ETV Bharat / state

ಚಿನ್ನಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ: ದಿನಕರನ್ - Dinakaran meets sasikala

ಶಶಿಕಲಾ ಬಿಡುಗಡೆಯಾಗುವ ಜ.27 ರಂದು ಅಭಿಮಾನಿಗಳು ಹಾಗೂ ಬೆಂಬಲಿಗರು ತಮಿಳುನಾಡಿನಿಂದ ಯಾರೂ ಜೈಲಿನ ಬಳಿ ಬರಬೇಡಿ. ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರಿಗೆ ಬರುವಂತೆ ಚಿನ್ನಮ್ಮನ ಸೋದರ ಸಂಬಂಧಿ ದಿನಕರನ್​ ಮನವಿ ಮಾಡಿದರು.

Shasikala
ಶಶಿಕಲಾ ನಟರಾಜನ್
author img

By

Published : Jan 21, 2021, 3:12 PM IST

Updated : Jan 21, 2021, 3:21 PM IST

ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ನಟರಾಜನ್ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ (Computed tomography) ಸೌಲಭ್ಯವಿಲ್ಲದ ಪರಿಣಾಮ ಹಾಗೂ ಭದ್ರತೆ ದೃಷ್ಟಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ

ಈ ಸಂಬಂಧ ಶಶಿಕಲಾ ಅವರ ಸೋದರ ಸಂಬಂಧಿ ದಿನಕರನ್ ಮಾತನಾಡಿ, ಅಮ್ಮನಿಗೆ ಅನಾರೋಗ್ಯ ಹಿನ್ನೆಲೆ ಇಂದು ಆಸ್ಪತ್ರೆಗೆ ಬಂದಿದ್ದೇನೆ. ಶಶಿಕಲಾ ಅವರಿಗೆ ಉಸಿರಾಟ ತೊಂದರೆ, ಕಫಾ ಸೇರಿದಂತೆ ಇನ್ನಿತರ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೈಲಾಧಿಕಾರಿಗಳು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆ ಒಳಹೋಗಿ ಶಶಿಕಲಾ ಅವರೊಂದಿಗೆ ಮಾತನಾಡಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಶಿಕಲಾ ಆರೋಗ್ಯ ಕುರಿತು ಸೋದರ ಸಂಬಂಧಿ ದಿನಕರನ್ ಮಾಹಿತಿ

ಶಶಿಕಲಾ ಬಿಡುಗಡೆಯಾಗುವ ಜ.27 ರಂದು ಅಭಿಮಾನಿಗಳು ಹಾಗೂ ಬೆಂಬಲಿಗರು ತಮಿಳುನಾಡಿನಿಂದ ಯಾರೂ ಜೈಲಿನ ಬಳಿ ಬರಬೇಡಿ. ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರಿಗೆ ಬರುವಂತೆ ಅವರು ಇದೇ ವೇಳೆ ಮನವಿ ಮಾಡಿದರು.

ಇದನ್ನೂ ಓದಿ: ಗಡಿಯಲ್ಲಿ ಶಿವಸೇನೆ ಹೈಡ್ರಾಮಾ: ಬೂದಿ ಮುಚ್ಚಿದ ಕೆಂಡವಾದ ಬೆಳಗಾವಿ

Last Updated : Jan 21, 2021, 3:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.