ETV Bharat / state

ಟ್ರಾಫಿಕ್​​ ವಾರ್ಡನ್​​ಗಳಾಗಿ ಸೇವೆ ಸಲ್ಲಿಸಲು ಮುಂದೆ ಬಂದ 500ಕ್ಕೂ ಹೆಚ್ಚು ಜನ!

ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳ ಜೊತೆಗೆ ವಾಹನಗಳ‌ ಸಂಖ್ಯೆಯು ಅಧಿಕವಾಗಿದೆ. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.‌ ಸುಮಾರು 390 ಮಂದಿ ಟ್ರಾಫಿಕ್ ವಾರ್ಡನ್​ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ. ಈ ಸಂಬಂಧ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ವಾರ್ಡನ್​​ಗಳ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ ಪರಿಣಾಮ ಸ್ವಯಂ ಪ್ರೇರಿತವಾಗಿ 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್​​​ಗಳಾಗಿ‌‌ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.

Ravikanthe Gowda, ರವಿಕಾಂತೇಗೌಡ
author img

By

Published : Sep 26, 2019, 4:25 AM IST

ಬೆಂಗಳೂರು: ದಿನೇ ದಿನೆ ಜಟಿಲಗೊಳ್ಳುತ್ತಿರುವ ಸಂಚಾರ ಸಮಸ್ಯೆ ಕಡಿಮೆ‌ ಮಾಡಲು ಸುಮಾರು 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್​ಗಳಾಗಿ ಸೇವೆ ಸಲ್ಲಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.

ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ

ಈಟಿವಿ ಭಾರತ ಜೊತೆ ಮಾತನಾಡಿದ ಅವರು, ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳ ಜೊತೆಗೆ ವಾಹನಗಳ‌ ಸಂಖ್ಯೆಯು ಅಧಿಕವಾಗಿದೆ. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.‌ ಇದರಿಂದ ಗಂಟೆಗಟ್ಟಲೇ ವಾಹನ ಸವಾರರು ರಸ್ತೆಯಲ್ಲಿ ಇರಬೇಕಾದ ಪ್ರಮೇಯ ಎದುರಾಗಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸುಮಾರು 390 ಮಂದಿ ಟ್ರಾಫಿಕ್ ವಾರ್ಡನ್​ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ. ಈ‌‌ ನಿಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳ ಅರಿವಿದ್ಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಲಿಕಾನ್ ಸಿಟಿಯಲ್ಲಿ ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲು ಸುಮಾರು 2500 ಟ್ರಾಫಿಕ್ ವಾರ್ಡನ್​ಗಳು ಅಗತ್ಯವಾಗಿದ್ದು, ಆಸ್ತಕರು ಮುಂದೆ ಬರಬಹುದು ಎಂದು ಆಹ್ವಾನಿಸಿದ್ದರು.

ನಗರದ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ವಾರ್ಡನ್​​ಗಳ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ ಪರಿಣಾಮ ಸ್ವಯಂ ಪ್ರೇರಿತವಾಗಿ 500ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್​​ಗಳಾಗಿ‌‌ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಟ್ರಾಫಿಕ್ ವಾರ್ಡನ್​ಗಳಿಗೆ ಯಾವುದೇ ಸಂಬಳವಿರುವುದಿಲ್ಲ. ಸಾಮಾಜಿಕ‌ ಕಳಕಳಿ‌ ಮೇರೆಗೆ ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

Intro:Body:Mojo byte
ಟ್ರಾಫಿಕ್ ವಾರ್ಡನ್ ಗಳಾಗಿ ಸೇವೆ ಸಲ್ಲಿಸಲು ಮುಂದಾದ 500ಕ್ಕೂ ಹೆಚ್ಚು ಜನ

ಬೆಂಗಳೂರು: ದಿನೇ ದಿನೆ ಜಟಿಲಗೊಳ್ಳುತ್ತಿರುವ ಸಂಚಾರ ಸಮಸ್ಯೆ ಕಡಿಮೆ‌ ಮಾಡಲು ಸುಮಾರು 500 ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್ ಗಳಾಗಿ ಸೇವೆ ಸಲ್ಲಿಸಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ.

ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳ ಜೊತೆಗೆ ವಾಹನಗಳ‌ ಸಂಖ್ಯೆಯು ಅಧಿಕವಾಗಿದೆ. ಇದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.‌ ಇದರಿಂದ ಗಂಟೆಗಟ್ಟಲೇ ವಾಹನ ಸವಾರರು ರಸ್ತೆಯಲ್ಲಿ ಇರಬೇಕಾದ ಪ್ರಮೇಯ ಎದುರಾಗಿದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದರ ಜೊತೆ 390 ಮಂದಿ ಟ್ರಾಫಿಕ್ ವಾರ್ಡನ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆ ಉಳಿದಿದೆ.
ಈ‌‌ ನಿಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳ ಅರಿವಿದ್ಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಲಿಕಾನ್ ಸಿಟಿಯಲ್ಲಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಲು ಸುಮಾರು 2500 ಟ್ರಾಫಿಕ್ ವಾರ್ಡನ್ ಗಳು ಅಗತ್ಯವಾಗಿದ್ದು ಆಸ್ತಕರು ಮುಂದೆ ಬರಬಹುದು ಎಂದು ಆಹ್ವಾನಿಸಿದ್ದರು.
ನಗರದ 44 ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ವಾರ್ಡನ್ ಗಳ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ ಪರಿಣಾಮ ಸ್ವಯಂಪ್ರೇರಿತವಾಗಿ 500 ಕ್ಕೂ ಹೆಚ್ಚು ಮಂದಿ ಟ್ರಾಫಿಕ್ ವಾರ್ಡನ್ ಗಳಾಗಿ‌‌ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ.
ಟ್ರಾಫಿಕ್ ವಾರ್ಡನ್ ಗಳಿಗೆ ಯಾವುದೇ ಸಂಬಳವಿರುವುದಿಲ್ಲ.. ಸಾಮಾಜಿಕ‌ ಕಳಕಳಿ‌ ಮೇರೆಗೆ ಇವರು ಕಾರ್ಯನಿರ್ವಹಿಸಲಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.