ETV Bharat / state

ಡಿಪ್ಲೋಮಾ ಪ್ರವೇಶಾತಿ ದಿನಾಂಕ ವಿಸ್ತರಣೆ : ಸಚಿವ ಅಶ್ವತ್ಥ್ ನಾರಾಯಣ್ - ಡಿಪ್ಲೋಮಾ ಪ್ರವೇಶಾತಿ ದಿನಾಂಕ ವಿಸ್ತರಣೆ

ಈ ಹೊಸ ನೀತಿಯಿಂದ ಮೈನರ್ ಸಬ್ಜೆಕ್ಟ್ ಕಲಿಯೋಕು‌ ಅವಕಾಶವಿದೆ. ಮುಂದೆ ಎರಡು ಮೇಜರ್ ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಈ ವರ್ಷದಿಂದಲೇ ಮೊದಲ ವರ್ಷದ ಎಂಜಿನಿಯರಿಂಗ್, ಪದವಿಗಳಲ್ಲಿ ಈ ನೀತಿ ಜಾರಿಯಾಗಲಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.

No worries about new national education policy: Minister Ashwath Narayan
ಸಚಿವ ಅಶ್ವತ್ಥ್ ನಾರಾಯಣ್
author img

By

Published : Sep 2, 2021, 5:14 PM IST

Updated : Sep 2, 2021, 7:34 PM IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯಾರಿಗೂ ಆತಂಕ ಇಲ್ಲ. ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಲಿದ್ದು, ಈ ನೀತಿ ವಿದ್ಯಾರ್ಥಿಗಳ ಪೂರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದರು.

ವಿಧಾನಸೌಧದಲ್ಲಿ ವಿಧಾನಪರಿಷತ್​ ಸದಸ್ಯರ ಜೊತೆ ಶಿಕ್ಷಣ ನೀತಿ ಸಂಬಂಧ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ‌ ರಾಷ್ಟ್ರೀಯ ಶಿಕ್ಷಣ ನೀತಿಯ ಅತ್ಯವಶ್ಯಕವಿದೆ. ಈ ಮುಂಚೆ ಆರ್ಟ್ಸ್​ ಪದವಿ ಪಡೆದವರು ಟೆಕ್ನಿಕಲ್ ಕಲಿಯಲು ಅವಕಾಶವಿರಲಿಲ್ಲ. ಕಾಮರ್ಸ್ ನವರು ಸೈನ್ಸ್ ಕಲಿಯೋಕೆ ಅವಕಾಶ ಇರಲಿಲ್ಲ. ಈಗ ಯಾರು ಯಾವ ಪಠ್ಯ ಬೇಕಾದರೂ ಕಲಿಯಬಹುದು. ಅಂತಹ ಮಲ್ಟಿ ವ್ಯವಸ್ಥೆ ಈ ನೀತಿಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದರು.

ಸಚಿವ ಅಶ್ವತ್ಥ್ ನಾರಾಯಣ್

ಉದ್ಯೋಗ ಪಡೆಯಲು ತೊಂದರೆ ಇಲ್ಲ:

ಒಂದು ವರ್ಷ ಕಲಿತರೂ ಅವರಿಗೆ ಮಾನ್ಯತೆ ಸಿಗಲಿದೆ. ಇದು ಉದ್ಯೋಗ ಪಡೆಯೋಕು ಸಹಕಾರಿಯಾಗಲಿದೆ. ಮೈನರ್ ಸಬ್ಜೆಕ್ಟ್ ಕಲಿಯೋಕು‌ ಅವಕಾಶವಿದೆ. ಮುಂದೆ ಎರಡು ಮೇಜರ್ ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಈ ವರ್ಷದಿಂದಲೇ ಮೊದಲ ವರ್ಷದ ಎಂಜಿನಿಯರಿಂಗ್, ಪದವಿಗಳಲ್ಲಿ ಈ ನೀತಿ ಜಾರಿಯಾಗಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಸ್ಯೆಯಿಲ್ಲ. ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗಲ್ಲ. ಯಾವುದೇ ಗೊಂದಲಗಳು ಉದ್ಭವವಾಗಲ್ಲ. ತರಾತುರಿಯಲ್ಲೂ ನಾವು ಇದನ್ನ ತರುತ್ತಿಲ್ಲ. ಕಾಂಬಿನೇಷನ್ ಬದಲು ಸಬ್ಜೆಕ್ಟ್ ಆಯ್ಕೆಗೆ ಅವಕಾಶವಿರುತ್ತದೆ. ಈ ವರ್ಷ ಎಂಜಿನಿಯರಿಂಗ್, ಪದವಿಗೆ ಮಾತ್ರ ಅಳವಡಿಕೆ. ಬಿಎ, ಬಿಕಾಂ, ಬಿಎಸ್ಸಿಗೆ ಮಾತ್ರ ತರಲಾಗುತ್ತದೆ ಎಂದು ತಿಳಿಸಿದರು.

ಕೇಸರೀಕರಣ ಆಗಿಲ್ಲ:

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಸರೀಕರಣ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದನ್ನು ನಾವು ತರಾತುರಿಯಲ್ಲಿ ಅನುಷ್ಠಾನ ಮಾಡ್ತಿಲ್ಲ. ಕಳೆದ 7 ವರ್ಷದಿಂದಲೂ ಇದರ ತಯಾರಿ ನಡೆಯುತ್ತಿದೆ. ಹಂತ ಹಂತವಾಗಿ ಇದರ ಅನುಷ್ಠಾನವಾಗುತ್ತಿದೆ. ಮುಂದಿನ 15 ವರ್ಷಗಳಲ್ಲಿ ಹಂತ ಹಂತವಾಗಿ ಅನುಷ್ಠಾನವಾಗಲಿದೆ. ಒಳ್ಳೆಯದು ಮಾಡಿದರೆ ಕೇಸರಿಕರಣ ಎಂದರೆ ಹೇಗೆ?. ಹಾಗೆ ತಿಳಿದುಕೊಂಡರೆ ನಮ್ಮ‌ ಸಮಸ್ಯೆಯೇನಿಲ್ಲ. ವಿದ್ಯಾರ್ಥಿಗಳು ಯಾವುದನ್ನೂ ಬೇಕಾದರೂ ಕಲಿಯಬಹುದು. ನೀತಿಯನ್ನು ಅಳವಡಿಸಿಕೊಳ್ಳುವುದು ವಿವಿಗಳಿಗೆ ಬಿಟ್ಟಿದೆ. ಇದರಲ್ಲಿ ಕೇಸರಿಕರಣ ಎಲ್ಲಿಂದ ಬರುತ್ತದೆ ಎಂದು ಎಂದು ಪ್ರಶ್ನಿಸಿದರು.

NEPಯಿಂದ ಯಾವ ಆತಂಕವೂ ಇಲ್ಲ, ಶಿಕ್ಷಣ ಶುಲ್ಕವೂ ಹೆಚ್ಚಳ ಆಗಲ್ಲ

ಕಲಿಕೆಯಲ್ಲಿ ‌ಸುಧಾರಣೆ ತರಬೇಕು. ಹಾಗಾಗಿಯೇ ಇದನ್ನು ತರುತ್ತಿದ್ದೇವೆ. ಕೇಂದ್ರ ಮೆಚ್ಚಿಸೋಕೆ ಅನ್ನೋ ಆರೋಪ ಬೇಡ. ಇದರ ಸಿದ್ಧತೆ ಕಳೆದ ಏಳು ವರ್ಷದಿಂದಲೂ‌ ನಡೆಯುತ್ತಿದೆ. ಈಗ ನಾವು ಅದನ್ನು ರಾಜ್ಯದಲ್ಲಿ ಜಾರಿ ಮಾಡಿದ್ದೇವೆ. ಇದು ಕರ್ನಾಟಕಕ್ಕೆ ಹೆಮ್ಮೆ ಎನಿಸುವ ವಿಚಾರ ಎಂದು ತಿಳಿಸಿದರು.

ಎನ್ ಇಪಿ‌ ಜಾರಿಯಿಂದ ಶುಲ್ಕ ಹೆಚ್ಚಳವಿಲ್ಲ:

ಎನ್‌ಇಪಿ ಜಾರಿಯಿಂದ ಶುಲ್ಕ ಹೆಚ್ವಳವಾಗುವುದಿಲ್ಲ. ಇದು ತಪ್ಪು ಕಲ್ಪನೆ ಎಂದು ಇದೇ ವೇಳೆ ತಿಳಿಸಿದರು. ಎಷ್ಟು‌ ವಿದ್ಯಾರ್ಥಿ ಸೇರಿದ್ರೂ ಅಡ್ಮಿಶನ್ ಮಾಡಿಕೊಳ್ತೇವೆ. ಈಗಾಗಲೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸಚಿವ ಅಶ್ವತ್ಥ್​ ನಾರಾಯಣ್ ಸ್ಪಷ್ಟಪಡಿಸಿದರು.

ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆಯಾಗಲ್ಲ. ಕಟ್ಟಡದೊಳಗೆ ಕಲಿಯಬೇಕೆಂಬ ನಿರ್ಬಂಧವಿತ್ತು. ಈಗ ಆ ನಿರ್ಬಂಧವನ್ನ ಸಡಿಲಿಕೆ ಮಾಡಿದ್ದೇವೆ. ಎಲ್ಲಿ ಬೇಕಾದರೂ‌ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ವಿವರಿಸಿದರು.

ಡಿಪ್ಲೋಮಾ ಪ್ರವೇಶಾತಿ ದಿನಾಂಕ ವಿಸ್ತರಣೆ:

2021-22ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಪ್ರವೇಶಾತಿ ದಿನಾಂಕವನ್ನು ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

ರಾಜ್ಯದ 62 ಸರ್ಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆಪ್ಟೆಂಬರ್ 20ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

ಪ್ರವೇಶಾವಧಿಯನ್ನು ವಿಸ್ತರಣೆ ಮಾಡುವಂತೆ ಎಲ್ಲ ಪಾಲಿಟೆಕ್ನಿಕ್​​ ಕಾಲೇಜುಗಳ ಪ್ರಾಂಶುಪಾಲರು ಕೋರಿಕೆ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Last Updated : Sep 2, 2021, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.