ETV Bharat / state

' 7,800 ಕ್ಕೂ ಹೆಚ್ಚು ಶಾಲಾ ಕಾಲೆಜುಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಜೊತೆ ಕೈ ಜೋಡಿಸಲು ಮುಂದಾಗಿವೆ'

author img

By

Published : Sep 12, 2021, 3:31 AM IST

ಹೊಸ ಶಿಕ್ಷಣ ನೀತಿಯ ಭಾಗವಾಗಿ ಎನ್‌ಸಿಸಿಯನ್ನು ಐಚ್ಛಿಕ ವಿಷಯವಾಗಿ ಜಾರಿಗೊಳಿಸಲಾಗಿದೆ ಎಂದು ಎನ್‌ಸಿಸಿ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ತಿಳಿಸಿದರು.

More than 7,800 school colleges are set to join hands with the National Cadet Corps
ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್

ಬೆಂಗಳೂರು: ದೇಶದ 7,800 ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಜೊತೆ ಕೈಜೋಡಿಸಲು ಮುಂದೆ ಬಂದಿವೆ ಎಂದು ಸೇನಾ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ಹೇಳಿದರು.

ಅತಿ ವಿಶಿಷ್ಟ ಸೇವಾ ಮೇಡಲ್ ಪಡೆದಿರುವ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ( ರಾಷ್ಟ್ರೀಯ ಎನ್.ಸಿ.ಸಿ ಮಹಾನಿರ್ದೇಶಕರು) ಸೈನಿಕ ದರ್ಬಾರ್ ಕಾರ್ಯಕ್ರಮದಲ್ಲಿ ರಾಜ್ಯ ಎನ್.ಸಿ.ಸಿ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಬೆಂಗಳೂರಿನ ಎ.ಎಸ್.ಸಿ ಸೆಂಟರ್ ನಲ್ಲಿ ಮಾತನಾಡಿದರು.

ಹೊಸ ಶಿಕ್ಷಣ ನೀತಿಯ ಭಾಗವಾಗಿ ಎನ್‌ಸಿಸಿಯನ್ನು ಐಚ್ಛಿಕ ವಿಷಯವಾಗಿ ಜಾರಿಗೊಳಿಸಲಾಗಿದೆ ಎಂದು ಎನ್‌ಸಿಸಿ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ತಿಳಿಸಿದರು.

ಸಿಬ್ಬಂದಿ ಮತ್ತು ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಎಎಸ್‌ಸಿ ಸೆಂಟರ್ ಮತ್ತು ಕಾಲೇಜ್ ಉತ್ತಮ ಕೆಲಸ ಮಾಡ್ತುತ್ತಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಮೆರಿಟೋರಿಯಸ್ ಕೆಡೆಟ್‌ಗಳಿಗೆ ಡಿಜಿ ಎನ್‌ಸಿಸಿ ಮೆಡಾಲಿಯನ್‌ಗಳನ್ನು ನೀಡಲಾಗಿದೆ ಎಂದರು.

More than 7,800 school colleges are set to join hands with the National Cadet Corps
ರಾಜ್ಯದ 8 ಜನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಮೆಡಲ್

ಕರ್ನಾಟಕ ಮತ್ತು ಗೋವಾ ಎನ್‌ಸಿಸಿಯ ಅತ್ಯುತ್ತಮ ವಿಭಾಗಗಳಲ್ಲಿ ಒಂದಾಗಿದೆ. ಮಾಡುತ್ತಿರುವ ಕಾರ್ಯಗಳು ಶ್ರದ್ಧೆ ಮತ್ತು ವೃತ್ತಿಪರವಾಗಿವೆ. ಕೆಡೆಟ್‌ಗಳ ತರಬೇತಿಗೆ ಸಾಂಕ್ರಾಮಿಕ ರೋಗವು ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದರು.

ಉತ್ಕೃಷ್ಟತೆಗಾಗಿ ಶ್ರಮಿಸುವಂತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಕೆಡೆಟ್‌ಗಳಿಗೆ ಪ್ರೋತ್ಸಾಹಿಸುತ್ತೇವೆ. ಹೊಸ ಶಿಕ್ಷಣ ಪಾಲಿಸಿಯ ಭಾಗವಾಗಿ ಎನ್.ಸಿ.ಸಿ ಚುನಾಯಿತ ವಿಷಯವಾಗಿ ಜಾರಿಗೆ ಕೈಗೊಂಡಿದ್ದೇವೆ. ದೇಶದ 7,800 ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನ ಜೊತೆ ಕೈಜೋಡಿಸಲು ಮುಂದೆ ಬಂದಿವೆ. ವಿವಿಧ ರಾಜ್ಯಗಳ ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಮತ್ತು ಹಂತ ಹಂತವಾಗಿ ತನ್ನ ಅಧಿಕೃತ ಶಕ್ತಿಯನ್ನು ಹೆಚ್ಚಿಸಲು ಯೋಜಿಸಿದೆ. ಎಫ್‌ಎಸ್‌ಎಫ್‌ಎಸ್ (ಸಂಪೂರ್ಣ ಸ್ವ-ಹಣಕಾಸು ಯೋಜನೆ) ಈ ದಿಕ್ಕಿನ ಮತ್ತೊಂದು ಹೆಜ್ಜೆಯಾಗಿದ್ದು, ಇದು ಹಲವಾರು ಶಾಲೆಗಳು ಮತ್ತು ಕಾಲೇಜುಗಳಿಗೆ ಎನ್‌ಸಿಸಿಯನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ 8 ಜನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳಿಗೆ ವಿಶಿಷ್ಟ ಸೇವಾ ಮೆಡಲ್ ವಿತರಿಸಲಾಯಿತು. ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ಮಹಾನಿರ್ದೇಶಕರಾದ ಬಿ. ಎಸ್. ಕನ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ( ರಾಷ್ಟ್ರೀಯ ಎನ್.ಸಿ.ಸಿ ಮಹಾನಿರ್ದೇಶಕರು) ಅಧಿಕಾರ ವಹಿಸಿಕೊಂಡ ಮೇಲೆ ಕರ್ನಾಟಕ ಎನ್.ಸಿ.ಸಿ ನಿರ್ದೇಶನಾಲಯಕ್ಕೆ ಮೊದಲ ಭೇಟಿ ಇದಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.