ETV Bharat / state

ಪರಿಷತ್​ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್​ ಡೀಟೇಲ್ಸ್​​!

author img

By

Published : Dec 14, 2021, 7:12 PM IST

Updated : Dec 14, 2021, 9:05 PM IST

25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ಬಹು ಸಂಖ್ಯೆಯಲ್ಲಿ ಗೆದ್ದಿದ್ದು, ಜೆಡಿಎಸ್​ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪರಿಷತ್​ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್​ ಡೀಟೇಲ್ಸ್​​!
ಪರಿಷತ್​ ಚುನಾವಣೆ: ಗೆದ್ದ ಅಭ್ಯರ್ಥಿಗಳು ಯಾರ‌್ಯಾರು? ಇಲ್ಲಿದೆ ಫುಲ್​ ಡೀಟೇಲ್ಸ್​​!

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಇದೇ ಮೊದಲ ಬಾರಿಗೆ ಮೇಲ್ಮನೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪ್ರತಿಪಕ್ಷ ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದು,11 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಜೆಡಿಎಸ್‌ 2, ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ 25 ಸ್ಥಾನಗಳ ಜೊತೆ ಹೆಚ್ಚುವರಿಯಾಗಿ 11 ಸ್ಥಾನಗಳನ್ನು ಪಡೆದುಕೊಂಡಿದ್ದು, ತನ್ನ ಸಂಖ್ಯಾ ಬಲವನ್ನು 37 ಕ್ಕೆ ಏರಿಕೆ ಮಾಡಿಕೊಂಡಿದೆ.

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಇದೇ ಮೊದಲ ಬಾರಿಗೆ ಮೇಲ್ಮನೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪ್ರತಿಪಕ್ಷ ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದು,11 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಜೆಡಿಎಸ್‌ 2, ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ 25 ಸ್ಥಾನಗಳ ಜೊತೆ ಹೆಚ್ಚುವರಿಯಾಗಿ 11 ಸ್ಥಾನಗಳನ್ನು ಪಡೆದುಕೊಂಡಿದ್ದು, ತನ್ನ ಸಂಖ್ಯಾ ಬಲವನ್ನು 37 ಕ್ಕೆ ಏರಿಕೆ ಮಾಡಿಕೊಂಡಿದೆ.

ಬೆಂಗಳೂರು ನಗರ, ಶಿವಮೊಗ್ಗ, ಕಲಬುರಗಿ, ಚಿಕ್ಕಮಗಳೂರು, ಕೊಡಗು, ಧಾರವಾಡ, ವಿಜಯಪುರ, ದಕ್ಷಿಣ ಕನ್ನಡ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬೀದರ್, ರಾಯಚೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ವಿಜಯಪುರ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಹಾಸನ ಹಾಗೂ ಮೈಸೂರಿನಲ್ಲಿ ಜೆಡಿಎಸ್, ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

25 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಲಾ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಜೆಡಿಎಸ್ 6 ಸ್ಥಾನಗಳಿಗೆ ಸ್ಪರ್ಧೆ ಮಾಡಿತ್ತು. ಇದೇ 10ರಂದು ಚುನಾವಣೆ ನಡೆದಿತ್ತು. ಹಾಸನದಲ್ಲಿ 2, 281 ಮತಗಳಿಸಿದ ಜೆಡಿಎಸ್ ಅಭ್ಯರ್ಥಿ ಸೂರಜ್‌ ರೇವಣ್ಣ ಜಯ ಸಾಧಿಸಿದ್ದಾರೆ.

ಮೈಸೂರು, ಚಾಮರಾಜನಗರ ದ್ವಿಸದಸ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಟಿ ತಿಮ್ಮಯ್ಯ ಜಯಗಳಿಸಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ದ್ವಿಸದಸ್ಯದಲ್ಲಿ ಬಿಜೆಪಿ ಅಭ್ಯರ್ಥಿ ವೈ. ಎಂ ಸತೀಶ್‌ 757 ಮತಗಳ ಅಂತರದಲ್ಲಿ ಜಯಗಳಿಸಿದರು. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್‌ 350 ಮತಗಳ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ದಾವಣಗೆರೆ, ಚಿತ್ರದುರ್ಗ ದ್ವಿಸದನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್ ನವೀನ್‌ ಒಟ್ಟು 2,629 ಮತಗಳಿಸುವ ಮೂಲಕ 358 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು :

ಕೊಡಗು -– ಸುಜಾ ಕುಶಾಲಪ್ಪ

ಬೆಂಗಳೂರು -– ಗೋಪಿನಾಥ್‌ ರೆಡ್ಡಿ

ಚಿತ್ರದುರ್ಗ - ಕೆ.ಎಸ್‌. ನವೀನ್‌

ಉತ್ತರ ಕನ್ನಡ - ಗಣಪತಿ ಉಳ್ವೇಕರ್

ಬಳ್ಳಾರಿ - ವೈ.ಎಂ.ಸತೀಶ

ಚಿಕ್ಕಮಗಳೂರು -–ಎಂ.ಕೆ.ಪ್ರಾಣೇಶ್

ಶಿವಮೊಗ್ಗ -– ಡಿ.ಎಸ್‌.ಅರುಣ್‌

ಕಲಬುರ್ಗಿ -– ಬಿ.ಜಿ.ಪಾಟೀಲ್‌

ದಕ್ಷಿಣ ಕನ್ನಡ (ದ್ವಿಸದಸ್ಯ) -– ಕೋಟಾ ಶ್ರೀನಿವಾಸ್‌ ಪೂಜಾರಿ

ಧಾರವಾಡ (ದ್ವಿಸದಸ್ಯ) -–ಪ್ರದೀಪ್‌ ಶೆಟ್ಟರ್‌.

ವಿಜಯಪುರ- ಪಿ‌.ಎಚ್.ಪೂಜಾರ್

ಬಿಜೆಪಿಯಲ್ಲಿ ಸೋತ ಪ್ರಮುಖರು ಯಾರು? :

ಬೆಳಗಾವಿ - ಮಹಂತೇಶ್ ಕವಟಗಿಮಠ

ಬೀದರ್ - ಪ್ರಕಾಶ್ ಖಂಡ್ರೆ

ತುಮಕೂರು - ಎನ್. ಲೋಕೇಶ್

ಬೆಂಗಳೂರು ಗ್ರಾಮಾಂತರ - ಬಿ.ಎಂ. ನಾರಾಯಣಸ್ವಾಮಿ

ರಾಯಚೂರು - ವಿಶ್ವನಾಥ್ ಎ. ಬನಹಟ್ಟಿ

ಕೋಲಾರ - ಡಾ.ಕೆ.ಎನ್.ವೇಣುಗೋಪಾಲ್

ಮಂಡ್ಯ - ಮಂಜು ಕೆ.ಆರ್.ಪೇಟೆ

ಹಾಸನ - ವಿಶ್ವನಾಥ್

ಮೈಸೂರು, ಚಾಮರಾಜನಗರ (ದ್ವಿಸದಸ್ಯ) - ರಘು ಕೌಟೀಲ್ಯ.

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು :

ಬೀದರ್‌ – ಭೀಮಾರಾಮ್‌ ಪಾಟೀಲ್‌

ಮಂಡ್ಯ – ಎಂ.ಜಿ. ಗೂಳೀಗೌಡ (ದಿನೇಶ್)

ರಾಯಚೂರು – ಶರಣಗೌಡ ಬಯ್ಯಾಪುರ

ಬೆಂಗಳೂರು ಗ್ರಾಮಾಂತರ – ಎಂ.ಎಸ್‌.ರವಿ

ತುಮಕೂರು – ಆರ್.ರಾಜೇಂದ್ರ

ಕೋಲಾರ – ಅನಿಲ್‌ ಕುಮಾರ್‌

ಮೈಸೂರು (ದ್ವಿಸದಸ್ಯ) – ಡಾ.ಡಿ.ತಿಮ್ಮಯ್ಯ

ಧಾರವಾಡ (ದ್ವಿಸದಸ್ಯ) – ಸಲೀಂ ಅಹಮ್ಮದ್‌

ದಕ್ಷಿಣ ಕನ್ನಡ (ದ್ವಿಸದಸ್ಯ) - ಮಂಜುನಾಥ್‌ ಭಂಡಾರಿ

ಬೆಳಗಾವಿ (ದ್ವಿಸದಸ್ಯ) - ಚನ್ನರಾಜ ಹಟ್ಟಿಹೊಳಿ

ವಿಜಯಪುರ (ದ್ವಿಸದಸ್ಯ) – ಸುನೀಲ್‌ಗೌಡ ಪಾಟೀಲ

ಕಾಂಗ್ರೆಸ್‌ ಸೋತ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು :

ಬಳ್ಳಾರಿ - ಕೆ.ಸಿ.ಕೊಂಡಯ್ಯ

ಬೆಂಗಳೂರು ನಗರ - ಯೂಸುಫ್ ಶರೀಫ್ ( ಕೆಜಿಎಫ್ ಬಾಬು)

ಚಿಕ್ಕಮಗಳೂರು - ಗಾಯತ್ರಿ ಶಾಂತೇಗೌಡ

ಚಿತ್ರದುರ್ಗ - ಬಿ.ಸೋಮಶೇಖರ್

ಕಲಬುರಗಿ - ಶಿವಾನಂದ ಪಾಟೀಲ್

ಹಾಸನ - ಎಂ. ಶಂಕರ್

ಕೊಡಗು - ಮಂಥರ್ ಗೌಡ

ಶಿವಮೊಗ್ಗ - ಆರ್. ಪ್ರಸನ್ನ ಕುಮಾರ್

ಉತ್ತರ ಕನ್ನಡ - ಬೀಮಣ್ಣ ನಾಯ್ಕ್

ಜೆಡಿಎಸ್‌ ಗೆದ್ದ ಕ್ಷೇತ್ರ ಮತ್ತು ಅಭ್ಯರ್ಥಿ :

ಹಾಸನ – ಸೂರಜ್ ರೇವಣ್ಣ

ಮೈಸೂರು - ಸಿ.ಎನ್. ಮಂಜೇಗೌಡ

ಜೆಡಿಎಸ್‍ ಸೋತ ಅಭ್ಯರ್ಥಿಗಳು :

ಮಂಡ್ಯ - ಎನ್. ಅಪ್ಪಾಜಿಗೌಡ

ಕೋಲಾರ - ವಕ್ಕಲೇರಿ ರಾಮು

ಬೆಂಗಳೂರು ಗ್ರಾಮಾಂತರ - ರಮೇಶ್ ಗೌಡ

ತುಮಕೂರು - ಅನಿಲ್ ಕುಮಾರ್

Last Updated : Dec 14, 2021, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.