ETV Bharat / state

ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ ಆರಂಭ : ಎರಡು ಗಂಟೆ ಭರ್ಜರಿ ಮತಬೇಟೆ

ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಇಂದು ಬರೋಬ್ಬರಿ 26 ಕಿಮೀ ರೋಡ್ ಶೋ ನಡೆಸುತ್ತಿದ್ದಾರೆ. ನಗರದ ಮೂವರು ಸಂಸದರು ಈ ರ‍್ಯಾಲಿಗೆ ಸಾಥ್ ನೀಡಿದ್ದಾರೆ.

MODI ROADSHOW COUNTDOWN
MODI ROADSHOW COUNTDOWN
author img

By

Published : May 6, 2023, 10:10 AM IST

Updated : May 6, 2023, 10:56 AM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರೋಡ್ ಶೋ ಆರಂಭವಾಗಿದೆ. ಸದ್ಯ ರಾಜಭವನದಿಂದ ಹೊರಟಿರುವ ಮೋದಿ, ಮೇಖ್ರಿ ವೃತ್ತ ಸಮೀಪದ ಹೆಲಿಪ್ಯಾಡ್​ನಿಂದ ಜೆ.ಪಿ. ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಬೃಹತ್ ಐತಿಹಾಸಿಕ ರ‍್ಯಾಲಿ ಶುರುವಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 13 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಮೋದಿ ರೋಡ್ ಶೋ ನಡೆಸುತ್ತಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದ ಸೋಮೇಶ್ವರ ದೇವಾಲಯದಿಂದ ಈ ರ‍್ಯಾಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜಭವನದಿಂದ ಆಗಮಿಸಿದರು. ರ‍್ಯಾಲಿಗೆ ಬೆಂಗಳೂರು ನಗರದ ಮೂವರು ಸಂಸದರು ಸಾಥ್ ನೀಡಿದ್ದಾರೆ. ಪ್ರಧಾನಿ ಸಾಗಿ ಹೋಗುವ ಮಾರ್ಗದ ಇಕ್ಕೆಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಮುಂಭಾಗ ಬೃಹತ್ ರಂಗೋಲಿ ಹಾಕಿ ಮೊದಿಗೆ ಸ್ವಾಗತ ಕೋರಲಾಗುತ್ತಿದೆ.

ಪ್ರಧಾನಿ ಮೋದಿ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನಿಂದ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂದರೆ ಬರೋಬ್ಬರಿ 26 ಕಿ.ಮೀ. ರೋಡ್ ಶೋ ನಡೆಸುತ್ತಿದ್ದಾರೆ. ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನವನ್ನೂ ಮೋದಿ ಸಾಗುವ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಸಾರಕ್ಕಿ ಜಂಕ್ಷನ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ರಾಮಕೃಷ್ಣ ಆಶ್ರಮ, ಮಕ್ಕಳ ಕೂಟ, ಟೌನ್ ಹಾಲ್, ಕಾವೇರಿ ಭವನ, ಮೆಜೆಸ್ಟಿಕ್, ಮಾಗಡಿ ರೋಡ್, ಜಿಟಿ ವರ್ಲ್ಡ್ ಮಾಲ್, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ಟೆಂಪಲ್​ವರೆಗೆ ರ‍್ಯಾಲಿಯಲ್ಲಿ ಆಗಮಿಸಲಿದ್ದಾರೆ. ವಿಶೇಷ ಪೊಲೀಸ್ ಬಂದೋಬಸ್ತ್ ಆಯೋಜಿಸಿರುವುದು ಮಾರ್ಗದಲ್ಲಿ ಕಂಡು ಬರುತ್ತಿದೆ.

ಅಭಿಮಾನಿಗಳು ಪಕ್ಷದ ಬಾವುಟ ಹಿಡಿದು, ಶಾಲು ಧರಿಸಿ ಸಂಭ್ರಮದಿಂದ ಮೋದಿ ಆಗಮನಕ್ಕೆ ಕಾಯುತ್ತಿದ್ದಾರೆ. ಪ್ರಧಾನಿ ಸಾಗಿಬರುವ ಮಾರ್ಗದುದ್ದಕ್ಕೂ ಹೂವಿನ ಮಳೆಗರೆಯಲು ಜನ ಕಾದು ನಿಂತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಕಳೆದ ವಾರ ರೋಡ್​ ಶೋ ನಡೆಸಿದ್ದ ವೇಳೆ ಮೊಬೈಲ್ ಒಂದು ಮೋದಿಯತ್ತ ತೂರಿ ಬಂದಿತ್ತು. ಹೂವಿನ ಜತೆ ಅಭಿಮಾನಿಯೊಬ್ಬರು ಮೊಬೈಲ್​ ಸಹ ಎಸೆದಿದ್ದರು. ಅಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.

ನೃತ್ಯ ಗೌರವ: ಪ್ರಧಾನಿ ನರೇಂದ್ರ ಮೋದಿ ಸಾಗಿ ಹೋಗುವ ಮಾರ್ಗದಲ್ಲಿ ಜಯನಗರ ಬಳಿ ಭರತನಾಟ್ಯ ಕಲಾವಿದರು ನೃತ್ಯ ಪ್ರದರ್ಶನ ನಡೆಸಲು ಕಾದಿದ್ದಾರೆ. ಮೋದಿ ಮುಂದೆ ನೃತ್ಯ ನಮನ ಸಲ್ಲಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದು, ಮೋದಿಯವರನ್ನು ಇಷ್ಟೊಂದು ಹತ್ತಿರದಿಂದ ನೋಡುತ್ತಿರುವುದು ಸಂತಸದ ಸಂಗತಿ ಎಂದು ಬಾಲಕಿಯರು ಅಭಿಪ್ರಾಯಪಟ್ಟಿದ್ದಾರೆ.

MODI ROADSHOW COUNTDOWN
ಪ್ರಧಾನಿ ಮೋದಿ ರೋಡ್ ಶೋ

ಒಟ್ಟು 26 ಕಿ.ಮೀ. ಉದ್ದನೇ ಮಾರ್ಗದಲ್ಲಿ ಮೋದಿ ಸಾಗಲಿದ್ದಾರೆ. ಬೆಳಗ್ಗೆ 10 ರಿಂದ 12ರವರೆಗೆ ನಡೆಯಲಿದೆ. ನೃತ್ಯ, ಸಾಂಸ್ಕೃತಿಕ ವೈಭವ, ಸಾಂಪ್ರದಾಯಿಕ ಕಲಾ ಪ್ರದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಸಿರಸಿ ವೃತ್ತ ಸಮೀಪ ಪೌರ ಕಾರ್ಮಿಕರು ಮೋದಿ ಆಗಮನಕ್ಕೆ ಕಾದು ನಿಂತಿದ್ದಾರೆ. ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಸಹ ಇದ್ದಾರೆ. ಮಾರ್ಗದಲ್ಲಿ ಮೋದಿ ಹತ್ತು ನಿಮಿಷ ನಿಂತು ಪೌರಕಾರ್ಮಿಕರ ಅಹವಾಲು ಆಲಿಸುವ ಸಾಧ್ಯತೆ ಇದೆ. ಚಾಮರಾಜಪೇಟೆಯಲ್ಲಿ ಬೃಹತ್ ಹನುಮಾನ್ ವಿಗ್ರಹವನ್ನು ಇರಿಸಿ ಸ್ವಾಗತಿಸಲಾಗುತ್ತಿದೆ. ಇನ್ನು ಜೆ.ಪಿ. ನಗರದಲ್ಲಿ ಮೋದಿ ರ್ಯಾಲಿ ಆರಂಭವಾಗುವ ಮಾರ್ಗದಲ್ಲಿ ಆಂಜನೇಯ ವೇಶಧಾರಿ ಒಬ್ಬರು ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆ ಲಕ್ಷಾಂತರ ಅಭಿಮಾನಿಗಳು ಮೋದಿ ಆಗಮನಕ್ಕೆ ಕಾಯುತ್ತಿದ್ದಾರೆ.

  • In a short while, I will be commencing the roadshow across parts of Bengaluru to interact with people of the city. The bond between Bengaluru and BJP is an old and strong one. This city has supported our party since the early days and we have made numerous efforts for its growth.

    — Narendra Modi (@narendramodi) May 6, 2023 " class="align-text-top noRightClick twitterSection" data=" ">

ಮಧ್ಯಾಹ್ನ 12.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್​ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್​ ಅವರೆಗೆ 26.5 ಕಿ.ಮೀ ರೋಡ್ ಶೋ ನಡೆಸುತ್ತಾರೆ. ಭಾನುವಾರ ಬೆಳಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದ ವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆ.

10.00 ಬೆಳಗ್ಗೆ - ಸೋಮೇಶ್ವರ ಸಭಾ ಭವನ10.10 - ಜೆಪಿ ನಗರ 5ನೇ ಹಂತ
10.20 - ಜಯನಗರ 5ನೇ ಬ್ಲಾಕ್10.30 - ಜಯನಗರ 4ನೇ ಬ್ಲಾಕ್
10.40 - ಸೌತ್ ಎಂಡ್ ಸರ್ಕಲ್10.45 - ಮಾಧವರಾವ್ ವೃತ್ತ
11.00 - ರಾಮಕೃಷ್ಣ ಆಶ್ರಮ11.05 - ಉಮಾ ಥಿಯೇಟರ್ ಸಿಗ್ನಲ್
11.15 - ಮೈಸೂರು ಸಿಗ್ನಲ್11.25 - ಟೋಲ್ ಗೇಟ್ ಸಿಗ್ನಲ್
11.35 - ಗೋವಿಂದರಾಜನಗರ11.45 - ಮಾಗಡಿ ರೋಡ್ ಜಂಕ್ಷನ್
12.00 - ಶಂಕರಮಠ ಚೌಕ12.20 - ಮಲ್ಲೇಶ್ವರ ವೃತ್ತ
12.30 - ಸಂಪಿಗೆ ರಸ್ತೆ 18ನೇ ಅಡ್ಡ ರಸ್ತೆ ಜಂಕ್ಷನ್

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಪ್ರಧಾನಿ ಮೋದಿ ರೋಡ್ ಶೋ : 34 ರಸ್ತೆಗಳು ಬಂದ್

Last Updated : May 6, 2023, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.