ETV Bharat / state

ಅಯೋಧ್ಯೆ ತೀರ್ಪು ನ್ಯಾಯಾಂಗದ ಗೌರವವನ್ನು ಹೆಚ್ಚಿಸಿದೆ: ನಳೀನ್ ಕುಮಾರ್ ಕಟೀಲ್.!

ಅಯೋಧ್ಯೆ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು, ಸತ್ಯಮೇವ ಜಯತೆಗೆ ಶಕ್ತಿ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹೇಳಿದರು.

author img

By

Published : Nov 9, 2019, 5:03 PM IST

ಅಯೋಧ್ಯೆ ತೀರ್ಪು ವಿಚಾರವಾಗಿ ನಳೀನ್ ಕುಮಾರ್ ಕಟೀಲ್ ಹೇಳಿಕೆ

ಬೆಂಗಳೂರು: ಅಯೋಧ್ಯೆ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಸತ್ಯ ಮೇವ ಜಯತೆಗೆ ಎಂಬ ಉಕ್ತಿಗೆ ಇನ್ನಷ್ಟು ಶಕ್ತಿ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂದೊಂದು ಭಾರತೀಯ ಭಾವೈಕ್ಯತೆಯ ತೀರ್ಪಾಗಿದ್ದು, ಸುಪ್ರೀಂ ಭಾರತದ ಏಕತೆಯನ್ನು ಎತ್ತಿ ತೋರಿಸುವ ತೀರ್ಪನ್ನು ನೀಡಿದೆ ಇದನ್ನು ಬಿಜೆಪಿ‌ ಸ್ವಾಗತಿಸುತ್ತಿದೆ ಎಂದರು.

ಒಂದುವರೆ ಶತಮಾನದ ಸಮಸ್ಯೆಗಿದ್ದ ಅಯೋಧ್ಯೆ ವಿವಾದ ಪ್ರಕರಣದಲ್ಲಿ, ಸುಪ್ರೀಂಕೋರ್ಟ್​​ನ ಪಂಚಪೀಠ ನ್ಯಾಯಾಧೀಶರು ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾನು ಹರ್ಷ ವ್ಯಕ್ತಪಡಿಸುತ್ತೇನೆ. ರಾಜ್ಯದಲ್ಲಿ ಎಲ್ಲರೂ ‌ಶಾಂತಿ ಸೌಹಾರ್ದ ಕಾಪಾಡಬೇಕು, ರಾಮ ಮಂದಿರ ರಾಷ್ಟ್ರ ಮಂದಿರವಾಗಬೇಕು ಎಂದು ಹೇಳಿದರು.

ಅಯೋಧ್ಯೆ ತೀರ್ಪು ವಿಚಾರವಾಗಿ ನಳೀನ್ ಕುಮಾರ್ ಕಟೀಲ್ ಹೇಳಿಕೆ

ಇಲ್ಲಿ ಯಾರಿಗೂ ಸೋಲು ಗೆಲುವಾಗಿಲ್ಲ, ಆದ್ದರಿಂದ ಇದು ವಿಜಯದ ಸಂಭ್ರಮ ಆಚರಣೆ ಮಾಡುವ ಸಮಯವಲ್ಲ. ಪಕ್ಷದಿಂದ ಯಾವುದೇ ಆಚರಣೆ ಸಂಭ್ರಮ ನಡೆದಿಲ್ಲ, ಆದರೆ ವ್ಯಯಕ್ತಿಕವಾಗಿ ಕೆಲವರು ಸಂಭ್ರಮ ಮಾಡಿದ್ದಾರೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಯಕ್ತಿಕ ಸಂಭ್ರಮಾಚರಣೆಯು ಅದು ಅವರ ಹಕ್ಕು ಎಂದ ಕಟೀಲ್, ಪರೋಕ್ಷವಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸಂಭ್ರಮಾಚರಣೆಯನ್ನು ಸಮರ್ಥಿಸಿಕೊಂಡರು.

Intro:

ಬೆಂಗಳೂರು: ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಭಾರತದ ಏಕತೆ ಎತ್ತಿ ತೋರಿಸುವ ತೀರ್ಪು ನೀಡಿದೆ. ಇಂದೊಂದು ಭಾರತೀಯ ಭಾವೈಕ್ಯತೆಯ ತೀರ್ಪು ಇದನ್ನು ಬಿಜೆಪಿ‌ ಸ್ವಾಗತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒಂದುವರೆ ಶತಮಾನಗಳಿಂದ ನಡೆದುಬಂದ ಸಮಸ್ಯೆಯಾದ ಅಯೋಧ್ಯೆ ವಿವಾದ ಪ್ರಕರಣ ಕುರಿತು ಇವತ್ತು ಸುಪ್ರೀಂ ಕೋರ್ಟ್ ನ ಪಂಚಪೀಠ ನ್ಯಾಯಾಧೀಶರು ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾನು ಹರ್ಷ ವ್ಯಕ್ತಪಡಿಸುತ್ತೇನೆ,ಸತ್ಯಮೇವ ಜಯತೆಗೆ ಶಕ್ತಿ ತಂದಿದೆ ಭಾರತದ ಏಕತೆ ಎತ್ತಿ ತೋರಿಸುವ ನ್ಯಾಯಾಧೀಶರ ತೀರ್ಪನ್ನು ಬಿಜೆಪಿ‌ ಸ್ವಾಗತಿಸುತ್ತಿದೆ ರಾಜ್ಯದಲ್ಲಿ ಎಲ್ಲರೂ ‌ಶಾಂತಿ ಸೌಹಾರ್ದ ಕಾಪಾಡಬೇಕು ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕು ಎಂದರು.

ಬಿಜೆಪಿ ಕೆಲ ಮುಖಂಡರಿಂದ ಸಂಭ್ರಮ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಕಟೀಲ್, ಇದು ವಿಜಯದ ಸಂಭ್ರಮ ಆಚರಣೆ ಮಾಡುವ ಸಮಯವಲ್ಲ, ಯಾರಿಗೂ ಸೋಲು ಗೆಲುವನ ತೀರ್ಪಲ್ಲ, ಪಕ್ಷದಿಂದ ಯಾವುದೇ ಆಚರಣೆ ಸಂಭ್ರಮ ನಡೆದಿಲ್ಲ ಆದರೆ ವೈಯಕ್ತಿಕವಾಗಿ ಕೆಲವರು ಸಂಭ್ರಮ ಮಾಡಿದ್ದದಾರೆ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಅವರ ಹಕ್ಕು ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಂಭ್ರಮಾಚರಣೆ ಸಮರ್ಥಿಸಿಕೊಂಡರು.Body:.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.