ಬೆಂಗಳೂರು: ರಿಪಬ್ಲಿಕ್ ಆಫ್ ಇಂಡಿಯಾ ಬದಲು ರಿಪಬ್ಲಿಕ್ ಆಫ್ ಭಾರತ ಎನ್ನುವ ನಾಮಕರಣವನ್ನು ರಾಜ್ಯ ಬಿಜೆಪಿ ಸ್ವಾಗತ ಮಾಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶವನ್ನು ನಾವು ಭಾರತ ಎಂಬ ಹೆಸರಿನಿಂದ ಕರೆಯುತ್ತೇವೆ. ಇಂಡಿಯಾ ಬದಲು ಭಾರತ ಎಂಬ ಶಬ್ದವು ಸಾಂಸ್ಕೃತಿಕವಾದ ಭಾವನೆಯಿಂದ ಕೂಡಿದ ಹೆಸರಾಗಿದೆ. ಇಂಡಿಯಾ ಎಂಬ ಶಬ್ಧದಲ್ಲಿ ಆ ರೀತಿಯ ಭಾವನೆ ಇಲ್ಲ. ಇಂಡಿಯಾ ಎಂದು ಬ್ರಿಟಿಷರು ಕರೆಯುತ್ತಿದ್ದರು.
ಜಿ20 ಸಭೆಗೆ ರಾಷ್ಟಪತಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ಇನ್ವಿಟೇಷನ್ ನೀಡಲಾಗಿದೆ. ನಮ್ಮ ದೇಶವನ್ನು ಭಾರತ ಎಂದು ಕರೆಯಲು ಹೆಮ್ಮೆ ಇದೆ. ಕಾಂಗ್ರೆಸ್ನವರಿಗೆ ಭಾರತ ಎಂದು ಕರೆಯುವುದಕ್ಕೆ ಮುಜುಗರ ಬೇಡ, ಇಂಡಿಯಾ ಬ್ರಿಟಿಷರು ಕಟ್ಟಿದ ಹೆಸರಾಗಿತ್ತು..! ಹಾಗಾಗಿ ಭಾರತ ಎಂಬ ನಾಮಕರಣವನ್ನು ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು. ಬ್ರಿಟೀಷರು ಇಂಡಿಯಾ ಎಂದು ಕರೆದರು. ಆದರೆ, ನೀವು ಯಾಕೆ ಅದೇ ಹೆಸರನ್ನು ಕರೆಯುತ್ತೀರಿ ಎಂದು ಕಾಂಗ್ರೆಸ್ ನಾಯಕರನ್ನು ರವಿಕುಮಾರ್ ಪ್ರಶ್ನಿಸಿದರು.
ಇಂಡಿಯಾ ಮೈತ್ರಿಕೂಟ ಸತನಾನ ಧರ್ಮದ ಟೀಕೆ ಮಾಡುತ್ತಿದೆ. ಸ್ಟಾಲಿನ್ ಹೇಳಿಕೆ, ಎಸ್ಪಿ ಪಕ್ಷದ ಮುಖಂಡನ ಹೇಳಿಕೆ, ಮಮತಾ ಬ್ಯಾನರ್ಜಿ ಹೇಳಿಕೆ ನೋಡಿದರೆ ಇದು ಗೊತ್ತಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಇದೆಲ್ಲವನ್ನು ಸ್ಪಷ್ಟಪಡಿಸಬೇಕು. ನಮ್ಮ ಧರ್ಮ ಪುರಾತನವಾಗಿರುವಂತಹದ್ದು, ಇದರ ಬಗ್ಗೆ ಎಲ್ಲರು ಹೆಮ್ಮೆಯಿಂದ ಹೇಳಬೇಕಾಗಿತ್ತು. ಸ್ಟಾಲಿನ್ ಧೋರಣೆಯನ್ನು ಖಂಡಿಸುತ್ತೇನೆ. ಉದಯನಿಧಿ ಸ್ಟಾಲಿನ್ರನ್ನು ಸಚಿವ ಸ್ಥಾನದಿಂದ ಕೆಳಗಿಸಬೇಕು ಎಂದು ರವಿ ಕುಮಾರ್ ಆಗ್ರಹಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಬಿಜೆಪಿಗೆ ಇಂಡಿಯಾ ಬಗ್ಗೆ ಭಯ ಬಂದಿದೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಭಯ ಅನ್ನೋದು ನಮಗೆ ಇಲ್ಲ ಭಾರತ ಅಂತಾ ಕರೆಯೋಕೆ ನಮಗೆ ಯಾಕೆ ಭಯ..! ಬ್ರಿಟೀಷರ ಶಿಕ್ಷಣವನ್ನು ಮುಂದುವರೆಸುತ್ತಿರುವ ನಿಮಗೆ ಭಯ ನಮಗೆ ಭಯವಿಲ್ಲ ಎಂದು ಹೇಳಿದರು.
ಇದೇ ತಿಂಗಳ 8ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರದ ಭ್ರಷ್ಣಚಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ. 5 ಎಕರೆ ಜಮೀನು ಇದ್ದ ರೈತರಿಗೆ ಡಿಸೇಲ್ ಅನ್ನು ನಿಲ್ಲಿಸಿದ್ದಾರೆ, ಸ್ಕಾಲರ್ ಶಿಪ್ ನಿಲ್ಲಿಸಿದ್ದಾರೆ, ವರ್ಗಾವಣೆ ದಂಧೆ ನಡೆಯುತ್ತಿದೆ. ಬರ ತಾಲೂಕು ಘೋಷಣೆ ಮಾಡದೇ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಹಾಗಾಗಿ ಈ ಹೋರಾಟದಲ್ಲಿ ಮಾಜಿ ಸಿಎಂ ಹಾಗೂ ಬೆಂಗಳೂರಿನ ಶಾಸಕರು ಎಲ್ಲರೂ ಭಾಗಿಯಾಗಲಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.