ETV Bharat / state

ಬಿಜೆಪಿ 80 ವರ್ಷದವರಿಗೆ ಟಿಕೆಟ್ ನೀಡಿಲ್ಲ, ಸಾಮಾನ್ಯ ಕಾರ್ಯಕರ್ತರಿಗೆ ನೀಡಿದೆ.. ಕಟೀಲ್ - ಬೆಂಗಳೂರು

ಉಳಿದ ಪಕ್ಷದವರ ಆಯ್ಕೆಯ ಮಾದರಿ ಇಲ್ಲಿಲ್ಲ. ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವವರಿಗೆ ನಮ್ಮಲ್ಲಿ ಟಿಕೇಟ್ ನೀಡಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲವನ್ನು ಅಳೆದು ತೂಗಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ.

Nalin Kumar spoke about giving tickets to BJP activists
ಬಿಜೆಪಿ 80 ವರ್ಷದವರಿಗೆ ಟಿಕೆಟ್ ನೀಡಿಲ್ಲ, ಸಾಮಾನ್ಯ ಕಾರ್ಯಕರ್ತರಿಗೆ ನೀಡಿದೆ : ಕಟೀಲ್
author img

By

Published : Jun 9, 2020, 7:35 PM IST

ಬೆಂಗಳೂರು : ಪಕ್ಷದ ಹೈಕಮಾಂಡ್ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡಿರುವುದು ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಅವರು ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷಕ್ಕಾಗಿ ಅವರು ಸಲ್ಲಿಸಿದ ಸೇವೆ ಗುರುತಿಸಿ ಗೌರವ ನೀಡಲಾಗಿದೆ ಎಂದರು. ಸಾಮಾಜಿಕ ನ್ಯಾಯ ಪ್ರಜಾಪ್ರಭುತ್ವ ಪಕ್ಷದಲ್ಲಿ ಇದೆ ಎನ್ನುವುದು ಈ ಮೂಲಕ ಸಾಬೀತಾಗಿದೆ. ಬೇರೆ ಪಕ್ಷದವರ ರೀತಿ 80 ವರ್ಷದವರಿಗೆ ನಮ್ಮಲ್ಲಿ ಟಿಕೆಟ್ ನೀಡಿಲ್ಲ. ಇದರಿಂದಾಗಿ ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುವುದು ಸಾಬೀತಾಗಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಾಕಷ್ಟು ಕಾರ್ಯಕರ್ತರ ಹೆಸರನ್ನು ನಮೂದಿಸಿ ಕಳುಹಿಸಲಾಗಿತ್ತು. ಅದರಲ್ಲಿಯೇ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಸಭೆಗೆ ಇಬ್ಬರು ಅಭ್ಯರ್ಥಿಗಳ ಆಯ್ಕೆಯಲ್ಲಿ ಅಚ್ಚರಿಯೇನೂ ಇಲ್ಲ ಎಂದರು. ಪಕ್ಷದಲ್ಲಿ ಇವರ ಹಿರಿತನ ಹಾಗೂ ಕಾರ್ಯ ಗುರುತಿಸಿ ಈ ಜವಾಬ್ದಾರಿ ನೀಡಲಾಗಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರಾಗಿ ದುಡಿದು ಮೇಲೆ ಬಂದಿರುವ ಸಾಧಕರಿಗೆ ಬಿಜೆಪಿ ಮಣೆ ಹಾಕಿದೆ.

ಉಳಿದ ಪಕ್ಷದವರ ಆಯ್ಕೆಯ ಮಾದರಿ ಇಲ್ಲಿಲ್ಲ. ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವವರಿಗೆ ನಮ್ಮಲ್ಲಿ ಟಿಕೆಟ್ ನೀಡಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲವನ್ನು ಅಳೆದು ತೂಗಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ ಎಂದರು. ಪಕ್ಷದಲ್ಲಿ ಹತ್ತಾರು ವಿಧದ ಕಾರ್ಯನಿರ್ವಹಿಸುವ ಕಾರ್ಯಕರ್ತರು ಇದ್ದಾರೆ. ಅದೇ ರೀತಿ ಪ್ರಕಾಶ್ ಶೆಟ್ಟಿ ಕೂಡ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಅವರು ಈ ಹಿಂದೆ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಒಂದು ವಿಭಾಗದಲ್ಲಿ ಅವರು ತಮ್ಮನ್ನು ತಾವು ಗುರುತಿಸಿಕೊಂಡು ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಯಾರ ಹೆಸರನ್ನು ಕಳಿಸಿದ್ದೇವೆ ಎಂಬ ಪಟ್ಟಿಯನ್ನು ನಾವು ಮಾಧ್ಯಮಗಳಿಗೆ ಬಿಡುಗಡೆ ಮಾಡಿರಲಿಲ್ಲ. ಕಾರ್ಯಕರ್ತರ ಪಟ್ಟಿಯನ್ನು ಹೈಕಮಾಂಡ್​​​ಗೆ ಕಳುಹಿಸಿದ್ದೇವೆ. ಯಾವ ಹೆಸರನ್ನು ನಾವು ಪ್ರಸ್ತಾಪಿಸಿಲ್ಲ.

ಇಂಥದ್ದೇ ಹೆಸರನ್ನು ಕಳುಹಿಸಿದ್ದೇವೆ ಎಂದು ನಾವು ಯಾರಿಗೂ ತಿಳಿಸಿಲ್ಲ. ಪಕ್ಷದ ಹೈಕಮಾಂಡಿಗೆ ಕೆಲವರ ಹೆಸರುಗಳನ್ನು ಕಳುಹಿಸಿದ್ದೆವು. ಅದರಲ್ಲಿ ಎರಡು ಹೆಸರನ್ನು ಆಯ್ಕೆ ಮಾಡಿದೆ. ಇದು ಏಕವ್ಯಕ್ತಿ ನಿರ್ಧಾರದ ಪಕ್ಷವಲ್ಲ, ಅಭಿಪ್ರಾಯದ ಮೇಲೆ ತೀರ್ಮಾನ ಕೈಗೊಳ್ಳುವ ಪಕ್ಷವಾಗಿದೆ. ಅಭಿಪ್ರಾಯದ ಮೇಲೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.