ಬೆಂಗಳೂರು : ಕೊರೊನಾ ವೈರಸ್ ನಿರ್ಮೂಲನೆಗೆ ಇದೀಗ ಹೊಸ ಲಸಿಕೆ ಸಿದ್ಧವಾಗಿವೆ. ಅವುಗಳ ವಿತರಣೆಗೆ ಆರೋಗ್ಯ ಇಲಾಖೆ ಅಗತ್ಯ ತಯಾರಿ ನಡೆಸಿದೆ.
ಪುಣೆಯಿಂದ ರಾಜ್ಯಕ್ಕೆ ಬರುವ ವ್ಯಾಕ್ಸಿನ್ ನೇರ ಸ್ಟೋರೇಜ್ ಕೇಂದ್ರಗಳಿಗೆ ತಲುಪುತ್ತೆ. ನಂತರ ಬೆಂಗಳೂರು ಹಾಗೂ ಬೆಳಗಾವಿಯಲ್ಲಿರುವ ಕೋಲ್ಡ್ ಸ್ಟೋರೇಜ್ ಸಿಸ್ಟಂನಲ್ಲಿ ಮೊದಲ ಒಂದು ವಾರಗಳ ಕಾಲ ನಿಗಾವಣೆಯಲ್ಲಿಡಲಾಗುತ್ತೆ. ನಂತರ ಆಯಾ ಜಿಲ್ಲಾ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತದೆ.
ಓದಿ: ಎಲ್ಲ ಶಾಸಕರಿಗೂ ಸಚಿವರಾಗುವಾಸೆ ಇರುತ್ತೆ, ಸಿಎಂ ನಿರ್ಧಾರಕ್ಕೆ ನಾನು ಬದ್ಧ: ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಯಾವ ರೀತಿಯಲ್ಲಿ ಸ್ಟೋರೇಜ್ ಕೆಲಸ ಮಾಡುತ್ತೆ? ಎಷ್ಟು ಸಾಮರ್ಥ್ಯವನ್ನ ಹೊಂದಿರುತ್ತೆ? ಹೇಗೆ ನಿರ್ವಹಣೆ ಮಾಡಬೇಕು? ಲಸಿಕೆ ಬಂದ ನಂತರ ನಿಗಾವಣೆ ಹೇಗೆ?. ಆಯಾ ಜಿಲ್ಲೆಗಳಿಗೆ ರವಾನೆ ಯಾವ ರೀತಿಯಲ್ಲಿ ಎಂಬುದನ್ನ ವಾಕ್ ಇನ್ ಕೂಲರ್ (walk in cooler)ನ ಜವಾಬ್ದಾರಿ ಹೊತ್ತಿರುವ ವೀಣಾ ಅವರು ವಿವರಿಸಿದ್ದಾರೆ.