ETV Bharat / state

ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ರೀ ಓಪನ್​ ಮಾಡಿ : ಸಿಎಂಗೆ ಸಂಸದೆ ಸುಮಲತಾ ಮನವಿ

ಜಿಲ್ಲೆಯ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಮನವಿ ಮಾಡಿದ್ದೇವೆ. ಅಕ್ರಮ ಗಣಿಗಾರಿಕೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಕೆಆರ್​ಎಸ್ ಸುತ್ತಮುತ್ತ ಗಣಿಗಾರಿಕೆ ನಿಯಂತ್ರಣದಲ್ಲಿದೆ. ಆದರೂ ಅಕ್ರಮ ಗಣಿಗಾರಿಕೆ ಕುರಿತು ಕ್ರಮಕ್ಕೆ ಮನವಿ ಮಾಡಿದ್ದೇನೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ..

ಸಿಎಂಗೆ ಸುಮಲತಾ ಮನವಿ
ಸಿಎಂಗೆ ಸುಮಲತಾ ಮನವಿ
author img

By

Published : Feb 21, 2022, 6:46 PM IST

ಬೆಂಗಳೂರು : ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಆದಷ್ಟು ಬೇಗ ಆರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಮನವಿ ಸಲ್ಲಿಸಿದ್ದಾರೆ.

ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿ, ಸಕ್ಕರೆ ಕಾರ್ಖಾನೆ ಆರಂಭ ಕುರಿತು ಮಾತುಕತೆ ನಡೆಸಿದರು. ಈ ಹಿಂದಿನ ಭೇಟಿ ವೇಳೆ ಮನವಿಗಳ ಕುರಿತು ನೆನಪಿಸಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಆರಂಭಿಸಿ, ಕಬ್ಬು ಬೆಳೆಗಾರರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮೈಶುಗರ್ ಕಾರ್ಖಾನೆ ಆದಷ್ಟು ಬೇಗ ಶುರು ಮಾಡಬೇಕು. ಮೂರು ನಾಲ್ಕು ತಿಂಗಳ ಒಳಗೆ ಆಗಬೇಕು ಎಂದು ಮನವಿ ಮಾಡಿದ್ದೇವೆ.

ಜೊತೆಗೆ ಜಿಲ್ಲೆಯ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಮನವಿ ಮಾಡಿದ್ದೇವೆ. ಅಕ್ರಮ ಗಣಿಗಾರಿಕೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಕೆಆರ್​ಎಸ್ ಸುತ್ತಮುತ್ತ ಗಣಿಗಾರಿಕೆ ನಿಯಂತ್ರಣದಲ್ಲಿದೆ. ಆದರೂ ಅಕ್ರಮ ಗಣಿಗಾರಿಕೆ ಕುರಿತು ಕ್ರಮಕ್ಕೆ ಮನವಿ ಮಾಡಿದ್ದೇನೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ವಿಶ್ವ ಹಿಂದೂ ಪರಿಷತ್​ ಆಗ್ರಹ

ಶಿವಮೊಗ್ಗದಲ್ಲಿ ಹರ್ಷ ಎನ್ನುವ ಯುವಕನ ಹತ್ಯೆ ಘಟನೆಯನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಖಂಡಿಸಿದರು. ಈ ರೀತಿಯ ಘಟನೆ ಆಗಬಾರದಾಗಿತ್ತು. ನಾವು ಕರ್ನಾಟಕದವರು ಶಾಂತಿ ಪ್ರಿಯರು.

ಈ ಘಟನೆಯಿಂದ ಗುಪ್ತಚರ ಇಲಾಖೆ ವೈಫಲ್ಯ ಅಂತಾ ಹೇಳೋಕೆ ಆಗಲ್ಲ. ಸರ್ಕಾರ ಕೂಡ ಸೂಕ್ತ ಕ್ರಮಕೈಗೊಂಡಿದೆ. ಇನ್ಮುಂದೆ ಆದರೂ ಈ ರೀತಿಯ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು ಎಂದರು.

ಮುಸ್ಲಿಂ ಗೂಂಡಾಗಳಿಂದ ಕೊಲೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ನಾನು ಮಾತಾಡಲ್ಲ ಎಂದ ಸುಮಲತಾ ಅಂಬರೀಶ್, ತನಿಖೆ ನಂತರ ಸತ್ಯ ಹೊರಬರಲಿದೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.