ಬೆಂಗಳೂರು: ಹಿರಿಯ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ. ಮನೆ ಬಾಗಿಲು ಮೀಟಿರುವ ಖದೀಮರು ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಪತಿ ಜ್ಯೋತಿಪ್ರಕಾಶ್ ಜತೆ ನಟಿ ಅಕ್ಟೋಬರ್ 22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದರು. ಅ.26ರಂದು ಸಂಜೆ 4:30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿನಯಾ ಪ್ರಸಾದ್ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸುಬ್ರಹ್ಮಣ್ಯ: ನವಜಾತ ಗಂಡು ಮಗುವನ್ನು ಬಾವಿಗೆಸೆದು ಕೊಂದ ತಾಯಿ