ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನ ಅಣ್ಣನನ್ನೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ನಾಪತ್ತೆಯಾಗಿದ್ದ ಆರು ಮಂದಿ ಆರೋಪಿಗಳನ್ನು ಮೈಕೊ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಕೊ ಲೇಔಟ್ ನಿವಾಸಿಗಳಾದ ಸಂತೋಷ್, ಅಲೆಕ್ಸಾಂಡರ್, ವಿಜಯ್, ವಿಶಾಲ್, ದಿಲೀಪ್ ಹಾಗೂ ಶೇಖರ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನಲೆ:
ಮಣಿ ಕೊಲೆಯಾಗಿದ್ದ ಯುವಕ. ಮಣಿ ಸಹೋದರ ಲೊಕೇಶ್ ಹಾಗೂ ಬಂಧಿತ ಆರೋಪಿಗಳು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆರೋಪಿ ಸಂತೋಷ್ ಹಾಗೂ ಲೋಕೇಶ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಈ ಸಂಬಂಧ ಕೊಲೆಯಾದ ಮಣಿ, ಆರೋಪಿಗಳಿಗೆ ಕೊಲೆ ಮಾಡುವುದಾಗಿ ಧಮಕಿ ಹಾಕಿದ್ದನಂತೆ. ಇದರಿಂದ ಆತಂಕಗೊಂಡ ಸಂತೋಷ್ ತನ್ನ ಸಹಚರರ ಜತೆ ಹೊಂಚು ರೂಪಿಸಿ ಇದೇ ತಿಂಗಳು 3ರಂದು ರಾತ್ರಿ ಠಾಣಾ ವ್ಯಾಪ್ತಿಯ ಸೋಲಂಕಿ ಫ್ಯಾಕ್ಟರಿಯ ಕಾಂಪೌಂಡ್ ಹತ್ತಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.