ETV Bharat / state

ಕುಡಿದ ಮತ್ತಿನಲ್ಲಿ ಪ್ರಾರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ: ತಪ್ಪೊಪ್ಪಿಕೊಂಡು ಆರೋಪಿ ಪರಾರಿ - ಕುಡಿದ ಮತ್ತಿನಲ್ಲಿ ಕೊಲೆ

ಶ್ರೀಕಾಂತ್ ಸ್ನೇಹಿತರು ಕುಡಿತದ ವೇದಿಕೆಯನ್ನು ಆನೇಕಲ್-ಅತ್ತಿಬೆಲೆ ರಸ್ತೆಯ ಅರೇಹಳ್ಳಿ ಹೊಲವೊಂದರಲ್ಲಿ ಸಜ್ಜು ಮಾಡಿ‌ ಕಂಠಪೂರ್ತಿ ಕುಡಿದಿದ್ದಾರೆ. ಮತ್ತಿನಲ್ಲಿ ಮಾತಿಗೆ ಮಾತು ಬೆಳೆಸಿ ಶ್ರೀಕಾಂತ್ ತಲೆಯ ಮೇಲೆ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಏಟಿನ ರಭಸಕ್ಕೆ ಮೆದುಳು ಈಚೆಗೆ ಬಂದು ಶ್ರೀಕಾಂತ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

murder case of anekal
ಕುಡಿದ ಮತ್ತಿನಲ್ಲಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯ; ತಪ್ಪೊಪ್ಪಿಕೊಂಡು ಆರೋಪಿ ಪರಾರಿ!
author img

By

Published : Oct 8, 2020, 8:07 AM IST

ಆನೇಕಲ್(ಬೆಂಗಳೂರು): ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ಪ್ರಾರಂಭವಾದ ಜಗಳ ಓರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಮೂಲತಃ ಆನೇಕಲ್ ಗಡಿಯ ಬಳ್ಳೂರಿನ ಶ್ರೀಕಾಂತ್(30) ಮೃತ ದುರ್ದೈವಿ. ಹೆಂಡತಿ-ಮಗುವಿನೊಂದಿಗೆ ಅತ್ತಿಬೆಲೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಈ ಹಿಂದೆ ಸರಗಳ್ಳತನ ಪ್ರಕರಣಗಳಲ್ಲಿ ಅತ್ತಿಬೆಲೆ-ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್ ಠಾಣೆಗಳಲ್ಲಿ ಶ್ರೀಕಾಂತ್ ಆರೋಪಿಯಾಗಿದ್ದ. ಮೂರು ವರ್ಷದಿಂದೀಚೆಗೆ ಮಾರನಾಯಕನಹಳ್ಳಿಯ ಯುವತಿಯೊಂದಿಗೆ ಮದುವೆಯಾಗಿ ಅತ್ತಿಬೆಲೆಯಲ್ಲಿ ವಾಸವಿದ್ದ. ತಂದೆಯೊಂದಿಗೆ ತೀವ್ರ ಮನಸ್ತಾಪ ಹೊಂದಿದ್ದು, ತಂದೆ ಬಳ್ಳೂರು ತಿಮ್ಮಪ್ಪನಿಂದ ಈತ ದೂರವಾಗಿ ವಾಸವಿದ್ದ. ಸದ್ಯ ಶ್ರೀಕಾಂತ್ ವಾಹನ ಚಾಲಕನಾಗಿ, ಪೇಂಟಿಂಗ್​ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಸ್ನೇಹಿತರೊಂದಿಗೆ ಒಳ್ಳೆಯವನಾಗಿ ಬದುಕುತ್ತಿದ್ದ ಎಂದು ಸ್ನೇಹಿತರು ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಪ್ರಾರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಅ. 5ರಂದು ಶ್ರೀಕಾಂತ್​ನ ಸ್ನೇಹಿತ ಅರೇಹಳ್ಳಿ ಅಶೋಕ ಎಂಬುವವನ ಹುಟ್ಟುಹಬ್ಬ ಇತ್ತು. ಅಂದು ಇಡೀ ದಿನ ಪೇಂಟಿಂಗ್​ ಕೆಲಸ ಮುಗಿಸಿ, ರಾತ್ರಿ 9ರ ನಂತರ ಅತ್ತಿಬೆಲೆ ಮನೆಗೆ ಬಂದಿದ್ದ. ಅನಂತರ ಅಶೋಕನ ಹುಟ್ಟುಹಬ್ಬ ಆಚರಣೆಗೆ ಅಂತ ನಾಲ್ಕೈದು ಸ್ನೇಹಿತರು ಶ್ರೀಕಾಂತ್ ಮನೆ ಬಳಿಗೆ ಬಂದು ಆತನನ್ನು ಕರೆದೊಯ್ದಿದ್ದಾರೆ. ಶ್ರೀಕಾಂತ್ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಸ್ನೇಹಿತರ ಜೊತೆಗೂಡಿ ಹೊರಟಿದ್ದಾನೆ. ಹುಟ್ಟುಹಬ್ಬದ ಮೋಜು ಮಸ್ತಿಗೆ ಹಣವಿಲ್ಲವೆಂದು ಅಶೋಕ(ಹುಟ್ಟುಹಬ್ಬದ ಯುವಕ) ಮನೆಯಲ್ಲಿಯೇ ಉಳಿದಿದ್ದಾನೆ.

ಆದ್ರೆ ಶ್ರೀಕಾಂತ್ ಸ್ನೇಹಿತರು ಕುಡಿತದ ವೇದಿಕೆಯನ್ನು ಆನೇಕಲ್-ಅತ್ತಿಬೆಲೆ ರಸ್ತೆಯ ಅರೇಹಳ್ಳಿ ಹೊಲವೊಂದರಲ್ಲಿ ಸಜ್ಜು ಮಾಡಿ‌ ಕಂಠಪೂರ್ತಿ ಕುಡಿದಿದ್ದಾರೆ. ಮತ್ತಿನಲ್ಲಿ ಮಾತಿಗೆ ಮಾತು ಬೆಳೆಸಿ, ಶ್ರೀಕಾಂತ್ ತಲೆಯ ಮೇಲೆ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಏಟಿನ ರಭಸಕ್ಕೆ ಮೆದುಳು ಈಚೆಗೆ ಬಂದು ಶ್ರೀಕಾಂತ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆ ನಡೆದ ಸ್ಥಳದಿಂದ ರಾಗಿ ಹೊಲದ ಮಧ್ಯಕ್ಕೆ ಹೆಣವನ್ನು ಎಳೆದೊಯ್ದು ಸ್ನೇಹಿತರು ಪರಾರಿಯಾಗಿದ್ದಾರೆ. ನಶೆ ಇಳಿದ ನಂತರ ರಾಚಮಾನಹಳ್ಳಿ ಮನೋಜ ಎಂಬ ಆರೋಪಿ ತಡರಾತ್ರಿ ಮನೆಯವರಿಗೆ ಕರೆ ಮಾಡಿ ತಪ್ಪು ಮಾಡಿರುವೆ, ಹುಡುಕಬೇಡಿ ಬೇರೆಲ್ಲಾದರೂ ಹೋಗಿಬಿಡುತ್ತೇನೆಂದು ಮೊಬೈಲ್​​​ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.‌

ಇನ್ನು ಬೆಳಗ್ಗೆ ಹೊಲದ ಕೆಲಸಕ್ಕೆಂದು ಬಂದ ಕೂಲಿಕಾರರ‌ ಕಣ್ಣಿಗೆ ಕಾಲುದಾರಿಯಲ್ಲಿ ಮೆದುಳು ರಕ್ತ ಕಂಡಿದ್ದು ಊರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಅತ್ತಿಬೆಲೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.