ETV Bharat / state

ಮುರುಘಾ ಶರಣರು ಅಧಿಕಾರ ಚಲಾಯಿಸುವಂತಿಲ್ಲ ಎಂದು ಆದೇಶಿಸಿದ್ದ ಪ್ರಕರಣ ಮತ್ತೊಂದು ಪೀಠಕ್ಕೆ ವರ್ಗ

ಮುರುಘಾ ಶರಣರು ಅಧಿಕಾರ ಚಲಾಯಿಸುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠಕ್ಕೆ ನಾಳೆ ವಿಚಾರಣೆ ಮಾಡುವಂತೆ ವರ್ಗಾಯಿಸಿದೆ.

high court
ಹೈಕೋರ್ಟ್​
author img

By

Published : Feb 1, 2023, 10:34 PM IST

Updated : Feb 1, 2023, 11:05 PM IST

ಬೆಂಗಳೂರು: ಆರೋಪಿ ಸ್ಥಾನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ಮಠದಲ್ಲಿ ಅಧಿಕಾರ ಚಲಾಯಿಸುವಂತಿಲ್ಲ ಎಂಬುದಾಗಿ ಆದೇಶಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬೇರೊಂದು ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದೆ. ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ನ್ಯಾಯಾಲಯ 2022ರ ಡಿಸೆಂಬರ್ 15ರಂದು ನೀಡಿರುವ ಆದೇಶ ಪ್ರಶ್ನಿಸಿ ಮುರುಘಾ ಶರಣರು ಸಲ್ಲಿಸಿರುವ ರಿಟ್ ಅರ್ಜಿ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು,ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅರ್ಜಿ ಈಗಾಗಲೇ ಏಕ ಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಈ ಅರ್ಜಿಯನ್ನೂ ಅದೇ ರಿಟ್ ಅರ್ಜಿಯ ಜೊತೆ ಸೇರ್ಪಡೆ ಮಾಡಿ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವರ್ಗಾವಣೆಗೆ ಆದೇಶಿಸಿತು. ಅಲ್ಲದೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ 1988ರ ಕಲಂ 8 (2)ರ ಅನ್ವಯ ಶರಣರು ತಮ್ಮ ಅಧಿಕಾರ ಚಲಾಯಿಸಲು ನಿರ್ಬಂಧ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ಫೆ. 2ರಂದು ವಿಚಾರಣೆ ನಡೆಸಲಿದೆ. ಅಪರಾಧಿ ಮೃತಪಟ್ಟ ಬಳಿಕ ಆತನಿಗೆ ವಿಧಿಸಿದ ದಂಡವನ್ನು ಆತನ ಆಸ್ತಿಯಿಂದ ಇಲ್ಲವೇ, ಉತ್ತರಾಧಿಕಾರಿಯಿಂದ ವಸೂಲು ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.

ಇದನ್ನೂ ಓದಿ: ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾವಾರು ತನಿಖೆಗೆ ಹೈಕೋರ್ಟ್ ಸೂಚನೆ

ದಂಡಕ್ಕೆ ಗುರಿಯಾಗಿರುವ ಅಪರಾಧಿ ಮೃತಪಟ್ಟಲ್ಲಿ ಉತ್ತರಾಧಿಕಾರಿಯೇ ದಂಡ ಪಾವತಿಸಬೇಕು ಎಂದ ಹೈಕೋರ್ಟ್: ಪ್ರತ್ಯೇಕ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಅಪರಾಧಿ ಮೃತಪಟ್ಟ ಬಳಿಕ ಆತನಿಗೆ ವಿಧಿಸಿದ ದಂಡವನ್ನು ಆತನ ಆಸ್ತಿಯಿಂದ ಇಲ್ಲವೇ, ಉತ್ತರಾಧಿಕಾರಿಯಿಂದ ವಸೂಲು ಮಾಡಿಕೊಳ್ಳಬಹುದು ಎಂದು ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.

ಹಾಸನದ ತೊಟ್ಲೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ. ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯಪೀಠ, ಮೇಲ್ಮನವಿದಾರರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಆದರೆ ವಿಚಾರಣಾ ನ್ಯಾಯಾಲಯ ದಂಡದ ಮೊತ್ತವನ್ನು ಮೃತ ಆಸ್ತಿಯಿಂದ ಅಥವಾ ವಾರಸುದಾರರಿಂದ ವಸೂಲು ಮಾಡಲು ಆದೇಶ ನೀಡಿರುವುದು ಸರಿ ಇದೆ. ಅದರಂತೆ ಮೃತ ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಆದೇಶ ನೀಡಿದೆ.

ಮೇಲ್ಮನವಿದಾರರು ಮೃತಪಟ್ಟಿದ್ದಾರೆ ಎಂದಾಕ್ಷಣ ಕೋರ್ಟ್ ಆದೇಶದಂತೆ ದಂಡ ಪಾವತಿಸುವ ಹೊಣೆಗಾರಿಕೆಯಿಂದ ಮುಕ್ತರಾಗುವುದಿಲ್ಲ. ಸಿಆರ್‌ಪಿಸಿ ಸೆಕ್ಷನ್ 354 ಅನ್ವಯ ಮೇಲ್ಮನವಿಯಿಂದ ಅವರ ಹೆಸರು ತೆಗೆಯಲು ಮೃತಪಟ್ಟ 30 ದಿನಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಅವರು 2019ರ ಏ.6ರಂದು ಮೃತಪಟ್ಟರೂ ಮೇಲ್ಮನವಿ ಮುಂದುವರಿಸಲು ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಕಾನೂನು ಬದ್ಧವಾರಸುದಾರರು ಮೇಲ್ಮನವಿ ಮುಂದುವರಿಸಲು ಬಯಸುತ್ತಿಲ್ಲವೆಂದು ವಕಿಲರು ಹೇಳಿದ್ದಾರೆ. ಹಾಗಾಗಿ ಮೃತರ ಆಸ್ತಿಯ ಉತ್ತರಾಧಕಾರ ಹೊಂದಿರುವವರು ದಂಡವನ್ನು ಪಾವತಿಸಬೇಕಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಭಾರತೀಯ ವಿದ್ಯುತ್ ಕಾಯಿದೆ 2003ರ ಸೆಕ್ಷನ್ 135 ಮತ್ತು 138ರಡಿ ತೊಟ್ಲೇಗೌಡರನ್ನು ಅಪರಾಧಿ ಎಂದು ನಿರ್ಧರಿಸಿದ್ದ ಹಾಸನದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, 2021ರ ಡಿ.12ರಂದು ಅವರಿಗೆ 39,204 ರೂ.ದಂಡ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿ ವಿಚಾರಣೆ ಬಾಕಿ ಇದ್ದಾಗಲೇ ಅವರು ಸಾವನ್ನಪ್ಪಿದ್ದರು.

Last Updated : Feb 1, 2023, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.