ETV Bharat / state

ಬಿಬಿಎಂಪಿ 8 ವಲಯಗಳಲ್ಲೂ ಬೆಡ್​ ಬ್ಲಾಕಿಂಗ್ ಸಾಧ್ಯತೆ; ತನಿಖೆಗೆ ಆಯುಕ್ತೆ ತುಳಸಿ ಮದ್ದಿನೇನಿ ಶಿಫಾರಸು - Commissioner Tulsi Madineni recommends investigation

ಆಸ್ಪತ್ರೆ ಬೆಡ್ ಅಗತ್ಯ ಇರುವವರಿಗೆ ಕ್ಯೂ ಸಿಸ್ಟಂನಲ್ಲಿ ಬೆಡ್ ನೀಡಿದರೆ, ತುರ್ತು ಅಗತ್ಯ ಇರುವವರಿಗೆ ಬೆಡ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಸಣ್ಣಮಟ್ಟದಲ್ಲಿ ಮಾಡಿದ ಸಡಿಲಿಕೆಯೇ ದುರುಪಯೋಗಕ್ಕೆ ಕಾರಣವಾಗಿರಬಹುದು ಎಂದು ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅಭಿಪ್ರಾಯ ಪಟ್ಟಿದ್ದಾರೆ.

not-only-the-war-room-bed-blocking-has-taken-place-in-all-sectors-says-tulasi-muddeneni
ಆಯುಕ್ತೆ ತುಳಸಿ ಮದ್ದಿನೇನಿ
author img

By

Published : May 6, 2021, 4:11 PM IST

ಬೆಂಗಳೂರು: ಬಿಬಿಎಂಪಿಯ ಕೋವಿಡ್ ವಾರ್ ರೂಂಗಳಲ್ಲಿ ಬೆಡ್ ಬುಕ್ಕಿಂಗ್ ದಂಧೆ ಕೇವಲ ದಕ್ಷಿಣ ವಲಯದಲ್ಲಿ ಅಷ್ಟೇ ಅಲ್ಲ, ಎಲ್ಲ 8 ವಲಯಗಳಲ್ಲೂ ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂಬ ಅಂಶವನ್ನು ದಕ್ಷಿಣ ವಲಯದ ಆಯುಕ್ತೆ, ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

ವರದಿಯ ಪ್ರಮುಖ ಅಂಶಗಳು

  • ವಾರ್ ರೂಂಗಳಿಂದ ರೋಗಿಗಳಿಗಾಗಿ ಬೆಡ್ ಬ್ಲಾಕ್ ಮಾಡಿದ ಪೈಕಿ ಶೇ 50 ರಷ್ಟು ಹಾಸಿಗೆಗಳು ಅನ್ ಬ್ಲಾಕ್ ಆಗುತ್ತಿವೆ. ಹನ್ನೆರಡು ಗಂಟೆಯೊಳಗೆ ರೋಗಿಗಳು ದಾಖಲಾಗದೇ ಇರುವುದೇ ಇದಕ್ಕೆ ಕಾರಣ.‌ ಆಸ್ಪತ್ರೆಗೆ ದಾಖಲಾಗಲು ಇಷ್ಟವಿಲ್ಲ, ಖಾಸಗಿ‌ ಆಸ್ಪತ್ರೆಗೆ ದಾಖಲು, ರೋಗಿಗಳು ಪತ್ತೆಯಿಲ್ಲ ಎಂಬ ಕಾರಣ ನೀಡಿ ಸಿಹೆಚ್ ಬೆಸ್ ಡಾಟಾದಲ್ಲಿ ದಾಖಲಿಸಿರುವುದನ್ನು ತುಳಸಿ ಮದ್ದಿನೇನಿಯವರ ವಿಶ್ಲೇಷಣೆಯಲ್ಲಿ ಕಂಡುಬಂದಿದೆ.
  • ಸಂಸದ ತೇಜಸ್ವಿ ಸೂರ್ಯ ವಾರ್ ರೂಂ ಸಿಬ್ಬಂದಿಯಿಂದಲೇ ಅಕ್ರಮ ನಡೆದಿದೆ ಎಂದ ನಂತರ ರಾತ್ರಿ ಹಗಲೂ ವಾರ್ ರೂಂ ನಲ್ಲೇ ಇದ್ದು, ಸಿಹೆಚ್ ಬಿಎಂಎಸ್ ಸಾಫ್ಟ್ ವೇರ್ ದತ್ತಾಂಶ ಪರಿಶೀಲಿಸಿ 21 ಪುಟಗಳ ವರದಿಯನ್ನು ತುಳಸಿ ಮದ್ದಿನೇನಿ ತಯಾರಿಸಿದ್ದಾರೆ.
  • ನಗರದ ಪ್ರತಿಷ್ಠಿತ 18 ಆಸ್ಪತ್ರೆಗಳಲ್ಲಿ ಏ.19 ರಿಂದ ಮೇ 1 ರವರೆಗೆ, 32 ಪ್ರಕರಣಗಳಲ್ಲಿ ಬಿಬಿಎಂಪಿ ಕೋಟಾದ ಬೆಡ್ ಬ್ಲಾಕ್ ಮಾಡಿ, ಕೆಲವೇ‌ ಕ್ಷಣಗಳಲ್ಲಿ ರೋಗಿಗಳನ್ನು ದಾಖಲಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ವಲಯದ ವಾರ್ ರೂಂ ನಿಂದ 8, ಬೊಮ್ಮನಹಳ್ಳಿ 6, ದಕ್ಷಿಣ ವಲಯ 5, ಯಲಹಂಕ ಹಾಗೂ ಪೂರ್ವ ವಲಯ ತಲಾ 3, ಮಹದೇವಪುರ-ಆರ್ ಆರ್ ನಗರ ಹಾಗೂ ಎಸ್ ಯು ಕಡೆಯಿಂದ ತಲಾ ಎರಡು ಹಾಸಿಗೆಗಳನ್ನು ಬ್ಲಾಕ್​ ಮಾಡಿದ ಕೆಲವೇ ಸೆಕೆಂಡ್, ನಿಮಿಷಗಳಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿರುವುದು ವರದಿಯಲ್ಲಿ ತಿಳಿಸಿದ್ದಾರೆ.
  • ಹೀಗಾಗಿ ಇದರಲ್ಲಿ ಆಸ್ಪತ್ರೆಗಳಲ್ಲಿ ಪಾಲಿಕೆಯಿಂದ ನೇಮಕವಾಗಿರುವ ಆರೋಗ್ಯ ಮಿತ್ರ, ಆಸ್ಪತ್ರೆಯಲ್ಲಿ ಹಾಸಿಗೆ ನೀಡುವ ಉಸ್ತುವಾರಿ ಹೊತ್ತವರು, ವಿವಿಧ ವಲಯಗಳು ಹಾಗೂ 108 ರಲ್ಲಿನ ಹಾಸಿಗೆ ಕಾಯ್ದಿರಿಸುವ ಸಿಬ್ಬಂದಿ ತನಿಖೆ ಅಗತ್ಯವಾಗಿದೆ. ಜೊತೆಗೆ, ಯಾರು ಹಾಸಿಗೆಗಳನ್ನು ಬುಕ್ಕಿಂಗ್ ಮಾಡಿದ್ದಾರೆ, ತಕ್ಷಣವೇ ಹೇಗೆ ದಾಖಲಿಸಲಾಯಿತು ಎಂಬ ಬಗ್ಗೆಯೂ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದ್ದಾರೆ.
  • ಏ. 22 ರಿಂದ ಮೇ. 2 ರವರೆಗೆ, ಎಂಟೂ ವಲಯಗಳ ವಾರ್ ರೂಂ, ಕೇಂದ್ರ ಕಚೇರಿ ವಾರ್ ರೂಂಗಳಲ್ಲಿ 22285 ಹಾಸಿಗೆಗಳನ್ನು ಬ್ಲಾಕ್ ಮಾಡಲಾಗಿದೆ. ಆ ಪೈಕಿ 11,010 ರೋಗಿಗಳು ಮಾತ್ರ ದಾಖಲಾಗಿದ್ದಾರೆ. 3922 ಬೆಡ್ ಸ್ವಯಂ ರದ್ದಾಗಿವೆ. ಈ ಬಗ್ಗೆ ಮುಖ್ಯ ಆಯುಕ್ತರು ರಚಿಸಿದ ತಾಂತ್ರಿಕ ಸಮಿತಿ, ಪ್ರತಿನಿತ್ಯದ ಬೆಡ್ ಬ್ಲಾಕಿಂಗ್ ಡಾಟಾ ಗಮನಿಸಬೇಕು ಹಾಗೂ ಮ್ಯಾನ್ಯುವಲ್ ಅನ್ ಬ್ಲಾಕ್ ಆಗುತ್ತಿರುವ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಶಿಫಾರಸ್ಸು ಮಾಡಿದ್ದಾರೆ.
  • ಮಧ್ಯರಾತ್ರಿ ಅಡ್ಮಿಷನ್ ಬಗ್ಗೆ ವರದಿ ನೀಡಿ, ಮಣಿಪಾಲ್ ಆಸ್ಪತ್ರೆಯಲ್ಲಿ ಮೇ 2 ರಂದು 16 ಬೆಡ್ ಗಳು ಬುಕಿಂಗ್ ಆಗಿವೆ. ಇದರಲ್ಲಿ ಬೊಮ್ಮನಹಳ್ಳಿ ವಲಯದಿಂದ 6, ಪೂರ್ವದಿಂದ 5, ದಾಸರಹಳ್ಳಿಯಿಂದ 3, ಮಹದೇವಪುರ, ದಕ್ಷಿಣ, ಪಶ್ಚಿಮ ವಲಯಗಳ ವಾರ್ ರೂಂ ನಿಂದ ತಲಾ ಒಂದೊಂದು ಬೆಡ್ ಬುಕಿಂಗ್ ಆಗಿವೆ.
  • ರಾಕೇಶ್ ಜಿ (ಹೆಸರು ಬದಲಿಸಲಾಗಿದೆ) ಎಂಬುವವರ ಹೆಸರಿನಲ್ಲಿ ಒಂದೇ ದಿನ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದೇ ಬಿಯು ನಂಬರ್ ಬಳಸಿ, ಮೂರು ಬೆಡ್ ಬುಕ್ ಮಾಡಿ, ಕೆಲವೇ ಕ್ಷಣದಲ್ಲಿ ಅದೇ ಹೆಸರಿನ ವ್ಯಕ್ತಿಯನ್ನು ಅಡ್ಮಿಟ್ ಮಾಡಲಾಗಿದೆ. ಜಾನಕಿ ಎಂಬ ಹೆಸರಲ್ಲೂ ಎರಡು ಬೆಡ್ ಬ್ಲಾಕ್ ಆಗಿ, ಅಡ್ಮಿಟ್ ಮಾಡಿರುವ ಘಟನೆ ಬಗ್ಗೆಯೂ ಸುಧೀರ್ಘವಾದ ತನಿಖೆ ನಡೆಸುವ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದ್ದಾರೆ.
  • ಇದಲ್ಲದೆ ಬಿಬಿಎಂಪಿ ಕೋಟಾದ ಬೆಡ್ ಗಳಿಗೆ ವಾರ್ ರೂಂ ಸಿಬ್ಬಂದಿ ರೋಹಿತ್ ಎಂಬಾತ ನಲ್ವತ್ತು ಸಾವಿರ ರೂ ರೋಗಿಯಿಂದ ಬೇಡಿಕೆ ಇಟ್ಟಿರುವ ಬಗ್ಗೆ, ಬೆಡ್ ಬುಕಿಂಗ್ ಗಾಗಿ ರೋಹಿತ್​ರನ್ನು ಸಂಪರ್ಕಿಸಿ ಎಂಬ ವಾಟ್ಸಾಪ್ ಸಂದೇಶಗಳ ಪ್ರತಿ ಕೂಡಾ ವರದಿಯಲ್ಲಿ ಲಗತ್ತಿಸಲಾಗಿದೆ.
  • ರೋಗ ಲಕ್ಷಣ ಇಲ್ಲದಿದ್ದರೂ, ಬೆಡ್ ಅಗತ್ಯ ಇಲ್ಲದಿದ್ದರೂ ಅರ್ಪಣ ತ್ರಿಪಾಠಿ ಎಂಬುವವರ ಹೆಸರಲ್ಲಿ ದಕ್ಷಿಣ ವಲಯದಿಂದ ಬೆಡ್ ಬ್ಲಾಕ್ ಮಾಡಲಾಗಿದೆ. ಆ ಬೆಡ್ ಗೆ ಕೆಂಪಮ್ಮ ಎಂಬುವವರು ನಂತರದಲ್ಲಿ ದಾಖಲಾಗುತ್ತಾರೆ. ಈ ಬೆಡ್ ಗೆ ಕೆಂಪಮ್ಮ ಅವರು ಹಣ ಪಾವತಿಸಿದ್ದಾರೆಯೋ ಎಂಬ ಬಗ್ಗೆ ತನಿಖೆ ಮಾಡಬೇಕೆಂದು ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
  • ಒಟ್ಟಿನಲ್ಲಿ ಆಸ್ಪತ್ರೆ ಬೆಡ್ ಅಗತ್ಯ ಇರುವವರಿಗೆ ಕ್ಯೂ ಸಿಸ್ಟಂನಲ್ಲಿ ಬೆಡ್ ನೀಡಿದರೆ, ತುರ್ತು ಅಗತ್ಯ ಇರುವವರಿಗೆ ಬೆಡ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಸಣ್ಣಮಟ್ಟದಲ್ಲಿ ಮಾಡಿದ ಸಡಿಲಿಕೆಯೇ ದುರುಪಯೋಗಕ್ಕೆ ಕಾರಣವಾಗಿರಬಹುದು ಎಂದು ತುಳಸಿ ಮದ್ದಿನೇನಿ ಅಭಿಪ್ರಾಯ ಪಟ್ಟಿದ್ದಾರೆ. ಯಾವೆಲ್ಲ ಪ್ರಕರಣಗಳ ತನಿಖೆ ಆಗಬೇಕಿದೆ ಎಂಬ ಬಗ್ಗೆಯೂ ವಿಸ್ತೃತ ವರದಿಯನ್ನು ಮುಖ್ಯ ಆಯುಕ್ತರಿಗೆ ನೀಡಿದ್ದಾರೆ. ಈ ತಂತ್ರಾಂಶ ಸರಿಪಡಿಸುವ, ಮೇಲ್ದರ್ಜೆಗೇರಿಸುವ ಕೆಲಸವೂ ತಾಂತ್ರಿಕ ಸಮಿತಿಯಿಂದ ಚಾಲ್ತಿಯಲ್ಲಿದೆ.
  • ಓದಿ: ರಾಜ್ಯದಲ್ಲಿ ಜನತಾ ಲಾಕ್​ಡೌನ್ ಫೇಲ್, ಸಂಪೂರ್ಣ ಲಾಕ್​ಡೌನ್ ಬಗ್ಗೆ ಸುಧಾಕರ್ ಸುಳಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.