ETV Bharat / state

ಕಾಂಗ್ರೆಸ್​​ನಲ್ಲಿ ಮತ್ತೆ ಶುರುವಾಯ್ತು ಮುಂದಿನ ಸಿಎಂ ಕೂಗು: ಹೈಕಮಾಂಡ್ ಮಧ್ಯ ಪ್ರವೇಶ? - ವಿಧಾನಸಭೆ ಚುನಾವಣೆ

ಕಾಂಗ್ರೆಸ್​​ ಪಕ್ಷದಲ್ಲಿ ಈಗ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ಈ ಮಧ್ಯೆ ಪರಸ್ಪರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಬೆಂಬಲಿಗರು ಮುಂದಿನ ಸಿಎಂ ಪ್ರಸ್ತಾಪ ಆರಂಭಿಸಿದ್ದಾರೆ.

Next cm fight in Karnataka congress
ಕಾಂಗ್ರೆಸ್​​ ನಾಯಕರು
author img

By

Published : Nov 28, 2022, 2:22 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಹೋಯ್ತು ಎಂದುಕೊಳ್ಳುವ ಹೊತ್ತಿಗೆ ಏನಾದರೂ ಒಂದು ಯಡವಟ್ಟು ಆಗಿ ಬಿಡುತ್ತದೆ. ರಾಜ್ಯ ಕಾಂಗ್ರೆಸ್ ಸಂಘಟಿತವಾಗುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ 'ಮುಂದಿನ ಸಿಎಂ' ಕಿತ್ತಾಟ, ಕೂಗು ಕೇಳಿಬರಲಾರಂಭಿಸಿದೆ.

Next cm fight in Karnataka congress
ರಾಜ್ಯ ಕಾಂಗ್ರೆಸ್​​ ನಾಯಕರು

ಮುಂದಿನ ಸಿಎಂ ಪ್ರಸ್ತಾಪ: ರಾಜ್ಯ ಕಾಂಗ್ರೆಸ್​​ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ತಾವೇ ಮುಂದಿನ ಸಿಎಂ ಎಂದು ಇಬ್ಬರೂ ಹೇಳಿಕೊಂಡಿದ್ದರು. ಹೈಕಮಾಂಡ್ ನಾಯಕರು ತಾಕೀತು ಮಾಡಿದ ಬಳಿಕ ಇವರ ಬೆಂಬಲಿಗರ ಮೂಲಕ ಹೇಳಿಸಲು ಆರಂಭಿಸಿದ್ದರು.

ಆದರೆ, ಇದಕ್ಕೂ ಆಗಾಗ ಕಡಿವಾಣ ಬೀಳುತ್ತಲೇ ಇತ್ತು. ಪಕ್ಷದಲ್ಲಿ ಈಗ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ಈ ಮಧ್ಯೆ ಪರಸ್ಪರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಬೆಂಬಲಿಗರು ಮುಂದಿನ ಸಿಎಂ ಪ್ರಸ್ತಾಪ ಆರಂಭಿಸಿದ್ದಾರೆ.

ನಿನ್ನೆ ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಮುಂದಿನ ಸಿಎಂ ಕೂಗು ಕೇಳಿ ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ವತಃ ತಾವು ಮುಂದಿನ ಸಿಎಂ ಆಕಾಂಕ್ಷಿಗಳು ಎಂಬ ರೀತಿ ಬಣ್ಣಿಸಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಬಲಿಗರಾದ ಶಾಸಕ ಬೈರತಿ ಸುರೇಶ್, ಮಾಜಿ ಸಚಿವ ಹೆಚ್.ಎಂ ರೇವಣ್ಣ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ಸಮಾರಂಭದ ವೇದಿಕೆ ಮೇಲೆ ಘೋಷಣೆಗಳನ್ನು ಮಾಡಿದ್ದಾರೆ.

Next cm fight in Karnataka congress
ರಾಜ್ಯ ಕಾಂಗ್ರೆಸ್​​ ನಾಯಕರು

ಒಟ್ಟಾರೆ ಪಕ್ಷ ಸಂಘಟನೆ, ಬಲವರ್ಧನೆ ದೃಷ್ಟಿಯಲ್ಲಿ ಇದೊಂದು ಬೇಡದ ಬೆಳವಣಿಗೆಯಾಗಿದ್ದು, ನಾಯಕರಿಗೆ ತಮ್ಮ ಸ್ಥಾನ ಬಲಿಷ್ಠವಾದದ್ದು, ಪಕ್ಷದ ಕಾರ್ಯಕರ್ತರಿಗೆ ಈಗಲೇ ಸಂದೇಶ ರವಾನೆ ಆಗಲಿ ಎಂಬ ಆಶಯ ಎದ್ದು ಕಾಣುತ್ತಿದೆ. ನಿನ್ನೆಯ ಬೆಳವಣಿಗೆ ಇದಕ್ಕೆ ಪೂರಕವಾದ ಸಂದೇಶವನ್ನು ರವಾನಿಸಿದೆ. ಬಿಜೆಪಿ ವಿರುದ್ಧ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರ ಮನೋಬಲ ಹೆಚ್ಚಿಸುವ ಕಾರ್ಯ ಮಾಡಬೇಕಿರುವ ನಾಯಕರು ಇದೇ ರೀತಿ ಕಿತ್ತಾಡಿದರೆ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಾಗಲಿದೆ ಎಂದು ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Next cm fight in Karnataka congress
ರಾಜ್ಯ ಕಾಂಗ್ರೆಸ್​​ ನಾಯಕರು

ಎಲ್ಲದಕ್ಕೂ ಕಾರಣ ಅರ್ಜಿ: ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಕೈಕಮಾಂಡ್ ನೀಡಿದ ಆದೇಶದ ಹಿನ್ನೆಲೆ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡಲಾಗಿದೆ. ನ.5 ರಿಂದ 21ರವರೆಗೆ ಅರ್ಜಿ ಸ್ವೀಕರಿಸಲಾಗಿದ್ದು, 1350 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಸ್ವತಃ ಡಿ.ಕೆ. ಶಿವಕುಮಾರ್ (ಕನಕಪುರದಿಂದ ಮರು ಆಯ್ಕೆ ಬಯಸಿ) ಹಾಗೂ ಸಿದ್ದರಾಮಯ್ಯ (ಕ್ಷೇತ್ರ ಆಯ್ಕೆ ಹೈಕಮಾಂಡ್​ಗೆ ಬಿಟ್ಟು) ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರೂ ಪ್ರಬುದ್ಧ ನಾಯಕರ ಬೆಂಬಲಿಗರು ಬಹುತೇಕ ಕ್ಷೇತ್ರಗಳಿಂದ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ಬಲಪ್ರದರ್ಶನದ ಸರದಿ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಬೆಂಬಲಿಗರ ಮೂಲಕ ಹಾಗೂ ಸ್ವತಃ ತಾವೇ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲು ಇಬ್ಬರೂ ನಾಯಕರು ಸಿದ್ಧತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

ಸುರೇಶ್ ಆರಂಭ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ನಿನ್ನೆ ವಿ. ನಾಗೇನಹಳ್ಳಿಯಲ್ಲಿ ಕನಕದಾಸರ ಜಯಂತಿ ಆಚರಿಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮುಂದಿನ ಸಿಎಂ ಪ್ರಸ್ತಾಪಕ್ಕೆ ಚಾಲನೆ ನೀಡಿದ್ದಾರೆ. ಕನಕದಾಸ ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಘೋಷಣೆ ಹಾಕಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳೂ ಕೂಡ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

ಚಾಮರಾಜಪೇಟೆಯಲ್ಲಿ ಒಕ್ಕಲಿಗ ಸಮುದಾಯದ ವಿಶೇಷ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಂದರ್ಭ, ನಿಮ್ಮ ಶಕ್ತಿ ಉತ್ಸಾಹ ನೋಡಿದ್ರೆ, ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ನೀವು ಮನಸ್ಸು ಮಾಡಿದರೆ ವಿಧಾನಸೌಧ, ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ. ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದ್ದಾರೆ.

ಇದೇ ಸಭೆಯಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ಡಿಕೆಶಿ ಸಭೆಯಲ್ಲಿ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಮಾಡಿಕೊಂಡರು. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಸಂಜೆ ಮತ್ತೆ ಸಿದ್ದು ಪರ ಕೂಗು: ಇದಾಗಿ ಸಂಜೆ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಅವಕಾಶ ಇದೆ. ಅವರು ಬಲಿಷ್ಠ ನಾಯಕರು. ಕೂಗುಮಾರಿಗಳು ಬಲಿಷ್ಠರಾದ ಸಿದ್ದರಾಮಯ್ಯ ಮೇಲೆ ಮುಗಿ ಬೀಳುತ್ತಾರೆ. ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಎಲ್ಲ ಅವಕಾಶ ಇದೆ. ಇವರು ಸ್ವಾಭಿಮಾನ, ಧೈರ್ಯವನ್ನ ತಂದುಕೊಟ್ಟಿದ್ದಾರೆ ಎಂದರು.

ಇದರಿಂದ ಉತ್ಸಾಹ ಭರಿತರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ, ನನ್ನನ್ನು ಸಿದ್ದರಾಮಯ್ಯ ಅಂತಾ ಸಫೋರ್ಟ್ ಮಾಡಬೇಡಿ. ನಾನು ಅರ್ಹ ಇದ್ದೇನೋ ಇಲ್ವಾ ಎಂದು ನೋಡಿ ಸಫೋರ್ಟ್ ಮಾಡಿ ಎಂದು ಪರೋಕ್ಷವಾಗಿ ಸಿಎಂ ಇಂಗಿತ ವ್ಯಕ್ತಪಡಿಸಿದರು.

ಹೈಕಮಾಂಡ್ ಮಧ್ಯ ಪ್ರವೇಶ?: ಮುಂಬರುವ ವಿಧಾನಸಭೆ ಚುನಾವಣೆಗೆ ಅರ್ಜಿ ಸ್ವೀಕರಿಸಿದ ಬಳಿಕ ಒಂದೊಂದೇ ಸಮಸ್ಯೆಗಳು ಕಾಂಗ್ರೆಸ್​​ನಲ್ಲಿ ಎದುರಾಗುತ್ತಿದೆ. ಮುಂದಿನ ಸಿಎಂ ಕೂಗನ್ನು ಹತ್ತಿಕ್ಕಲು ಪಕ್ಷದ ಹೈಕಮಾಂಡ್ ನಡೆಸಿದ್ದ ಯತ್ನ ವಿಫಲವಾದಂತಿದೆ. ಇದೀಗ ಮತ್ತೆ ಮುಂದಿನ ಸಿಎಂ ಕೂಗು ತಾರಕಕ್ಕೆ ಏರುವ ಸ್ಥಿತಿ ನಿರ್ಮಾಣವಾಗಿದ್ದು, ಹೈಕಮಾಂಡ್ ಏನು ಮಾಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಹೈಕಮಾಂಡ್ ನಿರ್ಧಾರ ಅಂತಿಮ: ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕೆಂದು ಪಕ್ಷ ನಿರ್ಧರಿಸಲಿದೆ. ಇಲ್ಲಿ ರಾಜ್ಯ ಮಟ್ಟದಲ್ಲಿ ಯಾವುದೇ ನಿರ್ಧಾರ ಆಗಲ್ಲ. ಮುಂದಿನ ಸಿಎಂ ವಿಚಾರ ಹೆಚ್ಚು ಚರ್ಚೆಗೆ ಬಂದರೆ ಅದನ್ನು ಹೇಗೆ ನಿಭಾಯಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳಿಗೆ ಗೊತ್ತಿದೆ.

ಪಕ್ಷ ಆಂತರಿಕವಾಗಿ ಬಲವಾಗಿದೆ. ಮುಂದೆ ಅಧಿಕಾರಕ್ಕೆ ಬರುತ್ತೇವೆ. ಸೂಕ್ತ ವ್ಯಕ್ತಿ ಸಿಎಂ ಆಗುತ್ತಾರೆ. ಅವರು ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.

ಒಳ-ಹೊರಗಿನವರು ಎಂಬ ಬೇಧವಿಲ್ಲ: ಸಿದ್ದರಾಮಯ್ಯ ಹಿಂದೆ ಸಿಎಂ ಆಗಿ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಇಬ್ಬರಲ್ಲಿ ಯಾರು ಸಿಎಂ ಆದರೂ ರಾಜ್ಯದಲ್ಲಿ ಪಕ್ಷದ ನಾಯಕರ ವಿರೋಧ ಎದುರಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹೈಕಮಾಂಡ್ ಬಲವಾಗಿದೆ.

ಮಲ್ಲಿಕಾರ್ಜುನ ಖರ್ಗೆ ನೇತೃತ್ವ ಇದ್ದು, ಇಲ್ಲಿನ ರಾಜಕೀಯ ನಾಯಕರ ಶಕ್ತಿ, ಸಾಮರ್ಥ್ಯ ಅವರಿಗೆ ತಿಳಿದಿದೆ. ಯಾರೇ ಮುಖ್ಯಮಂತ್ರಿ ಆಗಲಿ ಸಹಕಾರ ಇರಲಿದೆ. ಸದ್ಯ ಬಿಜೆಪಿ ಭ್ರಷ್ಟ ಸರ್ಕಾರ ತೊಲಗಲಿ ಎಂಬುದು ಜನರ ಆಶಯವಾಗಿದೆ ಎಂದು ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಕನಕ ಜಯಂತಿ ಸಮಾರಂಭ.. ಮತ್ತೆ ಮೊಳಗಿದ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.