ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಪ್ರವಾಸ ಮಾಡಲಿದ್ದು, ಕೋವಿಡ್ ಚಿಕಿತ್ಸೆ ಆಸ್ಪತ್ರೆ , ಸರ್ಕಾರಿ ಲಸಿಕೆ ಕೇಂದ್ರ ಹಾಗೂ ಖಾಸಗಿ ಬಯೋಟೆಕ್ ಪಾರ್ಕ್ಗೆ ಭೇಟಿ ನೀಡಲಿದ್ದಾರೆ.
ಜುಲೈ 1ರಂದು ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಯಲಹಂಕದಲ್ಲಿ ಇತ್ತೀಚಿಗೆ ನಿರ್ಮಿತ 100 ಬೆಡ್ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಂತರ ಜಯನಗರದ ಸರ್ಕಾರಿ ಲಸಿಕಾ ಕೇಂದ್ರಕ್ಕೂ ಮೊದಲ ದಿನ ಭೇಟಿ ನೀಡಿ ಲಸಿಕಾ ಅಭಿಯಾನ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಜುಲೈ 2ರಂದು ಬೆಳಗ್ಗೆ ಹೊಸೂರು ರಸ್ತೆಯ ಹೆಲಿಕ್ಸ್ ಬಯೋಟೆಕ್ ಪಾರ್ಕ್ಗೆ ಭೀತಿ ನೀಡಿ ಮಧ್ಯಾಹ್ನ ನಗರದ ಅಲಿ ಅಸ್ಗರ್ ರಸ್ತೆಯ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಓದಿ: 3 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ Broadband: ಕೇಂದ್ರ ಕ್ಯಾಬಿನೆಟ್ನಲ್ಲಿ ಮಹತ್ವದ ನಿರ್ಧಾರ