ETV Bharat / state

ಬೆಂಗಳೂರು: ಬೈಕ್ ಅಡ್ಡಗಟ್ಟಿ ಹಣ ಸುಲಿಗೆ, ದುಷ್ಕರ್ಮಿ ಪರಾರಿ

ಬೈಕ್​ ಸವಾರನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಯೊಬ್ಬ ಹಣ ಸುಲಿಗೆ ಮಾಡಿ ಕಾಲ್ಕಿತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೈಕ್ ತಡೆಗಟ್ಟಿದ ಖದೀಮ
ಬೈಕ್ ತಡೆಗಟ್ಟಿದ ಖದೀಮ
author img

By

Published : Oct 20, 2022, 3:18 PM IST

Updated : Oct 20, 2022, 3:49 PM IST

ಬೆಂಗಳೂರು: ನಗರದಲ್ಲಿ ಹಾಡಹಾಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ‌ದ‌‌ ದುಷ್ಕರ್ಮಿಯೊಬ್ಬ ಹಣ ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಈ ಕುರಿತು ಪ್ರಕರಣ ದಾಖಲಾಗಿದೆ.

ಬೈಕ್ ತಡೆಗಟ್ಟಿ ಸುಲಿಗೆ ಮಾಡಿದ ಖದೀಮ

ಇದೇ ತಿಂಗಳು 15ರಂದು ಇಟಿಎಂ ಮಾಲ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಸುಲಿಗೆ ಮಾಡುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್ 15 ರಂದು ಮಹೇಂದ್ರ ಕುಮಾರ್ ಮೇಸ್ತಾ ಎಂಬುವರು ಇಟಿಎಂ ಮಾಲ್ ಬಳಿಯಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿ ಹಣ‌ ನೀಡುವಂತೆ ಬೆದರಿಕೆ ಹಾಕಿದ್ದಾನೆ.‌ ಇದಕ್ಕೆ ನಿರಾಕರಿಸಿದಾಗ ಚಾಕು ತೋರಿಸಿ ತಿವಿಯುವುದಾಗಿ ಹೆದರಿಸಿದ್ದಾನೆ. ಬಳಿಕ ಭೀತಿಗೊಳಗಾದ ಮಹೇಂದ್ರ ಅವರಿಂದ 13 ಸಾವಿರ ರೂ ಹಾಗೂ ಆಧಾರ್ ಕಾರ್ಡ್ ಕಸಿದುಕೊಂಡು‌ ಪರಾರಿಯಾಗಿದ್ದ. ಪೊಲೀಸರು ಆರೋಪಿಗೆ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಳವು ಮಾಡಲು ಬಂದು ಸಿಕ್ಕಿಬಿದ್ರು: ಕಳ್ಳರನ್ನು ಅಟ್ಟಾಡಿಸಿ ಹಿಡಿದ ಗ್ರಾಮಸ್ಥರು

Last Updated : Oct 20, 2022, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.