ಬೆಂಗಳೂರು: ಗ್ರಹಣ ಸಂಬಂಧ ವಿಧಾನಸೌಧದಲ್ಲಿ ಪೂಜೆ, ಹೋಮ ಹವನ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗ್ರಹಣ ಸಂಬಂಧ ಹೋಮ-ಹವನ ಮಾಡಿಲ್ಲ,ಮೂಡ ನಂಬಿಕೆ ಒಳ್ಳೆದಲ್ಲ:ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು 12 ಗಂಟೆಗೆ ಚೇಂಬರ್ಗೆ ಬಂದು ಕೆಲಸ ಮಾಡುತ್ತಿದ್ದೇನೆ. ಮೂಡನಂಬಿಕೆ ಒಳ್ಳೆಯದಲ್ಲ. ಮೂಡನಂಬಿಕೆ ಬದಿಗಿಟ್ಟು ಕೆಲಸ ಮಾಡುತ್ತಿದ್ದೇನೆ. ಅತಿಯಾದ ಮೂಢನಂಬಿಕೆ ಒಳ್ಳೆಯದಲ್ಲ. ಸೂರ್ಯ ಗ್ರಹಣವಾಗಲಿ, ಚಂದ್ರ ಗ್ರಹಣವಾಗಲಿ ಅವೆಲ್ಲ ಪ್ರಕೃತಿ ನಿಯಮ. ಮನುಷ್ಯರಿಗಲ್ಲ. ದೇವಾನು ದೇವತೆಗಳೂ ಇದಕ್ಕೆ ಹೊರತಲ್ಲ ಎಂದರು. ದಿನನಿತ್ಯದ ಪೂಜೆ ಏನಿತ್ತು ಅದನ್ನು ಮಾಡುತ್ತೇವೆ. ನಾನು ಹಿಂದೂ. ನಮ್ಮ ಮನೆ ದೇವರು ಆಂಜನೇಯ. ಆಂಜನೇಯ ಹಾಗೂ ಕೆಂಪೇಗೌಡರಿಗೆ ಪೂಜೆ ಮಾಡಿ ನನ್ನ ದಿನನಿತ್ಯದ ಕಾಯಕವನ್ನು ಶುರು ಮಾಡುತ್ತೇನೆ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.