ETV Bharat / state

ಪ್ರಯಾಣಿಕರ ಸೋಗಲ್ಲಿ ಮೊಬೈಲ್​ ಕದ್ದು, ಹೈದರಾಬಾದ್​ಗೆ ಮಾರಾಟ... ಆರೋಪಿ ಅಂದರ್​! - ಬೆಂಗಳೂರು ಸುದ್ದಿ

ಸಂಶಯಾಸ್ಪದ ವ್ಯಕ್ತಿಯನ್ನ ಹಿಡಿದು ವಿಚಾರಣೆ ನಡೆಸಿ, ಅವನ ಬಳಿಯಿದ್ದ ಬ್ಯಾಗ್ ಚೆಕ್​ ಮಾಡಿದ ಪೊಲೀಸರಿಗೆ ಆಶ್ಚರ್ಯ ಮೂಡಿಸುವ ಘಟನೆಯೊಂದು ನಗರದ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

mobile-theft-while-travel-in-bmtc-bangalore
ಆರೋಪಿ ಅಂದರ್
author img

By

Published : Mar 4, 2020, 8:18 AM IST

Updated : Mar 4, 2020, 11:12 AM IST

ಬೆಂಗಳೂರು: ಸಂಶಯಾಸ್ಪದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿ, ಅವನ ಬಳಿಯಿದ್ದ ಬ್ಯಾಗ್ ಚೆಕ್​ ಮಾಡಿದ ಪೊಲೀಸರಿಗೆ ಆಶ್ಚರ್ಯ ಮೂಡಿಸುವ ಘಟನೆಯೊಂದು ನಗರದ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಬೀಟ್ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ, ಹೆಬ್ಬಾಳ ಫ್ಲೇ ಓವರ್ ಕೆಳ ಭಾಗದಲ್ಲಿರುವ ರಿಂಗ್ ರೋಡ್​ ಬಳಿ ಅನುಮಾನ ಬರುವಂತೆ ನಡೆದುಕೊಂಡು ಹೋಗುತ್ತಿದ್ದ ಆರೋಪಿ ಇಮ್ರಾನ್ ಖಾನ್ ಅಲಿಯಾಸ್ ಇಲಿಯಾಸ್ ಖಾನ್​ನನ್ನು ಬೀಟ್ ಪೊಲೀಸರು ವಶಕ್ಕೆ ಪಡೆದು, ಅವನನ್ನು ವಿಚಾರಣೆ ನಡೆಸಿ, ಅವನ ಬಳಿಯಿದ್ದ ಬ್ಯಾಗ್​ ಪರಿಶೀಲನೆ ಮಾಡಿದಾಗ ಬಳಿ ಬೆಲೆಬಾಳುವ ಹಲವಾರು ಮೊಬೈಲ್ ಫೋನ್​ಗಳು ಪತ್ತೆಯಾಗಿದೆ.

ಇನ್ನು ತನಿಖೆ ವೇಳೆ ಆರೋಪಿ ಸ್ನೇಹಿತರ ಜೊತೆ ಸೇರಿಕೊಂಡು ನಗರದ ವಿವಿಧ ಬಿಎಂಟಿಸಿ ಬಸ್​​ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣ ಮಾಡಿ ಇತರ ಪ್ರಯಾಣಿಕರ ಮೊಬೈಲ್​ಗಳನ್ನು ಕಳ್ಳತನ ಮಾಡಿ, ನಂತರ ಒಂದು ಕಡೆ ಸಂಗ್ರಹಿಸಿಟ್ಟು ಅವುಗಳನ್ನು ಒಮ್ಮೆಗೆ ಹೈದರಾಬಾದ್ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಲು ತೆರಳ್ತಿದ್ದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಆರೋಪಿಯ ಬಳಿಯಿಂದ ವಿವೋ, ಓಪ್ಪೋ, ರೆಡ್ ಮಿ, ಸ್ಯಾಮ್​ಸಂಗ್​​​ ಸೇರಿದಂತೆ ಇತರ ಬ್ರ್ಯಾಂಡ್​ನ 109 ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಾಗೇ ಈತನ ಜಾಲ ದೊಡ್ಡ ಮಟ್ಟದಲ್ಲಿರುವಂತೆ ಕಾಣುವುದರಿಂದ ಉಳಿದ ಆರೋಪಿಗಳಿಗೂ ಹುಡುಕಾಟ ನಡೆಸುತ್ತಿದ್ದಾರೆ.

Last Updated : Mar 4, 2020, 11:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.