ETV Bharat / state

ಇಂದು ಸಂಜೆಯಿಂದಲೇ 'ನಮ್ಮ ಮೆಟ್ರೋ' ಸೇವೆ ಬಂದ್ - namma metro cancel news

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ವರೆಗೆ ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಸಂಚಾರ ಸ್ಥಗಿತವಾಗಲಿದೆ. ಆದರೆ ರಾಜಧಾನಿಯಲ್ಲಿ 500ರಿಂದ 1000 ಸಂಚಾರ ನಡೆಸಲಿವೆ.

metro
metro
author img

By

Published : Jun 25, 2021, 6:24 PM IST

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಅನ್​​ಲಾಕ್ ಮಾಡಿದರೂ ಸಹ ವಾರಾಂತ್ಯದ ಲಾಕ್​ಡೌನ್ ಮುಂದುವರಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ವೀಕೆಂಡ್ ಲಾಕ್​ಡೌನ್ ಇರುವುದರಿಂದ ಇಂದು ಸಂಜೆಯಿಂದಲೇ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಇಂದು ಸಂಜೆ 6 ರಿಂದಲೇ ನಮ್ಮ ಮೆಟ್ರೋ ಓಡಾಟ ಸ್ಥಗಿತವಾಗಲಿದ್ದು, ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇಂದು ಸಂಜೆ 6 ರಿಂದ ಸೋಮವಾರ ಬೆಳಗ್ಗೆ 7 ವರಿಗೆ ಮೆಟ್ರೋ ಓಡಾಟ ಇರುವುದಿಲ್ಲ. ಈ ಕುರಿತು ಬಿಎಂಆರ್​ಸಿ ಎಲ್​ನ ಹಿರಿಯ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಿದ್ದಾರೆ.

500 -1000 ಬಸ್ ಓಡಿಸಲು ಕೆಎಸ್ಆರ್​ಟಿಸಿ ಪ್ಲ್ಯಾನ್​:

ವೀಕೆಂಡ್ ಕರ್ಫ್ಯೂ ಇದ್ದರೂ ನಾಳೆ, ನಾಡಿದ್ದು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಕೆಎಸ್ಆರ್​ಟಿಸಿ ಬಸ್ಸುಗಳು ಕಾರ್ಯಾಚರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ‌‌. 500 ರಿಂದ 1000 ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ. ಎಂದಿನಂತೆ ಬೆಳಗ್ಗೆ ಹಾಗೂ ರಾತ್ರಿ ಬಸ್ಸುಗಳ ಕಾರ್ಯಾಚರಣೆ ಇರಲಿದ್ದು, ಸದ್ಯ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸಲಿವೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ವಿರಳ ಸಾಧ್ಯತೆ ಹಿನ್ನೆಲೆ ಬಸ್ಸುಗಳ ಸಂಖ್ಯೆಯನ್ನ ಕಡಿಮೆ ಮಾಡಲಾಗುತ್ತಿದೆ.

ನಾಳೆ ರಸ್ತೆಗಿಳಿಯಲಿವೆ 1200 ಬಿಎಂಟಿಸಿ ಬಸ್ಸುಗಳು:

ವಿಕೆಂಡ್ ಕರ್ಫ್ಯೂ ಹಿನ್ನೆಲೆ ಈ ಅವಧಿಯಲ್ಲಿ, ದೈನಂದಿನ ವಸ್ತುಗಳಾದ ಹಾಲು, ತರಕಾರಿ, ದಿನಸಿ ಮತ್ತು ಔಷಧಾಲಯ ಇತ್ಯಾದಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ.

ಆದುದರಿಂದ, ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 4000 ಬಸ್ಸುಗಳಲ್ಲಿ ಶೇ 30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಾಚರಣೆಗಿಳಿಸಲಿದೆ.

ಇದನ್ನೂ ಓದಿ:Murder Video: ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.