ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಕೆಲ ನಾಯಕರು ದೆಹಲಿಗೆ ಎಡತಾಕಿ ಲಾಬಿ ನಡೆಸಿದ್ದರೂ ಸಹ ಅವರಿಗೆ ಒಲಿಯದ ರಾಜ್ಯದ ಗದ್ದುಗೆ ಬೊಮ್ಮಾಯಿ ಪಾಲಿಗೆ ಬಂದಿದ್ದು, ಕುಟುಂಬಸ್ಥರ ಸಂತಸ ಇಮ್ಮಡಿಗೊಳ್ಳಲು ಕಾರಣವಾಗಿದೆ.
ಮಂಗಳವಾರ ರಾತ್ರಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಬೊಮ್ಮಾಯಿ ಅವರು ಆರ್.ಟಿ. ನಗರದಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದಂತೆ ಕುಟುಂಬ ಸದಸ್ಯರೆಲ್ಲ ಸೇರಿ ಆರತಿ ಬೆಳಗಿ, ಜೈಕಾರ ಕೂಗಿ ಅದ್ಧೂರಿ ಸ್ವಾಗತ ಕೋರಿದರು.
ಓದಿ : ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಶಕ್ತಿಕೇಂದ್ರ ಪ್ರವೇಶಿಸಿದ ನೂತನ ಸಿಎಂ
ಬಳಿಕ 'ನೀನೇ ರಾಜಕುಮಾರ' ಎಂಬ ಸಿನಿಮಾ ಹಾಡು ಹಾಕಿ ಅರ್ಧ ರಾತ್ರಿಯಲ್ಲೇ ಕುಣಿದು ಕುಪ್ಪಳಿಸಿದರು. ನೂತನ ಸಿಎಂ ಮನೆಯವರ ಸಂತಸದ ಕ್ಷಣಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.