ETV Bharat / state

ಕೆಎಸ್ಆರ್​ಟಿಸಿ ವಿದ್ಯಾಚೇತನ ಆನ್​ಲೈನ್​ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ - ಜಗದೀಶ್ ಕುಮಾರ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿದ್ಯಾಚೇತನ ಆನ್​ಲೈನ್​ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಕೆಎಸ್ಆರ್​ಟಿಸಿ ವಿದ್ಯಾ ಚೇತನ ಆನ್​ಲೈನ್​ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ

author img

By ETV Bharat Karnataka Team

Published : Dec 8, 2023, 10:12 PM IST

ಬೆಂಗಳೂರು: ಸಿಬ್ಬಂದಿಗೆ ವಿಮಾ ಯೋಜನೆ, ಅತ್ಯುತ್ತಮ ಸಾರಿಗೆ ಉಪಕ್ರಮಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸ ಸಹಾಯಕ್ಕಾಗಿ ಜಾರಿ ಮಾಡಿರುವ ವಿದ್ಯಾಚೇತನ ಆನ್​ಲೈನ್​ ಉಪಕ್ರಮಕ್ಕಾಗಿ, ಡಿಜಿಟಲ್ ಅಕ್ಸೆಸಿಬಿಲಿಟಿ ಅಂಡ್ ಇನ್ಕ್ಲೂಷನ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.

ನವದೆಹಲಿಯ ಏರೋ ಸಿಟಿಯಲ್ಲಿ ಗವರ್ನೆನ್ಸ್ ನೌ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಉತ್ತರ ಪ್ರದೇಶ ನಿವೃತ್ತ ಡಿಜಿಪಿ ಡಾ.ವಿಕ್ರಮ್ ಸಿಂಗ್, ಚಾರು ಪ್ರಜ್ಞಾ, ಅಧಿಕಾರಿ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಕೈಲಾಸನಾಥ, ಕೆಎಸ್ಆರ್​ಟಿಸಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಕಾಮಗಾರಿ ಅಭಿಯಂತರ ಶಿವಕುಮಾರ್, ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಹೆಲ್ತಿ ವರ್ಕ್ ಪ್ಲೇಸ್ ಪ್ರಶಸ್ತಿ
ಹೆಲ್ತಿ ವರ್ಕ್ ಪ್ಲೇಸ್ ಪ್ರಶಸ್ತಿ

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆಎಸ್​ಆರ್​ಟಿಸಿಗೆ ಲಭಿಸಿದೆ. ನಿಗಮವು ಸತತ 9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಲೆಫ್ಟಿನೆಂಟ್ ಜನರಲ್ ಬಿ.ಕೆ.ರಪ್ಸವಾಲ್ ಅವರು, ಕೆಎಸ್​ಆರ್​ಟಿಸಿಯ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕಿ ಡಾ.ನಂದಿನಿ ದೇವಿ ಕೆ. ಅವರಿಗೆ ಪ್ರದಾನ ಮಾಡಿದರು. ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ವೆಂಕಟೇಶ ರೆಡ್ಡಿ ಜಿ.ಎ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಎಂ.ಬಿ.ಶಶಿಧರ್, ಏರ್ ಕಮಾಂಡರ್ ಬಿ.ಎಸ್.ಕನ್ವಾರ್ ಹಾಗೂ ಬ್ರಿಗೇಡಿಯರ್ ಎಂಆರ್​ಕೆ ರಾಜೇಶ್ ಪಣೀಕರ್ ಉಪಸ್ಥಿತರಿದ್ದರು.

ಕೆಎಸ್ಆರ್​ಟಿಸಿಗೆ ಪ್ರಶಸ್ತಿ: ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ಹೆಲ್ತಿ ವರ್ಕ್ ಪ್ಲೇಸ್ ಪ್ರಶಸ್ತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಕ್ಕಾಗಿ ಲಭಿಸಿದೆ. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಆರ್​ಟಿಸಿ ಪ್ರಶಸ್ತಿ ಪಡೆದುಕೊಂಡಿತು.

ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ರೋಲಿಂಗ್ ಶೀಲ್ಡ್ ನೊಂದಿಗೆ ಪ್ರಶಸ್ತಿ

ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಂಸ್ಥೆಯು 2022ನೇ ಸಾಲಿನ ಪ್ರತಿಷ್ಠಿತ ಸಂಯುಕ್ತ ರಾಷ್ಟ್ರಗಳ ಪ್ರಶಸ್ತಿಯನ್ನು (UN Award) ಪಡೆದಿದ್ದು, ಒಂದು ರಾಷ್ಟ್ರೀಯ ಮಟ್ಟದ ಲಾಭರಹಿತ ಆರೋಗ್ಯ ಸಂಸ್ಥೆಯಾಗಿದೆ. ಇದು ಸಾರ್ವಜನಿಕರಿಗೆ ಆರೋಗ್ಯ ಹಾಗೂ ಜೀವನ ಶೈಲಿ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದು, ಆರೋಗ್ಯಕರ ಜೀವನ ನಡೆಸಲು ಹಾಗೂ ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ.

ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ಪ್ರಶಸ್ತಿಯು ಈ ಬಾರಿ ಕೆಎಸ್ಆರ್​ಟಿಸಿಗೆ ಲಭಿಸಿದೆ. ನಿಗಮವು ತನ್ನ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸಿರುವ ಪರಿಣಾಮಕಾರಿ ಕ್ರಮಗಳು ಹಾಗೂ ಅವರಿಗಾಗಿ ನೀಡುವ ಪ್ರಾಮುಖ್ಯತೆಗಾಗಿ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿ ಪ್ರಶಸ್ತಿ ಪ್ರಕಟಿಸಿದೆ.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ಹೆಲ್ತಿ ವರ್ಕ್ ಪ್ಲೇಸ್ 2023ರ ಪ್ರಶಸ್ತಿಯನ್ನು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್​​ನ ಭಾರತೀಯ ಮುಖ್ಯಸ್ಥೆ ಶ್ರಬಾಣಿ ಬ್ಯಾನರ್ಜಿ ಮತ್ತು ಮಂಡಳಿ ಸದಸ್ಯೆ ಡಾ.ಸುಶೀಲಾ ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗಾಗಿ ಕೆಎಸ್​ಆರ್​ಟಿಸಿಗೆ ಪ್ರದಾನ ಮಾಡಿದರು.

ಹಾಸನದ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಜಗದೀಶ್ ಕುಮಾರ್ ಹಾಗೂ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಕೆಎಸ್ಆರ್​ಟಿಸಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಇದನ್ನೂ ಓದಿ: ಕೆಎಸ್ಆರ್​ಟಿಸಿ ಹಿರಿಮೆಗೆ ಮತ್ತೊಂದು ಗರಿ: ಕೋಟಿ ರೂ ವಿಮಾ ಯೋಜನೆಗೆ ಸ್ಕ್ವಾಚ್ ರಾಷ್ಟ್ರೀಯ ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.