಂತಹವರಲ್ಲಿ ಪೇಜಾವರ ಸ್ವಾಮೀಜಿಗಳು ಕೂಡ ಒಬ್ಬರು. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಸ್ವಾಮೀಜಿಗಳನ್ನ ಭೇಟಿಯಾಗಿದ್ದೇನೆ. ಆದ್ರೆ ಹೆಚ್ಚಾಗಿ ಭೇಟಿಯಾಗಿರುವ ಸ್ವಾಮೀಜಿ ಅಂದ್ರೆ ಪೇಜಾವರ ಶ್ರೀಗಳು. ಮುಸ್ಲಿಮರಿಗಾಗಿ ಇಫ್ತಿಯಾರ್ ಕೂಟವನ್ನ ಮಠದಲ್ಲೇ ಆಯೋಜನೆ ಮಾಡಿದ್ರು. ಅಂತಹ ಧರ್ಮಸಹಿಷ್ಣು ಅವರು. ಅವರ ಅಗಲಿಕೆ ದೊಡ್ಡ ನಷ್ಟ. ವಿಶ್ವಪ್ರಸನ್ನ ಸ್ವಾಮೀಜಿಗಳಿಗೆ ಮುಂದೆ ದೊಡ್ಡ ಸವಾಲು ಇದೆ. ವಿಶ್ವೇಶ ತೀರ್ಥ ಸ್ವಾಮೀಜಿಯವರ ಸ್ಥಾನ ತುಂಬುವುದು ತುಂಬಾ ಕಷ್ಟದ ಕೆಲಸ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗುವ ಹಿಂದಿನ ದಿನ ಕೂಡ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು. ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಅನ್ನುವುದು ಅವರ ಮನಸ್ಥಿತಿ. ಮಠಕ್ಕೆ ಹೋದವರಿಗೆ ಅವರು ತಾಯಿಯಾಗಿದ್ರು. ಹಿಂದುಳಿದ ಧರ್ಮದ ಹೆಣ್ಣು ಮಗಳು ಉಮಾಭಾರತಿಯವರಿಗೆ ದೀಕ್ಷೆ ಕೊಟ್ಟಿರುವ ಶ್ರೇಯಸ್ಸು ಸ್ವಾಮೀಜಿಯವರದು ಎಂದರು.

Intro:ಪೇಜಾವರ ಶ್ರೀಗಳು ಶ್ರೇಷ್ಠ ದೇವಭಕ್ತ ಹಾಗೂ ದೇಶಭಕ್ತರು- ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪೇಜಾವರ ಮಠದ ಪೀಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತಾಡಿ, ಶೌರ್ಯದಿಂದ , ಕ್ರೌರ್ಯದಿಂದ ದೇಶವನ್ನ ಗೆದ್ದವರಿದ್ದಾರೆ. ಆದ್ರೆ ಪ್ರೀತಿಯಿಂದ ದೇಶವನ್ನು ಗೆದ್ದಿರುವವರು ಕೆಲವು ಮಂದಿ ಮಾತ್ರ. ಅಂತಹವರಲ್ಲಿ ನಮ್ಮ ಗುರುಗಳು ಒಬ್ಬರು. ಅವರು ಶ್ರೇಷ್ಠ ದೇವರ ಭಕ್ತ ಹಾಗೂ ದೇಶಭಕ್ತ.ಗುರುಗಳು ಈ ಸಮಾಜವನ್ನು ಪ್ರೀತಿಸಿದ ಬಗೆಗೆ ಸಮಾಜ ಪ್ರತಿಯಾಗಿ ಇಂತಹ ಗೌರವನ್ನಾ ಸಲ್ಲಿಸುತ್ತಿದೆ. ಆಸ್ಪತ್ರೆಗೆ ದಾಖಲಾಗಿದ್ದಾಗಿನಿಂದ ಇಲ್ಲಿಯವರೆಗೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದ್ರಿಂದ ಸರ್ಕಾರಕ್ಕೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ದೇಶದಲ್ಲಿ ಸಾವಿರಾರು ಗುರುಗಳು ಸ್ವಾಮೀಜಿಗಳು ಇದ್ದಾರೆ
ಆದ್ರೆ ಕೆಲವು ಸ್ವಾಮೀಜಿಗಳು ಮಾತ್ರ ವಿಶ್ವ ಪ್ರಸಿದ್ದರಾಗುತ್ತಾರೆ. ಅಂತಹವರಲ್ಲಿ ಪೇಜಾವರ ಸ್ವಾಮೀಜಿಗಳು ಕೂಡ ಒಬ್ಬರು.ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಸ್ವಾಮೀಜಿಗಳನ್ನಾ ಭೇಟಿಯಾಗಿದ್ದೇನೆ. ಆದ್ರೆ ಹೆಚ್ಚಾಗಿ ಭೇಟಿಯಾಗಿರುವ ಸ್ವಾಮೀಜಿ ಅಂದ್ರೆ ಪೇಜಾವರ ಶ್ರೀಗಳು. ಮುಸ್ಲಿಂಮರಿಗಾಗಿ ಇಫ್ತಿಯರ್ ಕೂಟವನ್ನಾ ಮಠದಲ್ಲೇ ಆಯೋಜನೆ ಮಾಡಿದ್ರು. ಅಂತಹ ಧರ್ಮಸಹಿಷ್ಣು ಅವರು
ಅವರ ಅಗಲಿಕೆ ದೊಡ್ಡ ನಷ್ಟ . ವಿಶ್ವಪ್ರಸನ್ನ ಸ್ವಾಮೀಜಿಗಳಿಗೆ ಮುಂದೆ ದೊಡ್ಡ ಸವಾಲು ಇದೆ.
ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಥಾನ ತುಂಬುವುದು ತುಂಬಾ ಕಷ್ಟದ ಕೆಲಸ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗುವ ಹಿಂದಿನ ದಿನ ಕೂಡ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು. ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಅನ್ನುವುದು ಅವರ ಮನಸ್ಥಿತಿ
.ಮಠಕ್ಕೆ ಹೋದವರಿಗೆ ಅವರು ತಾಯಿಯಾಗಿದ್ರು. ಹಿಂದೂಳಿದ ಧರ್ಮದ ಹೆಣ್ಣು ಮಗಳು ಉಮಾಭಾರತಿಯವರಿಗೆ ದೀಕ್ಷೆ ಕೊಟ್ಟಿರುವ ಶ್ರೇಯಸ್ಸು ಸ್ವಾಮೀಜಿಗೆ ಸಲ್ಲಿಸುತ್ತೇನೆ ಎಂದರು.

ಸೌಮ್ಯಶ್ರೀ
Kn_Bng_03_PejavAra_file_7202707

Body:...Conclusion:...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.