ETV Bharat / state

ಮೈ ಕ್ಯಾಪ್ಟನ್ ಈಸ್ ಯಡಿಯೂರಪ್ಪ: ಸಿಎಂ ಬದಲಾವಣೆ ಕುರಿತು ಸಚಿವ ಆರ್. ಅಶೋಕ್ ಪ್ರತಿಕ್ರಿಯೆ - Bangalore

ಮೈ ಕ್ಯಾಪ್ಟನ್ ಇಸ್ ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷಗಳ ಅವಧಿಗೆ ಸಿಎಂ ಆಗಿರುತ್ತಾರೆ‌ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

Revenue Minister Ashok
ಕಂದಾಯ ಸಚಿವ ಆರ್. ಅಶೋಕ್
author img

By

Published : Sep 14, 2020, 7:00 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳಿಗಿರುವ ಪರಮ ಅಧಿಕಾರ. ಅದನ್ನು ಯಡಿಯೂರಪ್ಪನವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಕಂದಾಯ ಸಚಿವ ಆರ್. ಅಶೋಕ್

ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಇಂದು ಮಾತನಾಡಿದ ಅವರು, ಸರ್ಕಾರ ರಚನೆಗೆ ಸಹಾಯ ಮಾಡಿದವರನ್ನು ಮಂತ್ರಿ ಮಾಡಬೇಕೆಂಬುದು ಸಿಎಂ ಅವರ ಉದ್ದೇಶವಾಗಿದೆ. ಅವರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತಾರೆ. ಅಂತಿಮವಾಗಿ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

ಮೈ ಕ್ಯಾಪ್ಟನ್ ಇಸ್ ಯಡಿಯೂರಪ್ಪ :

ಮುಂದಿನ ಮೂರು ವರ್ಷಗಳು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಅನುಮಾನ ಬೇಡ‌. ಮೈ ಕ್ಯಾಪ್ಟನ್ ಇಸ್ ಯಡಿಯೂರಪ್ಪ. ಅವರೇ ಮುಂದಿನ ಮೂರು ವರ್ಷಗಳ ಅವಧಿಗೆ ಸಿಎಂ ಆಗಿರುತ್ತಾರೆ‌ ಎಂದು ಹೇಳಿದರು.

ನಿಮ್ಮ ಕ್ಯಾಪ್ಟನ್ ಬದಲಾವಣೆ ಆಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ನಾಯಕರು ಯಡಿಯೂರಪ್ಪನವರು. ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಸರ್ಕಾರವನ್ನು ಸಮರ್ಥವಾಗಿ ಮುಂದೆ ಹೋಗುತ್ತಿರುವಾಗ ಬದಲಾವಣೆಯ ಮಾತು ಎಲ್ಲಿಂದ ಬರುತ್ತದೆ ಎಂದರು.

ಬೆಂಗಳೂರು ಮೇಲೆ ಅಶೋಕ್ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ನಾನು ಗೃಹ ಮಂತ್ರಿಯಾಗಿದ್ದಾಗ ಕಾರ್ಯದರ್ಶಿಯಾಗಿದ್ದರು. ಸಾರಿಗೆ ಸಚಿವರಾಗಿದ್ದ ವೇಳೆ ಗೌರವ್ ಗುಪ್ತಾ ಕಾರ್ಯದರ್ಶಿಯಾಗಿದ್ದರು.

ಪ್ರಸ್ತುತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು‌. ಇದೊಂದೇ ಕಾರಣಕ್ಕಾಗಿ ಯಾರೊಬ್ಬರೂ ಅನ್ಯತಾ ಭಾವಿಸುವುದು ಬೇಡ. ನಮ್ಮಲ್ಲಿ ಯಾವುದೇ ಪೈಪೋಟಿಯಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.