ಬೆಂಗಳೂರು: ರಾಜ್ಯದ ಜನತೆಗೆ ಕೆಎಸ್ಆರ್ಟಿಸಿ ಬಿಗ್ ಶಾಕ್ ಕೊಡಲು ಮುಂದಾಗಿದೆ. ದಿನನಿತ್ಯ ಸಂಚರಿಸುತ್ತಿದ್ದ ನೂರಕ್ಕೂ ಹೆಚ್ಚು ಬಸ್ಗಳ ಸಂಚಾರವನ್ನು ರದ್ದುಗೊಳಿಸಿ ಕೆಎಸ್ಆರ್ಟಿಸಿ ಸಂಸ್ಥೆ ಆದೇಶ ಹೊರಡಿಸಿದೆ.
ಬೆಂಗಳೂರಿನಿಂದ ಹಾಸನ ಹಾಗೂ ಬೆಂಗಳೂರಿನಿಂದ ಮೈಸೂರು ಮಾರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 124 ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿ ದಿನನಿತ್ಯ 414 ಬಸ್ಗಳ ಸಂಚಾರ ವ್ಯವಸ್ಥೆ ಇದ್ದರೂ, ಸಂಚಾರ ಮಾತ್ರ ಶೇಕಡ 54% ಇತ್ತು. ಈ ಮಾರ್ಗದಲ್ಲಿ ರೈಲು ವ್ಯವಸ್ಥೆ ಕೂಡ ಇದ್ದು, ಸಂಸ್ಥೆಗೆ ಇದರಿಂದ ಹೊಡೆತ ಬೀಳುತ್ತಿದೆ.. ಈ ಹಿನ್ನೆಲೆ ಕಡಿಮೆ ಆದಾಯ ಹಾಗೂ ಜನಸಂಚಾರ ಕಡಿಮೆ ಇದ್ದ 62 ಬಸ್ಗಳನ್ನು ಈ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ. ಇನ್ನು ಹಾಸನ ಮಾರ್ಗಕ್ಕೆ ಸಂಚರಿಸುತ್ತಿದ್ದ 345 ಬಸ್ಗಳಲ್ಲಿ 52 ಬಸ್ಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಕೆಎಸ್ಆರ್ಟಿಸಿಯ ಮುಖ್ಯ ಸಂಚಾರ ಅಧಿಕಾರಿ, ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ರದ್ದುಗೊಳಿಸಿದ ಬಸ್ಗಳನ್ನ ಮೂಲೆಗುಂಪು ಮಾಡುವ ಬದಲು ಆಯಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅವಶ್ಯಕತೆ ಇರುವ ಹಾಗೂ ಹೆಚ್ಚಿನ ಆದಾಯ ಬರುವ ಪ್ರದೇಶಗಳಿಗೆ ನಿಯೋಜನೆ ಮಾಡಲಾಗ್ತಿದ್ದು, ಸಂಸ್ಥೆ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ.