ಬೆಂಗಳೂರು: ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವ ದರೋಡೆಕೋರ ಮುರುಗನ್ ಒಂಟಿ ಮನೆಗಳು, ಚಿನ್ನದಂಗಡಿಗಳ ಕಳ್ಳತನ ಮಾಡುತ್ತಿದ್ದ. ಈತನ ಮೇಲೆ ಬೆಂಗಳೂರು, ಚೆನ್ನೈ ಹಾಗು ಹೈದ್ರಾಬಾದ್‌ನಲ್ಲಿ ಹಲವು ದರೋಡೆ ಪ್ರಕರಣಗಳು ದಾಖಲಾಗಿದ್ದವು.
ಈತ 2019ರಲ್ಲಿ ತಿರುಚಿನಾಪಲ್ಲಿಯ ಲಲಿತ್ ಜ್ಯುವೆಲ್ಲರ್ಸ್‌ನಲ್ಲಿ ರಾಬರಿ ಕೇಸ್ನ ಕಿಂಗ್ಪಿನ್ ಆಗಿದ್ದ. ಈ ಜ್ಯುವೆಲ್ಲರ್ಸ್‌ನಲ್ಲಿ ಸುಮಾರು 12 ಕೋಟಿ ರೂ ಮೌಲ್ಯದ ಚಿನ್ನ, ವಜ್ರ ಹಾಗು ಪ್ಲಾಟಿನಂ ಒಡವೆಗಳು ಕಳ್ಳತನವಾಗಿತ್ತು.
ಕಳೆದ ವರ್ಷ ಬೆಂಗಳೂರಿನಲ್ಲಿ ಮುರುಗನ್ ಪೊಲೀಸರಿಗೆ ಶರಣಾಗಿದ್ದಾನೆ. ಈ ವೇಳೆ ಆರೋಪಿಯಿಂದ ಪೊಲೀಸರು 10 ಕೆ.ಜಿ ಚಿನ್ನ ವಶಡಿಸಿಕೊಂಡು ತನಿಖೆ ಮಾಡಿದಾಗ ಈತನ ಮೇಲೆ 100ಕ್ಕೂ ಹೆಚ್ಚು ದರೋಡೆ ಕೇಸ್ಗಳು ಇರುವುದು ಬೆಳಕಿಗೆ ಬಂದಿತ್ತು. ಬೆಂಗಳೂರು ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಆದರೆ ಜೈಲ್ನಲ್ಲಿದ್ದ ವೇಳೆ ಮುರುಗನ್ಗೆ ಕ್ಯಾನ್ಸರ್ ಉಲ್ಪಣಗೊಂಡಿತ್ತು. ಹೀಗಾಗಿ ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ.