ETV Bharat / state

ರಾಜ್ಯದ ಜನತೆಗೆ ನೂತನ ಸಿಎಂ ಭರ್ಜರಿ ಕೊಡುಗೆ: ರೈತರ ಮಕ್ಕಳು, ವಿಧವೆಯರು, ಹಿರಿಯ ನಾಗರಿಕರಿಗೆ ಬಂಪರ್

ಇಂದು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಿರಿಯರು, ವಿದ್ಯಾರ್ಥಿಗಳು, ಮಕ್ಕಳಿಗೆ ಅನುಕೂಲವಾಗುವ ಯೋಜನೆಗಳ ಸಂಬಂಧ ಸಂಪುಟ ಸಭೆ ನಡೆಸಿ ಮಹತ್ವದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವುದಾಗಿ ಘೋಷಿಸಿದ್ದಾರೆ.

Sandhya suraksha pay increased to 1200
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
author img

By

Published : Jul 28, 2021, 3:30 PM IST

Updated : Jul 28, 2021, 5:01 PM IST

ಬೆಂಗಳೂರು: ರಾಜ್ಯದ ಜನತೆಗೆ ನೂತನ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಭರ್ಜರಿ ಉಡುಗೊರೆ ನೀಡಿದ್ದಾರೆ. ರೈತರ ಮಕ್ಕಳಿಗೆ, ವಿಕಲಚೇತ‌ನರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಒಟ್ಟು 2,368 ಕೋಟಿ ರೂ. ಬಂಪರ್ ಕೊಡುಗೆ ನೀಡಿದ್ದಾರೆ.

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಚೊಚ್ಚಲ ಸಚಿವ ಸಂಪುಟ ಸಭೆ‌ ನಡೆಸಿದ ಅವರು, ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಒಟ್ಟು ನಾಲ್ಕು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು, ಅವರು ವಿದ್ಯೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಹೊಸ ಶಿಷ್ಯ ವೇತನ ಜಾರಿಗೆ ನಿರ್ಧಾರ ಮಾಡಲಾಗಿದೆ‌. ಸುಮಾರು 1000 ಕೋಟಿ ರೂ. ಹೆಚ್ಚುವರಿ ವೆಚ್ಚದ ಯೋಜನೆ ಇದಾಗಿದೆ ಎಂದು ತಿಳಿಸಿದರು.

ರಾಜ್ಯದ ಜನತೆಗೆ ನೂತನ ಸಿಎಂ ಭರ್ಜರಿ ಕೊಡುಗೆ

ಹಿರಿಯ ನಾಗರಿಕರಿಗಾಗಿನ ಸಂಧ್ಯಾ ಸುರಕ್ಷಾ ವೇತನವನ್ನು 1000 ರೂ. ರಿಂದ ಅದನ್ನು 1,200 ರೂ.ಗೆ ಏರಿಕೆ‌ ಮಾಡಲು ನಿರ್ಧರಿಸಲಾಗಿದೆ‌. ಇದರಿಂದ 863.52 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದ್ದು, ಈ ಮೂಲಕ 35.98 ಲಕ್ಷ ಫಲಾನುಭವುಗಳಿಗೆ ಲಾಭ ಆಗಲಿದೆ‌ ಎಂದು ವಿವರಿಸಿದರು.

ವಿಧವಾ ವೇತನವನ್ನು 600 ರೂ. ನಿಂದ 800 ರೂ. ಗೆ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ 416 ಕೋಟಿ ಹೆಚ್ಚುವರಿ ಹೊರೆ ಆಗಲಿದೆ. ಸುಮಾರು 17.25 ಲಕ್ಷ ಪಲಾನುಭವಿಗಳಿಗೆ ಪ್ರಯೋಜನ ಆಗಲಿದೆ. ಇದರ ಜೊತೆಗೆ ವಿಕಲಚೇತನರ ವೇತನವನ್ನು ಪ್ರಸಕ್ತ 600 ರೂ. ನಿಂದ 800 ರೂ‌. ಗೆ ಏರಿಕೆ ಮಾಡಲು ನಿರ್ಧರಿಸಿದ್ದೇವೆ. ಇದರಿಂದ 90 ಕೋಟಿ ಹೆಚ್ಚುವರಿ ಹೊರೆ ಆಗಲಿದ್ದು, ಸುಮಾರು 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ಆಗಲಿದೆ. ಜನರನ್ನು ಸಶಕ್ತಗೊಳಿಸುವುದು ಮಾನವ ಸಂಪನ್ಮೂಲ ಮೇಲಿನ ಬಂಡವಾಳ ಆಗಿದೆ. ಅದು ವೆಚ್ಚ ಅಲ್ಲ ಎಂದು ಮಾಹಿತಿ ನೀಡಿದರು.

ಜನಪರ ಆಡಳಿತದ ಸ್ಟಾಂಪ್ ಮೂಡಿಸುತ್ತೇನೆ:

ತನ್ನ ಆಡಳಿತದಲ್ಲಿ ಜನಪರ ಆಡಳಿತದ ಸ್ಟಾಂಪ್ ಮೂಡಿಸುತ್ತೇನೆ ಎಂದು ಹೇಳುವ ಮೂಲಕ ನಾನು ಯಾವುದೇ ರಬ್ಬರ್ ಸ್ಟಾಂಪ್ ಸಿಎಂ ಅಲ್ಲ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಹಲವು ಜನಪರ ಯೋಜನೆ ಕೊಟ್ಟಿದ್ದಾರೆ. ಉತ್ತಮ ಆಡಳಿತ ಕೊಟ್ಟಿದ್ದಾರೆ. ಅದನ್ನೆಲ್ಲವನ್ನೂ ನಾವು ಮುಂದುವರಿಸುತ್ತೇವೆ. ಅವರ ನೀತಿಯನ್ನು ನಾವು ಮುಂದುವರಿಸುತ್ತೇವೆ. ನಾನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ನಾನು ಸಿಎಂ ಆಗಿ ಒಂದು ತಂಡದ ರೂಪದಲ್ಲಿ ಅಧಿಕಾರದ ಕೇಂದ್ರವಾಗಿ ಕೆಲಸ‌ ಮಾಡುತ್ತೇವೆ ಎಂದು ಹೇಳಿದರು.

ಚಲ್ತಾ ಹೇ ನಡವಳಿಕೆ ನಡೆಯುವುದಿಲ್ಲ:

ಇನ್ನು ಮುಂದೆ ಅಧಿಕಾರಿಗಳಲ್ಲಿ ಚಲ್ತಾ ಹೇ ನಡವಳಿಕೆ ನಡೆಯುವುದಿಲ್ಲ. ಅಧಿಕಾರಿಗಳು ಟೀಂ ವರ್ಕ್ ಆಗಿ ಕೆಲಸ ಮಾಡಬೇಕು. ಅಧಿಕಾರಿಗಳಲ್ಲಿ ಚಲ್ತಾ ಹೇ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಸಿಎಂ ರವಾನಿಸಿದ್ದಾರೆ.

ಆಡಳಿತದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆಗಬಾರದು ಎಂಬ ಹಿನ್ನೆಲೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ನಮ್ಮ ಸರ್ಕಾರದ ದಿಕ್ಸೂಚಿ ಯಾವ ರೀತಿ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ನಮ್ಮ ಸರ್ಕಾರ ದೀನ ದಲಿತರು, ಕೂಲಿ ಕಾರ್ಮಿಕರು, ಬಡವರ ಪರ ಇದೆ ಎಂಬುದು ನಮ್ಮ ಆಡಳಿತದ ಕಾರ್ಯವೈಖರಿ, ಆದೇಶದ ಅನುಷ್ಠಾನದಿಂದ ಗೊತ್ತಾಗಬೇಕು. ಮೈಕ್ರೋ ಲೆವೆಲ್ ನಿರ್ವಹಣೆ ಮೂಲಕ ಆಡಳಿತ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಅಂತರ ಇಲಾಖೆಗಳ ಮಧ್ಯೆ ಸಮನ್ವಯತೆ ಉತ್ತಮವಾಗಿರಬೇಕು ಎಂಬುದಾಗಿ ಸೂಚಿಸಿದ್ದೇನೆ ಎಂದರು.

ರಾಜ್ಯದ ಜನತೆಗೆ ನೂತನ ಸಿಎಂ ಭರ್ಜರಿ ಕೊಡುಗೆ

ಸಕಾಲದಲ್ಲಿ ಕಾರ್ಯಕ್ರಮಗಳು ಅನುಷ್ಠಾನ ಆಗಬೇಕು. ವಿಳಂಬ ವೆಚ್ಚವನ್ನು ಹೆಚ್ಚಿಸಲಿದೆ‌ ಮತ್ತು ಅದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಕೋವಿಡ್ ಹಿನ್ನೆಲೆ ಹಣಕಾಸು ಶಿಸ್ತು ತರುವುದು ನಮ್ಮ ಆದ್ಯತೆಯಾಗಿದೆ. ಮಾರ್ಚ್ ಒಳಗೆ ಅನಗತ್ಯ ವೆಚ್ಚ ಕಡಿಮೆ ಮಾಡಬೇಕು.‌ ಕನಿಷ್ಠ 5% ವೆಚ್ಚ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಹೇಳಿದ್ರು.

ಕಡತ ವಿಲೇವಾರಿಗೆ ಹೊಸ ವ್ಯವಸ್ಥೆ ‌ಬರಲಿದೆ. ಕಡತ ವಿಲೇವಾರಿ ಅಭಿಯಾನ ಮಾಡಲು ಚಿಂತನೆ ನಡೆದಿದೆ‌. ನಿಗದಿತ ಸಮಯದಲ್ಲಿ ಕಾರ್ಯಕ್ರಮ ಅನುಷ್ಠಾನ ಆಗಬೇಕೆಂದು ಸೂಚಿಸಲಾಗಿದೆ. ನನ್ನ ಆಡಳಿತದ ಅವಧಿಯಲ್ಲಿ ಬದ್ಧ ವೆಚ್ಚ ಕಡಿಮೆ ಮಾಡಿ ಆರ್ಥಿಕ ಶಿಸ್ತು ತರಲು ಯತ್ನಿಸುತ್ತೇವೆ. ಕೋವಿಡ್ ಹಾಗೂ ಪ್ರವಾಹಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಲಸಿಕೆ, ಕೋವಿಡ್ ಮುಂಜಾಗ್ರತಾ ಕ್ರಮಗಳ ಸಂಬಂಧ ಹೆಚ್ಚಿನ ಒತ್ತು ಕೊಡುತ್ತೇವೆ ಎಂದು ಅಭಯ ನೀಡಿದ್ರು.

ನಾಳೆ ಕಾರವಾರಕ್ಕೆ ಭೇಟಿ:

ನಾಳೆ ಪ್ರವಾಹ ಪೀಡಿತ ಪ್ರದೇಶ ಕಾರವಾರ ಜಿಲ್ಲೆಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದು ಇದೇ ವೇಳೆ ಸಿಎಂ ತಿಳಿಸಿದರು. ಕಾರವಾರ ಜಿಲ್ಲೆಗೆ ಹೋಗಿ ನೆರೆ ಪರಿಸ್ಥಿತಿ ಅವಲೋಕನ‌ ಮಾಡುತ್ತೇವೆ. ಇತರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಅವಲೋಕಿಸಿ, ಬೆಂಗಳೂರಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದರು.

ದೆಹಲಿ ತೆರಳಿ ಪ್ರಧಾನಿ ಭೇಟಿ:

ನೆರೆ ಪ್ರದೇಶಗಳ ಅವಲೋಕನ‌ ಬಳಿಕ ದೆಹಲಿ ಹೋಗಿ ಪ್ರಧಾನಿ ಭೇಟಿಯಾಗಲಿದ್ದೇನೆ ಎಂದು ಇದೇ ವೇಳೆ ತಿಳಿಸಿದರು. ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ. ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಂಪುಟ ರಚನೆ ವರಿಷ್ಠರಲ್ಲಿ, ನಾಯಕರಲ್ಲಿ ಚರ್ಚೆ ನಡೆಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

Last Updated : Jul 28, 2021, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.