ETV Bharat / state

ಬೆಂಗಳೂರಲ್ಲಿ ಶಂಕಿತ ಐಸಿಸ್​​ ಉಗ್ರರ ಮನೆ ಮೇಲೆ ಎನ್​ಐಎ ದಾಳಿ: ಇಬ್ಬರು ವಶಕ್ಕೆ - ಬೆಂಗಳೂರಿನಲ್ಲಿ ಶಂಕಿತ ಐಸಿಸ್​ ಉಗ್ರರ ಮನೆ ಮೇಲೆ ಎನ್​ಐಎ ಅಧಿಕಾರಿಗಳ ದಾಳಿ

ಬೆಂಗಳೂರಿನಲ್ಲಿ ಎನ್​ಐಎ ಅಧಿಕಾರಿಗಳು ಶಂಕಿತ ಐಸಿಸ್​ ಉಗ್ರರ ಮನೆ ಮೇಲೆ ದಾಳಿ ಮಾಡಿದ್ದು, ಇಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಶಂಕಿತ ಉಗ್ರರ ಮನೆ ಮೇಲೆ ಎನ್​ಐಎ ಅಧಿಕಾರಿಗಳ ದಾಳಿ

author img

By

Published : Oct 28, 2020, 12:04 PM IST

Updated : Oct 28, 2020, 12:17 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಉಗ್ರರು ಸೆರೆ ಸಿಕ್ಕ ಹಿನ್ನೆಲೆ ಎನ್​ಐಎ ಅಧಿಕಾರಿಗಳು ಥಣಿಸಂದ್ರದ ಬಳಿ ಎರಡು‌ ಮನೆಗಳ ಮೇಲೆ ದಾಳಿ ನಡೆಸಿ, ಮತ್ತಿಬ್ಬರನ್ನು ವಶಕ್ಕೆ ಪಡಿದಿದ್ದಾರೆ. ಶಂಕಿತ ಐಸಿಸ್​ ಉಗ್ರರ‌ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು, ಶೋಧಕಾರ್ಯ ಮುಂದುವರೆಸಿದ್ದಾರೆ.

ಇತ್ತೀಚೆಗೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಬ್ರೇವ್ ಎಂಬಾತನನ್ನ ಎನ್​ಐಎ ಬಂಧಿಸಿತ್ತು. ನಂತರ ಈತನ ಜೊತೆ ಸಂಪರ್ಕ ಇರುವ ಇನ್ನಿಬ್ಬರನ್ನ ಬಂಧಿಸಲಾಗಿತ್ತು. ಆರೋಪಿಗಳು ಕುರಾನ್ ಎಂಬ ವಾಟ್ಸಪ್ ಗ್ರೂಪ್ ಮಾಡಿಕೊಂಡು ನಗರದ ಕೆಲ ಯುವಕರನ್ನ ಐಸಿಸ್​ಗೆ ಸೇರುವಂತೆ ಪ್ರೇರೇಪಿಸುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ಬಯಲಾಗಿತ್ತು.

ಈ ಕುರಿತು ಶಂಕಿತ ಐಸಿಸ್​ ಉಗ್ರರ ಮನೆ ಮೇಲೆ ದಾಳಿ ನಡೆಸಿದ ಎನ್​ಐಎ, ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

Last Updated : Oct 28, 2020, 12:17 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.