ETV Bharat / state

ಕಬ್ಬನ್ ಪಾರ್ಕ್​ನಲ್ಲಿ ಸಾಕು ನಾಯಿಗಳ ಪ್ರವೇಶ ನಿರ್ಬಂಧಕ್ಕೆ ತಡೆ

author img

By

Published : Jun 29, 2022, 3:47 PM IST

ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಾಕು ನಾಯಿಗಳ ಪ್ರವೇಶ ನಿರ್ಬಂಧವನ್ನು ತಡೆಹಿಡಿಯಲಾಗಿದ್ದು, ಜುಲೈ 1 ರಿಂದ ಜಾರಿಯಾಗುವುದಿಲ್ಲ ಎಂದು ಸಂಸದ ಪಿ ಸಿ ಮೋಹನ್ ಟ್ವೀಟ್ ಮಾಡಿದ್ದಾರೆ.

no-restriction-to-the-pet-dogs-to-enter-the-cubbon-park-from-july-1st
ಕಬ್ಬನ್ ಪಾರ್ಕ್ ನಲ್ಲಿ ಸಾಕು ನಾಯಿಗಳ ಪ್ರವೇಶದ ನಿರ್ಬಂಧ ಜುಲೈ 1 ರಿಂದ ಜಾರಿಯಿಲ್ಲ: ಸಂಸದ ಪಿಸಿ ಮೋಹನ್ ಟ್ವೀಟ್

ಬೆಂಗಳೂರು : ನಗರದ ಕಬ್ಬನ್ ಪಾರ್ಕ್​ನಲ್ಲಿ ಜುಲೈ 1 ರಿಂದ ಜಾರಿಯಾಗಬೇಕಿದ್ದ ಸಾಕು ನಾಯಿಗಳ ಪ್ರವೇಶದ ನಿರ್ಬಂಧವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ತೋಟಗಾರಿಕೆ ಇಲಾಖೆ ಹೇಳಿದೆ ಎಂದು ಸಂಸದ ಪಿ ಸಿ ಮೋಹನ್ ಟ್ವೀಟ್ ಮಾಡಿದ್ದಾರೆ. ಸಾಕು ನಾಯಿಗಳ ಪ್ರವೇಶ ನಿಷೇಧಿಸಿರುವುದರ ಕುರಿತು ತೋಟಗಾರಿಕಾ ಸಚಿವ ಮುನಿರತ್ನರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಬ್ಬನ್ ಪಾರ್ಕ್​ಗೆ ಸಾಕು ನಾಯಿಗಳನ್ನು ನಿರ್ಬಂಧಿಸಿರುವ ವಿರುದ್ಧ ನಾಯಿಗಳನ್ನು ಸಾಕಿರುವವರು ಮತ್ತು ಪ್ರಾಣಿ ರಕ್ಷಣಾ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿ ನಿಷೇಧ ಹೇರಿದರೆ ನಾಯಿಗಳಿಗೆ ಸ್ವತಂತ್ರವಾಗಿ ಓಡಾಡಲು ಸ್ಥಳವೇ ಇಲ್ಲವಾಗುತ್ತದೆ ಎಂದು ಆಗ್ರಹಿಸಿ ಚೇಂಜ್ ಆರ್ಗ್‌ನಲ್ಲಿ ಅಭಿಯಾನ ನಡೆಸಲಾಗಿತ್ತು. ಜವಾಬ್ದಾರಿ ರಹಿತವಾಗಿ ವರ್ತಿಸುವ ನಾಯಿ ಮಾಲೀಕರಿಗೆ ದಂಡ ವಿಧಿಸಬಹುದು. ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ವಿಧಿಸುವುದು ತಪ್ಪು ಎಂದು ಸಾಕು ನಾಯಿಗಳ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

ಸಾಕಷ್ಟು ಜನರಿಂದ ದೂರು : ಸಾಕುನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಹಲವು ಕಾರಣಗಳಿವೆ. ಮುಖ್ಯವಾಗಿ ಕಬ್ಬನ್ ಪಾರ್ಕ್‌ಗೆ ಬರುವ ಶ್ವಾನಗಳಿಂದ ತೊಂದರೆಯಾಗುತ್ತಿದೆ ಎಂದು ಸಾಕಷ್ಟು ಜನರು ದೂರು ನೀಡಿದ್ದರು. ನಾಯಿಗಳು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ತಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಬ್ಬನ್ ಪಾರ್ಕ್ ನಲ್ಲಿ ಸಾಕುನಾಯಿಗಳ ಪ್ರವೇಶ ನಿರ್ಬಂಧವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದು, ಜುಲೈ 1ರಿಂದ ಈ ನಿಯಮ ಜಾರಿಗೆ ಬರುವುದಿಲ್ಲ. ಈ ಬಗ್ಗೆ ಮುಂದಿನ ಸಭೆಯಲ್ಲಿ ತೋಟಗಾರಿಕೆ ಇಲಾಖೆಯು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಓದಿ : ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ.. ರಾಜಸ್ಥಾನ ಸರ್ಕಾರ ವಜಾಗೊಳಿಸುವಂತೆ ಕಟೀಲ್ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.