ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತು ಸಡಲಿಕೆ ಕೋರಿ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮೇ 8ಕ್ಕೆ ಮುಂದೂಡಿದೆ.
ಅರ್ಜಿದಾರರ ಪದ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ನಲಪಾಡ್ ಮೇ 4 ರಿಂದ ಜೂನ್ 1ರವರೆಗೂ ಮೆಕ್ಕಾಗೆ ತೆರಳಬೇಕಿದೆ. ಹೀಗಾಗಿ ಜಾಮೀನು ಷರತ್ತು ಸಡಿಲಿಸಿ ಅನುಮತಿ ನೀಡುವಂತೆ ನಲಪಾಡ್ ಪರ ಮನವಿ ಮಾಡಿದ್ರು. ವಿಚಾರಣೆ ಆಲಿಸಿದ ನ್ಯಾಯಾಲಯ ಮೇ 8ಕ್ಕೆ ಮುಂದೂಡಿದೆ.
ಯುಬಿಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಲಪಾಡ್ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ್ದು, ಷರತ್ತಿನ ಪ್ರಕಾರ ಅನುಮತಿ ಇಲ್ಲದೆ ವಿದೇಶ ಪ್ರಯಾಣ ಮಾಡುವಂತಿಲ್ಲ.