ETV Bharat / state

ಬೆಂಗಳೂರು: ಬುಧವಾರದಿಂದ ಶಾಶ್ವತವಾಗಿ ಬಾಗಿಲು ಹಾಕಲಿರುವ ಇತಿಹಾಸ ಪ್ರಸಿದ್ಧ ನ್ಯೂ ಕೃಷ್ಣ ಭವನ

author img

By ETV Bharat Karnataka Team

Published : Dec 4, 2023, 7:38 PM IST

ಇತಿಹಾಸ ಪ್ರಸಿದ್ಧ ನ್ಯೂ ಕೃಷ್ಣ ಭವನವು ಬುಧವಾರ ಶಾಶ್ವತವಾಗಿ ಬಾಗಿಲು ಹಾಕಲಿದೆ.

ಬೆಂಗಳೂರು
ಬೆಂಗಳೂರು

ಬೆಂಗಳೂರು : ಮಲ್ಲೇಶ್ವರದ ಹೃದಯಭಾಗದಲ್ಲಿರುವ ನ್ಯೂ ಕೃಷ್ಣ ಭವನ ಡಿಸೆಂಬರ್ 6 ರಂದು ಮುಚ್ಚುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. 7 ದಶಕಗಳಿಂದ ಅಪ್ರತಿಮ ಪಾಕಶಾಲೆಯಾಗಿದ್ದ ಈ ಆಸ್ತಿಯನ್ನು ಹೆಸರಾಂತ ಆಭರಣ ಸರಪಳಿಗೆ ಮಾರಾಟ ಮಾಡಲಾಗಿದ್ದು, ಹೋಟೆಲ್ ಮುಚ್ಚಿ ವಾಣಿಜ್ಯ ಕಟ್ಟಡಕ್ಕೆ ದಾರಿ ಮಾಡಿಕೊಡಲಿದೆ.

1954ರಲ್ಲಿ ಗೋಪಿನಾಥ್ ಪ್ರಭು ಪ್ರಾರಂಭಿಸಿದ್ದ ನ್ಯೂ ಕೃಷ್ಣ ಭವನವು ತಲೆಮಾರುಗಳಿಂದ ಭೋಜನ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದು, ಪ್ರಸಿದ್ಧ ಬಟನ್ ಇಡ್ಲಿ, ಮಂಗಳೂರು ನೀರ್ ದೋಸೆ, ಗ್ರೀನ್ ಮಸಾಲಾ ಇಡ್ಲಿ, ಸೇಲಂ ಸಾಂಬಾರ್ ವಡಾ, ಉಡುಪಿ ಬನ್ಸ್ , ಮಂಡ್ಯ ರಾಗಿ ದೋಸೆ, ಓಪನ್ ಬಟರ್ ದೋಸೆ ಇಲ್ಲಿನ ವಿಶೇಷ ತಿಂಡಿ ತಿನಿಸುಗಳು ಎನ್ನಿಸಿಕೊಂಡಿದ್ದವು.

ನ್ಯೂ ಕೃಷ್ಣ ಭವನದ ಪರಂಪರೆ ಅದರ ರುಚಿಕರವಾದ ಪಾಕಪದ್ಧತಿ ಮತ್ತು ಅನನ್ಯ ವಾತಾವರಣದ ಜೊತೆಗೆ ಆರಂಭಿಕ ದಿನಗಳಲ್ಲಿ ಇಲ್ಲಿನ ವಸತಿಗೃಹ ರಾಜ್ಯದ ವಿವಿಧೆಡೆಗಳಿಂದ ವೈವಿಧ್ಯಮಯ ಜನರನ್ನು ಆಕರ್ಷಿಸಿತ್ತು. ಈ ಹೋಟೆಲ್ ಝೀರೋ ವೇಸ್ಟ್ ಪಾಲಿಸಿಯನ್ನು ಅಳವಡಿಸಿಕೊಂಡು ಆತಿಥ್ಯ ಉದ್ಯಮಕ್ಕೆ ಉಜ್ವಲ ಉದಾಹರಣೆಯಾಗಿ ಮಾರ್ಪಟ್ಟಿತ್ತು.

ರಾಗಿ ರೊಟ್ಟಿ, ನೀರ್ ದೋಸೆ ಮತ್ತು ಹಸಿರು ಇಡ್ಲಿಯಂತಹ ಖಾದ್ಯಗಳನ್ನು ಪರಿಚಯಿಸಿ ಹೊಸ ಪರಂಪರೆಯನ್ನು ಹೋಟೆಲ್ ಉದ್ಯಮದಲ್ಲಿ ಸೃಷ್ಟಿಸಿದರು ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ, ಪ್ರಭು ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು.

ಬೃಹತ್ ಬೆಂಗಳೂರು ಹೋಟೆಲ್​ ಅಸೋಸಿಯೇಶನ್‌ ಅಧ್ಯಕ್ಷ ಪಿ ಸಿ ರಾವ್ ಮಾತನಾಡಿ, ಮಲ್ಲೇಶ್ವರದ ನಿವಾಸಿಗಳು ದಕ್ಷಿಣ ಭಾರತದ ಪ್ರಸಿದ್ಧ ತಿನಿಸುಗಳನ್ನು ರಾಜಧಾನಿಯ ಜನರಿಗೆ ಪರಿಚಯಿಸಿದ ಖ್ಯಾತಿ ಹೊಂದಿದೆ. ಇವನ್ನು ಪ್ರೀತಿಯಿಂದ ಜನರು ಸಹ ಸ್ವೀಕರಿಸಿದ್ದರು. ಕೃಷ್ಣ ಭವನ ರೆಸ್ಟೋರೆಂಟ್‌ಗಿಂತ ಹೆಚ್ಚಾಗಿ, ಇತಿಹಾಸದ ಭಾಗವಾಗಿದೆ ಎಂದು ಹೇಳಿದರು.

'ಫುಡ್ ಆನ್ ವಾಲ್' ಯೋಜನೆ (ಮಂಗಳೂರು) : ಕೈಯಲ್ಲಿ ಹಣವಿಲ್ಲದಿದ್ದರೂ ಹಸಿದವರಿಗೆ ಹೋಟೆಲ್​ನಲ್ಲಿ ಊಟ ನೀಡುವ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಾರಂಭ (ಅಕ್ಟೋಬರ್ 19-2023) ಮಾಡಿದೆ. ರಾಜ್ಯದ ಏಳು ನಗರಗಳ 12 ಹೋಟೆಲ್​ಗಳಲ್ಲಿ ಫುಡ್ ಆನ್ ವಾಲ್ ಎಂಬ ಯೋಜನೆ ನಡೆಯುತ್ತಿದೆ.

ಹೌದು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು 'ಫುಡ್ ಆನ್ ವಾಲ್' ಎಂಬ ಯೋಜನೆಯನ್ನು ಆರಂಭಿಸಲಾಗಿತ್ತು. ಬಡವರ ಹಸಿವು ತಣಿಸುವ ಕಾರ್ಯವನ್ನು ಮಂಗಳೂರಿನ ರೋಹನ್ ಶಿರಿ ಅವರ ನೇತೃತ್ವದ ಯೂನಿವರ್ಸೆಲ್ ನಾಲೆಡ್ಜ್ ಟ್ರಸ್ಟ್ ಆರಂಭಿಸಿತ್ತು. ಬಡವರ ಹಸಿವು ತಣಿಸಲೆಂದು 'ಫುಡ್ ಆನ್ ವಾಲ್' ವ್ಯವಸ್ಥೆ ಇರುವ ಹೋಟೆಲ್ ಹೊರಗಡೆ ಅಳವಡಿಸಿರುವ ಟೋಕನ್ ತೆಗೆದುಕೊಂಡು ಕೌಂಟರ್​ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿತ್ತು.

ಇದನ್ನೂ ಓದಿ: ಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ 'ಫುಡ್ ಆನ್ ವಾಲ್' ಯೋಜನೆ.. ರಾಜ್ಯದ 12 ಹೋಟೆಲ್​ಗಳಲ್ಲಿ ಕಾರ್ಯಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.