ETV Bharat / state

ನಿಮ್ಹಾನ್ಸ್​​ನಲ್ಲಿ ನೇಮಕಾತಿ: 32 ನರ್ಸಿಂಗ್​ ಹುದ್ದೆಗಳಿಗೆ ವಾಕ್​ ಇನ್​ ಇಂಟರ್ವ್ಯೂ - 32 ನರ್ಸ್​​ ಹುದ್ದೆಗಳ ಭರ್ತಿಗೆ ಅರ್ಜಿ

NIMHANS Recruitment: ವಾಕ್​ ಇನ್​ ಇಂಟರ್​ವ್ಯೂ ಅನ್ನು ನವೆಂಬರ್​ 16ರಂದು ಬೆಳಗ್ಗೆ 10.30ಕ್ಕೆ ನಡೆಸಲಾಗುವುದು.

Nimhans Job notification for walk in interview for nurse post

author img

By ETV Bharat Karnataka Team

Published : Nov 11, 2023, 4:06 PM IST

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ- ನಿಮ್ಹಾನ್ಸ್​ (NIMHANS)ನಲ್ಲಿ ಖಾಲಿ ಇರುವ 32 ನರ್ಸ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆ ನಡೆಯಲಿದೆ. ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ನಿಮ್ಹಾನ್ಸ್​ನಲ್ಲಿ ಕರ್ನಾಟಕ ಸರ್ಕಾರ ಅನುದಾನಿತ ಯೋಜನೆ ಕರ್ನಾಟಕ ಬ್ರೈನ್​ ಹೆಲ್ತ್​​ ಇನ್ಷಿಯೇಟಿವ್​ ಯೋಜನೆ ಅಡಿ 32 ನರ್ಸ್​​ ಹುದ್ದೆಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್​ ಅವಧಿಯನ್ನು ಪೂರ್ಣಗೊಳಿಸಿರಬೇಕು. ಅಥವಾ ಅದಕ್ಕೆ ತತ್ಸಮಾನ ಪದವಿಯನ್ನು ಕರ್ನಾಟಕ ನರ್ಸಿಂಗ್​ ಕೌನ್ಸಿಲ್​ ಆಫ್​ ಇಂಡಿಯಾದಿಂದ ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರಬೇಕಿದೆ. ಯೋಜನೆ ಅನುಸಾರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ಸಿದ್ದರಿರಬೇಕಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳು ಮೀರಿರಬಾರದು.

ವೇತನ: ಈ ಹುದ್ದೆಗೆ ಅಭ್ಯರ್ಥಿಗಳಿಗೆ ಮಾಸಿಕ 20 ಸಾವಿರ ರೂ ವೇತನ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ವಾಕ್​ ಇನ್​ ಇಂಟರ್​ವ್ಯೂ ಮೂಲಕ ನೇಮಕಾತಿ ಮಾಡಲಾಗುವುದು. ವಾಕ್​ ಇನ್​ ಇಂಟರ್​ವ್ಯೂ ಅನ್ನು ನವೆಂಬರ್​ 16ರಂದು ಬೆಳಗ್ಗೆ 10.30ಕ್ಕೆ ನಡೆಸಲಾಗುವುದು. ಇಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ನಡೆಸಲಾಗುವುದು. ಇದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು.

ನೇರ ಸಂದರ್ಶನದ ಸ್ಥಳ: ಲೆಕ್ಚರ್​ ಹಾಲ್​ 1, ಅಡ್ಮಿನ್​ ಬ್ಲಾಕ್​ 1ನೇ ಮಹಡಿ, ನಿಮ್ಹಾನ್ಸ್​, ಬೆಂಗಳೂರು 560029.

ಈ ಹುದ್ದೆಯ ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸಿವಿ, ಶೈಕ್ಷಣಿಯ ಪ್ರಮಾಣ ಪತ್ರ, ಅನುಭವದ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬೇಕಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು nimhans.ac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ನಿಮ್ಹಾನ್ಸ್​​ನಲ್ಲಿದೆ 32 ಜಿಲ್ಲಾ ಕೋ ಆರ್ಡಿನೇಟರ್​ ಹುದ್ದೆ: ಪದವಿ ಆಗಿದ್ರೆ ಸಾಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.