ಯಲಹಂಕ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ -2021 ನಡೆಯುತ್ತಿದೆ. ಆದರೆ ಕೃಷಿಮೇಳದ ಪ್ರಾರಂಭದ ದಿನದಿಂದಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ, ಆದರೂ ಮಳೆಯನ್ನು ಲೆಕ್ಕಿಸದೇ ಕಳೆದ ಮೂರು ದಿನಗಳಿಂದ 3 ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಭೇಟಿ ನೀಡಿದ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ನವೆಂಬರ್ 11 ರಂದು ಪ್ರಾರಂಭವಾದ ಕೃಷಿಮೇಳ ನವೆಂಬರ್ 14 ರವರೆಗೂ ನಡೆಯಲಿದ್ದು, ಮೂರು ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಕೃಷಿಮೇಳಕ್ಕೆ ಭೇಟಿ ನೀಡಿದ್ದಾರೆ, ಕೊರೊನಾ ಹಿನ್ನಲೆ ಕೃಷಿ ಮೇಳವನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಪ್ರಸಾರ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 12. 96 ಲಕ್ಷ ಜನ ವಿಕ್ಷಣೆ ಮಾಡಿದ್ದಾರೆ. 8000 ಜನರು ರಿಯಾಯಿತಿ ದರದಲ್ಲಿ ಊಟ ಮಾಡಿದ್ದಾರೆ. 703 ರೈತರು ಕೃಷಿ ವಿಜ್ಞಾನಿಗಳಿಂದ ಸಲಹೆ ಪಡೆದಿದ್ಥಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕೊನೆಯ ದಿನವಾದ ಭಾನುವಾರ ರಜಾ ದಿನ ಇರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಮಳೆ ವಿರಾಮ ನೀಡಿದ್ದು ಬೆಂಗಳೂರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳಕ್ಕೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ:ಮೀನಿನ ತ್ಯಾಜ್ಯವೇ ಸಸ್ಯಗಳಿಗೆ ಆಹಾರ: ಕೃಷಿ ಮೇಳದಲ್ಲಿ ಗಮನ ಸೆಳೆದ ''ಮೈಕ್ರೋ ಫೋನಿಕ್ಸ್'