ಬೆಂಗಳೂರು: ಆರ್ ಆರ್ ನಗರದ ಹ್ಯಾಟ್ರಿಕ್ ಗೆಲುವನ್ನು ಪಡೆದ ಮುನಿರತ್ನ ಭಾರಿ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕುಸುಮ ಅವರ ವಿರುದ್ಧ ಅಭೂತ ಪೂರ್ವ ಗೆಲುವನ್ನು ಸಾಧಿಸಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಂತರ ಮುನಿರತ್ನ ಅವರು ನಮ್ಮ ಜೊತೆ ಮಾತನಾಡಿದ್ದು ಗೆಲುವನ್ನು ತಮ್ಮ ಕ್ಷೇತ್ರದ ಜನರಿಗೆ ಮುಡಿಪಾಗಿಡುವುದಾಗಿ ತಿಳಿಸಿದ್ದಾರೆ.
ದೀಪಾವಳಿ ಮುಗಿದ ಬಳಿಕ ಪ್ರತಿ ಭಾಗದಲ್ಲಿ ಸಭೆ ನೆಡಸಿ ಅವರ ಕುಂದು ಕೊರತೆ ನೀಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ನಮ್ಮ ರಾಜ ರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಮತದಾರ ಬಂಧುಗಳು ಅತಿ ಹೆಚ್ಚು ಮತಗಳನ್ನು ಕೊಟ್ಟಿದ್ದು ಇದು ಅವರಿಗೆ ಸಲ್ಲಬೇಕಾದ ಗೆಲುವು. ಅವರ ಸೇವೆ ಮಾಡೋದಕ್ಕೆ ಮತಗಳ ಮುಖಾಂತರ ಸಂದೇಶವನ್ನು ಕೊಟ್ಟಿದ್ದು ,ಅವರ ಋಣ ತೀರಿಸುತ್ತೇನೆ ಎಂದು ತಿಳಿಸಿದರು.
ಚುನಾವಣೆ ಮುಗಿದ ಬಳಿಕ ನನ್ನ ಕ್ಷೇತ್ರಕ್ಕೆ ಒಳ್ಳೆಯದು ಮಾಡುವುದು ನನ್ನ ಗುರಿಯಾಗಿದೆ. ಅದರ ಬಗ್ಗೆ ಮಾತ್ರ ನಾನು ಯೋಚುಸುತ್ತೇನೆ, ಪ್ರತಿಸ್ಪರ್ಧಿ ಬಗ್ಗೆ ಹೆಚ್ಚೇನನ್ನು ಹೇಳಲು ಇಷ್ಟ ಪಡುವುದಿಲ್ಲ. ನನ್ನ ಕ್ಷೇತ್ರದ ಮತದಾರ ಅವರ ತೀರ್ಪು ಕೊಟ್ಟಿದ್ದು ಇದರಲ್ಲಿ ಯಾವ ತಂತ್ರಗರಿಕೆಯೂ ಇಲ್ಲ. ನಾನು ಅವರ ಆಶೀರ್ವಾದದ ಮುಖಾಂತರ ಕೆಲಸ ಮಾಡುತ್ತೇನೆ ಎಂದ ಅವರು, ಮಂತ್ರಿ ಸ್ಥಾನದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಇಚ್ಛಿಸುವುದಿಲ್ಲ ಎಂದರು.