ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಹಣ ಹಂಚಿದ್ದೀರಿ ಎಂದು ಆರೋಪಿಸಿ ಬಿಬಿಎಂಪಿ ಮಾಜಿ ಸದಸ್ಯ ಶ್ರೀನಿವಾಸ್ ಮೂರ್ತಿ ಹಾಗೂ ಸಂಗಡಿಗರು ಸೇರಿ ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
![ಬಿಬಿಎಂಪಿ ಮಾಜಿ ಸದಸ್ಯನಿಂದ ಕೈ ಕಾರ್ಯಕರ್ತನಿಗೆ ಕೊಲೆ ಬೆದರಿಕೆ](https://etvbharatimages.akamaized.net/etvbharat/prod-images/9397313_501_9397313_1604292056042.png)
ಅ.31 ರಂದು ರಾತ್ರಿ ಮನೆಗೆ ತೆರಳುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾಮಚಂದ್ರ ಎಂಬುವರನ್ನು ಹಿಂಬಾಲಿಸಿಕೊಂಡು ಮನೆಯವರೆಗೆ ತೆರಳಿದ ಶ್ರೀನಿವಾಸ್ ಮೂರ್ತಿ ಹಾಗೂ ಸಂಗಡಿಗರು, ರಾಮಚಂದ್ರ ಅವರನ್ನು ಮನೆಯಿಂದ ಹೊರಗೆಳೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಆರ್ ಆರ್ ನಗರ ಚುನಾವಣೆಗೆ ಹಣ ಹಂಚಿದ್ದೀರಿ, ಎಲೆಕ್ಷನ್ ಮುಗಿದ ಮೇಲೆ ಏನ್ ಮಾಡ್ಬೇಕು ಗೊತ್ತು ಎಂದು ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
![ಬಿಬಿಎಂಪಿ ಮಾಜಿ ಸದಸ್ಯನಿಂದ ಕೈ ಕಾರ್ಯಕರ್ತನಿಗೆ ಕೊಲೆ ಬೆದರಿಕೆ](https://etvbharatimages.akamaized.net/etvbharat/prod-images/9397313_175_9397313_1604292072637.png)
ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.