ETV Bharat / state

ಜಾತಿ ಅಂತ ಹೋದರೆ ಡಿಕೆಶಿ ಸಿಎಂ ಆಗುವುದಕ್ಕೆ ಸಾಧ್ಯನಾ: ಮುನಿರತ್ನ ಕಿಡಿ - DK shivakumar

ಡಿಕೆಶಿ ನಾಡಪ್ರಭು ಕೆಂಪೇಗೌಡರ ಇತಿಹಾಸ ಓದ್ಕೊಂಡು ರಾಜಕಾರಣ ಮಾಡಲಿ. ಜಾತಿಗಳ ನಡುವೆ ಜಗಳ ತಂದಿಡೋರು ಮುಖ್ಯಮಂತ್ರಿ ಆಗಲ್ಲ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

Munirathna
ಮುನಿರತ್ನ
author img

By

Published : Oct 24, 2020, 5:42 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಿಗೆ ದೂರದೃಷ್ಟಿ‌ ಇಲ್ಲ. ಜಾತಿ ಜಾತಿ ಅಂತ ಹೋದರೆ ಇವರು ಮುಖ್ಯಮಂತ್ರಿ ಆಗೋಕ್ಕೆ ಆಗುತ್ತಾ‌ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಾಗ್ದಾಳಿ ನಡೆಸಿದರು.

ಆರ್.ಆರ್.ನಗರದಲ್ಲಿ ಮಾತನಾಡಿದ‌ ಅವರು, ಹೀಗೆ ಜಾತಿ ಮುಂದಿಟ್ಕೊಂಡು ಹೋದ್ರೆ ಡಿಕೆಶಿ ಮುಖ್ಯಮಂತ್ರಿ ಆಗೋಕ್ಕೆ ಸಾಧ್ಯನೇ ಇಲ್ಲ. ಡಿಕೆಶಿ ನಾಡಪ್ರಭು ಕೆಂಪೇಗೌಡರ ಇತಿಹಾಸ ಓದ್ಕೊಂಡು ರಾಜಕಾರಣ ಮಾಡಲಿ. ಜಾತಿಗಳ ನಡುವೆ ಜಗಳ ತಂದಿಡೋರು ಮುಖ್ಯಮಂತ್ರಿ ಆಗಲ್ಲ. ಲಿಂಗಾಯತರನ್ನು ಒಡೆದಾಳಲು ಹೋಗಿ ಸರ್ಕಾರ ಕಳ್ಕೊಂಡ್ರು ಕಾಂಗ್ರೆಸ್​ನವರು ಎಂದು ಕಿಡಿ‌ಕಾರಿದರು.

ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ

ಮುನಿರತ್ನ ಒಕ್ಕಲಿಗ ಮುಖಂಡರನ್ನು ಬೆಳೆಸಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದಾಗ ಈ ಮಾತುಗಳು ಬರಲಿಲ್ಲ. ಇದೇ ಡಿಕೆಶಿಯವರು ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟಣೆ ದಿನ ನನ್ನನ್ನು ಹಾಡಿ ಹೊಗಳಿದ್ದಾರೆ. ಆವತ್ತು ಜಾತಿ ಬಗ್ಗೆ ಮಾತಾಡದಿರೋರು ಇವತ್ತು ಜಾತಿ ಬಗ್ಗೆ ಮಾತಾಡಿ ಸ್ವಾರ್ಥ ತೋರಿದ್ದಾರೆ. ಸಿಎಂ ಆಗೋಕೆ ಇರೋರು ಇಷ್ಟು ಸಣ್ಣ ಮಟ್ಟದಲ್ಲಿ ಮಾತಾಡಿದ್ದು ಸರಿಯಲ್ಲ. ಡಿಕೆಶಿ ಜಾತಿ ಬಗ್ಗೆ ಮಾತಾಡಿ ಸಣ್ಣತನ ತೋರಿದ್ದಾರೆ ಎಂದು ತಿಳಿಸಿದರು.

ಡಿಕೆಶಿ ಜಾತಿಗಳ ಬಗ್ಗೆ ಮಾತಾಡೋದು ಶೋಭೆ ತರಲ್ಲ. ಎಲ್ಲ ಜಾತಿ, ವರ್ಗಗಳನ್ನು ಒಟ್ಟಿಗೆ ತಗೊಂಡ್ ಹೋಗೋರು ಸಿಎಂ ಆಗ್ತಾರೆ. ಮುನಿರತ್ನ ಜೊತೆಯಲ್ಲಿದ್ದಾಗ ಏನೂ ಆರೋಪ ಮಾಡಲಿಲ್ಲ. ಮುನಿರತ್ನ ಜೊತೆಯಲ್ಲಿ ಇಲ್ಲ ಅಂತ ಇಲ್ಲಸಲ್ಲದ ಆರೋಪ ಮಾಡೋದು ಸರಿಯಲ್ಲ. ಕಾಂಗ್ರೆಸ್ ನಾಯಕರ ಇಂಥ ಹೇಳಿಕೆಗಳು ನೋವು ತಂದಿವೆ ನನಗೆ. ನಾನು ವೋಟರ್ ಅಡಿಯಲ್ಲಿ ಗೌಡ ಅಂತ ಇರೋದನ್ನು ಡಿಲೀಟ್ ಮಾಡಿಸುವಷ್ಟು ನೀಚ ಕೆಲಸ ಮಾಡಲ್ಲ ನಾನು. ಅಂಥ ನೀಚ ಕೃತ್ಯಕ್ಕೆ ಕೈಹಾಕುವ ಸಂಸ್ಕೃತಿ‌ ನನ್ನದಲ್ಲ ಎಂದು ವಾಗ್ದಾಳಿ ನಡೆಸಿದರು.

ಆರ್.ಆರ್.ನಗರ ಕ್ಷೇತ್ರದಲ್ಲಿ ರೆಡ್ಡಿ ವರ್ಸಸ್ ಒಕ್ಕಲಿಗ ಫೈಟ್ ಇದೆ ಎಂಬ ಕುಸುಮ ತಂದೆ ಹನುಮಂತರಾಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಈಗಾಗಲೇ ಲಿಂಗಾಯತ ಸಮುದಾಯ ಒಡೆದು ಆಳೋದಿಕ್ಕೆ ಹೋಯ್ತು. ಟಿಪ್ಪು ಜಯಂತಿ ತಂದು ಹಾಳು ಮಾಡಿದ್ರು. ಈಗ ಹೊಸದಾಗಿ ಬೆಂಗಳೂರಿಗೆ ರೆಡ್ಡಿ-ಒಕ್ಕಲಿಗ ಅನ್ನೋದನ್ನು ತರ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಈ ಸಂಸ್ಕೃತಿ ಇರೋದಿಕ್ಕೇನೇ ಪಕ್ಷ ಇವತ್ತು ಹೀಗಿರೋದು. ನಮ್ಮ‌ ದೇಶ, ನಾವೆಲ್ಲ ಒಂದು ಅನ್ನೋದಿಲ್ಲ ಕಾಂಗ್ರೆಸ್​ನಲ್ಲಿ. ಮನಸ್ಸುಗಳನ್ನು ಒಡೆದು ಆಳೋದು ಕಾಂಗ್ರೆಸ್ ಸಂಸ್ಕೃತಿ. ಇದು ನೀಚತನದ ಸಂಸ್ಕೃತಿ. ಕಾಂಗ್ರೆಸ್​ನ ಈ ಸಂಸ್ಕೃತಿ ರಾಜ್ಯಕ್ಕೆ, ದೇಶಕ್ಕೆ ಮಾರಕ ಎಂದು ಕಿಡಿಕಾರಿದರು.

ಮುನಿರಾಜುಗೌಡರನ್ನು ಸೋಲಿಸಿದ್ದು ಹನುಮಂತರಾಯಪ್ಪ. ಹನುಮಂತರಾಯಪ್ಪ ಹಿನ್ನೆಲೆ ಒಮ್ಮೆ ತೆಗೆದು ನೋಡಿ. ಹನುಮಂತರಾಯಪ್ಪ ಬಿಜೆಪಿಗೂ ರೆಡಿ, ಕಾಂಗ್ರೆಸ್​ಗೂ ರೆಡಿ, ಜೆಡಿಎಸ್​ಗೂ ರೆಡಿ. ಎಲ್ಲ ಪಕ್ಷಕ್ಕೂ ಕೆಲಸ ಮಾಡಲು ಹನುಮಂತರಾಯಪ್ಪ ರೆಡಿ. ಇಂಥ ಸ್ವಾರ್ಥ ರಾಜಕಾರಣಿಗಳಿಂದಲೇ‌ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿರೋದು ಎಂದರು.

ತುಳಸಿ‌ ಮೇಲೆ ನನಗೆ ಗೌರವ ಇದೆ: ತುಳಸಿ ಮುನಿರಾಜುಗೌಡ ಅವರು ಈಗಾಗಲೇ ಹತ್ತು ಸಭೆ ಮಾಡಿದ್ದಾರೆ. ಕಾರ್ಯಕರ್ತರ ಜೊತೆ ಮುನಿರಾಜುಗೌಡ ಸಭೆಗಳನ್ನು ಮಾಡ್ತಿದ್ದಾರೆ. ತುಳಸಿ ಮುನಿರಾಜುಗೌಡರ ಮೇಲೆ ನನಗೆ ಗೌರವ ಇದೆ ಎಂದು ಸ್ಪಷ್ಟಪಡಿಸಿದರು.

ಅವರು ಪ್ರಾಮಾಣಿಕಾವಾಗಿ ಕೆಲಸ ಮಾಡ್ತಿದ್ದಾರೆ. ರಾಜಕೀಯದಲ್ಲಿ ಟಿಕೆಟ್ ವಿಚಾರದಲ್ಲಿ ಒಂದೇ ಪಕ್ಷದವ್ರು ಜಗಳ ಆಡೋದು ಸಹಜ. ನಾವಿಬ್ರೂ ಎಲ್ಲ‌ಮ ಮರೆತು ಒಟ್ಟಾಗಿ ಕೆಲಸ ಮಾಡ್ತಿದೀವಿ. ತುಳಸಿ ಮುನಿರಾಜು ಗೌಡರನ್ನು ಭೇಟಿ ಆಗ್ತೇನೆ‌ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.