ಬೆಂಗಳೂರು: ಗಂಡನ ದುರ್ವತನೆಗೆ ಬೇಸತ್ತು ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ತಂದೆಯ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್ ಸ್ಟೇಟಸ್ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿದ್ದಾರೆ. ರಾಜೇಶ್ವರಿ (43) ಹಾಗೂ ಮಕ್ಕಳಾದ ಮಾನಸ (17), ಭೂಮಿಕ (15) ಮೃತ ದುರ್ದೈವಿಗಳು.
ಮೂಲತ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದ @ ಸಿದ್ದಯ್ಯ ಎಂಬಾತನನ್ನ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ರು. ಸಿದ್ದಯ್ಯ ಮೊದಲು ಆಟೋ ಓಡಿಸುತ್ತಿದ್ದ. ಶೋಕಿಲಾಲನಾಗಿದ್ದ ಸಿದ್ದಯ್ಯ ಬೇರೆ ಬೇರೆ ಹೆಣ್ಣುಗಳ ಶೋಕಿಗೆ ಬಿದ್ದಿದ್ದ. ಅದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೆ ಜಗಳವಾಗುತ್ತಿತ್ತಂತೆ.
ಆದ್ರೆ ತನ್ನ ಕುಟುಂಬವನ್ನ ಟ್ರಿಪ್ಗೆ ಕರೆದುಕೊಂಡು ಹೋಗುವ ಬದಲು ಬೇರೆ ಹೆಂಗಸಿನ ಜೊತೆ ಟ್ರಿಪ್ ಹೋಗಿರುವುದು ಪತ್ನಿ ರಾಜೇಶ್ವರಿ ಮತ್ತು ಇಬ್ಬರು ಮಕ್ಕಳಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೇಸತ್ತು ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ಆರೋಪಿ ಸಿದ್ದಯ್ಯ ತಮಿಳುನಾಡು ಟ್ರಿಪ್ನಲ್ಲಿದ್ದಾನೆ. ಮೃತರ ಪೋಷಕರು ಸಿದ್ದಯ್ಯನ ಕಿರುಕುಳದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.