ಬೆಂಗಳೂರು: ಕೊರೊನಾ ಅಥವಾ ಕೋವಿಡ್ -19 ವೈರಸ್ ಭೀತಿ ಹಿನ್ನೆಲೆಯಲ್ಲಿ ಬಿಎಮ್ಆರ್ಸಿಐ (ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ) ಜನಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.
ನಗರದ ರೈಲು ನಿಲ್ದಾಣದ ಬಳಿ ನೋಡಲ್ ಆಫೀಸರ್ ಡಾ.ಆಸ್ಮಾ ಭಾನು ಅವರ ತಂಡದಿಂದ ಜನತೆಗೆ ಅರಿವು ಮೂಡಿಸುವ ಕಾರ್ಯ ನಡೆಯಿತು. ಜನರು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಹೇಗೆ? ಅನವಶ್ಯಕ ಮಾಸ್ಕ್ಗಳನ್ನು ಹಾಕಿಕೊಂಡು ಓಡಾಡದಂತೆ ಈ ವೇಳೆ ಮನವಿ ಮಾಡಲಾಯಿತು.
ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಮುಖಗವಸುಗಳನ್ನು ಧರಿಸುವುದರಿಂದ ಕೊರೊನಾ ಬರಲ್ಲ ಅಂತಲ್ಲ. ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಆದಷ್ಟು ಜನನಿಬಿಡ ಪ್ರದೇಶಗಳಿಂದ ದೂರವಿರುವುದು ಒಳಿತು ಎಂದು ಸಲಹೆ ನೀಡಿದರು.