ETV Bharat / state

ಗಸ್ತು ತಿರುಗುವ ಹೊಯ್ಸಳ ಪೊಲೀಸರಿಗೆ ಹೊಸ ಮಾರ್ಗಸೂಚಿ.. ಕ್ರೈಂ ನಡೆದ್ರೇ ಬೀಟ್‌ನಲ್ಲಿರುವವರೇ ಹೊಣೆ.. - ಹೊಯ್ಸಳ ಪೊಲೀಸ್​ ವ್ಯವಸ್ಥೆ

ಗಸ್ತಿನಲ್ಲಿರುವಾಗ ಸಿಬ್ಬಂದಿ ಏನೆಲ್ಲ ಕೆಲಸ ಮಾಡಿದ್ದರು ಎಂಬುದರ ಬಗ್ಗೆ ಪ್ರತಿದಿನ ವರದಿ ನೀಡುವ ಸಾಫ್ಟ್​​ವೇರ್ ಅಪ್​​​ಡೇಟ್ ಮಾಡಬೇಕಿದೆ. ಹೊಯ್ಸಳದಲ್ಲಿ ಈಗಾಗಲೇ ಜಿಪಿಆರ್​​​ಎಸ್ ಅಳವಡಿಸಲಾಗಿದೆ. ಆದರೆ, ಭೌಗೋಳಿಕ ಆಧಾರದ‌ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೆ ಜಿಯೋ‌ ಫೆನ್ಸಿಂಗ್ ಮಾಡಿ ಸಾಫ್ಟ್​​ವೇರ್​​​ನಲ್ಲಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ..

Hoysala Police Van
ಹೊಯ್ಸಳ ಪೊಲೀಸ್​ ವ್ಯಾನ್​
author img

By

Published : Jul 23, 2021, 10:41 PM IST

ಬೆಂಗಳೂರು : ನಗರದಲ್ಲಿ ಕಳ್ಳತನ‌ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಹಾಗೂ ಪೊಲೀಸರಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಗಸ್ತು ತಿರುಗುವ ಹೊಯಳ್ಸ ವಾಹನ ವ್ಯವಸ್ಥೆಯಲ್ಲಿ ಮತ್ತಷ್ಟು ಬಲಪಡಿಸಲು ನಗರ ಪೊಲೀಸರು ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದಾರೆ.

ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದೆ. ಉಳಿದ ಸಮಯದಲ್ಲಿ ಒಂದೇ ಕಡೆ ವಾಹನ ನಿಲ್ಲಿಸಿ ಕಾಲಹರಣ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಹಾಗೂ ಅಪರಾಧ ಘಟನೆಗಳಾದಾಗ ಅವರನ್ನು ಸಹ ಹೊಣೆಗಾರರನ್ನಾಗಿ ಮಾಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆ ಪರಿಚಯಿಸಲು ಮುಂದಾಗಿದ್ದಾರೆ.

New Guidelines released to Hoysala police system
ಹೊಯ್ಸಳ ಪೊಲೀಸರಿಗೆ ಹೊಸ ಸಾಫ್ಟ್​ವೇರ್​ ಸಿದ್ಧತೆ

ಪ್ರತಿದಿನ ವರದಿ ಕಡ್ಡಾಯ : ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ನಗರದಲ್ಲಿ 110 ಪೊಲೀಸ್ ಠಾಣೆಗಳಿವೆ. ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್​​ಗಳು ಗಸ್ತು ತಿರುಗುತ್ತಿವೆ. ಮುಂದಿನ‌ ದಿನಗಳಲ್ಲಿ ಇನ್ನೂ 40 ಹೊಯ್ಸಳ ವಾಹನ ಸೇರ್ಪಡೆಯಾಗಲಿವೆ. ಈ ವ್ಯವಸ್ಥೆಯನ್ನು ಇಷ್ಟು ವರ್ಷಗಳ ಕಾಲ ಆಯಾ ಪೊಲೀಸ್ ಠಾಣೆ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಸಂಪೂರ್ಣ ನಿಗಾವಹಿಸಲಿದೆ.

ಗಸ್ತಿನಲ್ಲಿರುವಾಗ ಸಿಬ್ಬಂದಿ ಏನೆಲ್ಲ ಕೆಲಸ ಮಾಡಿದ್ದರು ಎಂಬುದರ ಬಗ್ಗೆ ಪ್ರತಿದಿನ ವರದಿ ನೀಡುವ ಸಾಫ್ಟ್​​ವೇರ್ ಅಪ್​​​ಡೇಟ್ ಮಾಡಬೇಕಿದೆ. ಹೊಯ್ಸಳದಲ್ಲಿ ಈಗಾಗಲೇ ಜಿಪಿಆರ್​​​ಎಸ್ ಅಳವಡಿಸಲಾಗಿದೆ. ಆದರೆ, ಭೌಗೋಳಿಕ ಆಧಾರದ‌ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೆ ಜಿಯೋ‌ ಫೆನ್ಸಿಂಗ್ ಮಾಡಿ ಸಾಫ್ಟ್​​ವೇರ್​​​ನಲ್ಲಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ.

ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಫುಲ್​ ಅಲರ್ಟ್ ​: ಬಾರ್, ಕ್ಲಬ್, ಬಸ್ ನಿಲ್ದಾಣ ಸೇರಿ ಜನಸಂದಣಿ ಇರುವ ಹಾಗೂ ಅಪರಾಧ ಘಟನೆಗಳು ನಡೆಯುವ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಪೊಲೀಸರು, ಹೆಚ್ಚಾಗಿ ಈ ಏರಿಯಾಗಳಲ್ಲಿ ಹೊಯ್ಸಳ ಪೊಲೀಸರು ಕರ್ತವ್ಯ ನಿರ್ವಹಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಗ್ಗಿನ ಅವಧಿಯಲ್ಲಿ ಶಾಲಾ-ಕಾಲೇಜುಗಳ ಅಸುಪಾಸಿನಲ್ಲಿ ಸಂಜೆ ವೇಳೆ ಪಾರ್ಕ್ ಬಳಿ ಹಾಗೆಯೇ ರಾತ್ರಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವಸತಿ ಪ್ರದೇಶಗಳಲ್ಲಿ ಹೆಚ್ಚಿನದಾಗಿ ಹೊಯ್ಸಳ ಗಸ್ತು ತಿರುಗುವ ಹಾಗೆ ಕ್ರಮ ಕೈಗೊಳ್ಳಲಾಗುತ್ತಿದೆ‌.

10 ನಿಮಿಷಕ್ಕಿಂತ ಹೆಚ್ಚು ಒಂದೆ ಕಡೆ ಇರುವಂತಿಲ್ಲ : ತಮಗೆ ನೀಡಿರುವ ಏರಿಯಾಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ.‌ ನೀಡಲಾಗಿರುವ ಬೀಟ್​​​ನಲ್ಲಿ ಏನಾದರೂ ಅಪರಾಧ ಘಟನೆ ನಡೆದರೆ ಆಯಾ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಏರಿಯಾದಲ್ಲಿ ನಡೆಯುವ ಕ್ರೈಂ ಸ್ಪಾಟ್​​​ಗಳಲ್ಲಿ ನಿರಂತರ ಗಸ್ತು ಕಾಯಬೇಕು. ಸರಗಳ್ಳತನ, ಸುಲಿಗೆ, ಕಳ್ಳತನ ಪ್ರಕರಣಗಳಿಗೆ ಬೀಟ್ ಪೊಲೀಸರನ್ನೇ ಜವಾಬ್ದಾರಿ ಮಾಡುವ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿ ಏನೆಲ್ಲ ಇರಲಿದೆ :

  • ಇನ್ಮುಂದೆ ಕಮಾಂಡ್ ಸೆಂಟರ್ ಸಿಬ್ಬಂದಿಯ ನೂತನ ಹೊಯ್ಸಳ ವಾಹನ ವ್ಯವಸ್ಥೆ ಮಾಡಲಿದೆ.
  • ಪಾಳಿಯಲ್ಲಿರುವಾಗ ಏನೆಲ್ಲ ಕೆಲಸ ಮಾಡಿರುವ ಬಗ್ಗೆ ಪ್ರತಿದಿನ ರಿಪೋರ್ಟ್ ನೀಡಬೇಕು.
  • ಒಂದೇ‌ ಕಡೆ‌ 10 ನಿಮಿಷಕ್ಕಿಂತ ಹೆಚ್ಚು ಸಮಯ ಇರುವಂತಿಲ್ಲ.
  • ನಿಯೋಜಿಸಲಾಗಿರುವ ಬೀಟ್​​​ನಲ್ಲಿ ಏನಾದರೂ ಕ್ರೈಂ ನಡೆದರೆ ಗಸ್ತು ಪೊಲೀಸರೇ ಜವಾಬ್ದಾರಿ ಹೊರಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.